Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ, ಹಾಲಿ ಪ್ರಧಾನಿ ಆಕ್ರೋಶ
Team Udayavani, Apr 20, 2024, 5:27 PM IST
ಚಿಕ್ಕಬಳ್ಳಾಪುರ: 2ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಹಲವಾರು ಹಗರಣಗಳ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಿ, ದೇಶದ ಖಜಾನೆಯನ್ನು ಬರಿದು ಮಾಡಿ ಕಾಂಗ್ರೆಸ್ ಸರ್ಕಾರ ಮೋದಿ ಅವರ ಕೈಗೆ ಚೊಂಬು ನೀಡಿತ್ತು. ಅದನ್ನು ಅಕ್ಷಯಪಾತ್ರೆ ಮಾಡಿದ ಕೀರ್ತಿ ಸನ್ಮಾನ್ಯ ಮೋದಿಯವರದ್ದು” ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಗೆ ದಿಟ್ಟ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿಯಲ್ಲಿ ಶನಿವಾರ ನಡೆದ ಎನ್ ಡಿಎ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಿ ”ಸಂತ ಕೈವಾರ ತಾತಯ್ಯ, ಸರ್ ಎಂ. ವಿಶ್ವೇಶ್ವರಯ್ಯ ಅವರ ಈ ಭೂಮಿಯಲ್ಲಿ ಜನರ ದರ್ಶನ ಮಾಡಿದ್ದು ನನ್ನ ಸೌಭಾಗ್ಯ.ನನ್ನ ರಿಪೋರ್ಟ್ ಕಾರ್ಡ್‌ನೊಂದಿಗೆ ನಿಮ್ಮ ಆಶೀರ್ವಾದ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. 24/7 ನಿಮಗಾಗಿ, ನನ್ನ ದೇಶಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಲು ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಮತ್ತು ಕೋಲಾರದಲ್ಲಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿ ಎನ್ ಡಿಎ ಗೆ ಬಲ ತುಂಬಲು ಮನವಿ ಮಾಡಿದರು.
ದೇವೇಗೌಡರ ಬದ್ಧತೆ ಕೊಂಡಾಡಿದ ಮೋದಿ
ಪ್ರಚಾರ ಭಾಷಣದ ವೇಳೆ ಪ್ರಧಾನಿ ಮೋದಿ ಅವರು ಜೆಡಿಎಸ್ ವರಿಷ್ಠರಾದ ದೇವೇಗೌಡರು ರಾಜ್ಯದ ಅಭಿವೃದ್ಧಿ ಬಗ್ಗೆ ಹೊಂದಿರುವ ಬದ್ಧತೆ ಹಾಗೂ ಕಳಕಳಿಯನ್ನು ಇದೇ ವೇಳೆ ಕೊಂಡಾಡಿದರು. ದೇವೇಗೌಡರ ಆಶೀರ್ವಾದ ನನಗೆ ಸಿಕ್ಕಿದೆ. ಅವರ ಮಾರ್ಗದರ್ಶನವೂ ಸಿಕ್ಕಿದೆ. ಅವರಿಂದ ನಾನು ಸಾಕಷ್ಟು ಪ್ರೇರಣೆ ಪಡೆದಿದ್ದೇನೆ. ವಯಸ್ಸು 90 ಆದರೂ ಅವರಿಗೆ ಇರುವ ಅಭಿವೃದ್ಧಿ ಪರ ಬದ್ಧತೆ ಎಲ್ಲರೂ ಮೆಚ್ಚಬೇಕೆಂದು ಪ್ರಧಾನಿ ಮೋದಿ ಹೇಳಿದರು.
2ಜಿ ಹಗರಣ, ಕಲ್ಲಿದ್ದಲು ಹಗರಣ ಹೀಗೆ ಹಲವಾರು ಹಗರಣಗಳ ಮೂಲಕ ದೇಶದ ಸಂಪತ್ತನ್ನು ಲೂಟಿ ಮಾಡಿ, ದೇಶದ ಖಜಾನೆಯನ್ನು ಬರಿದು ಮಾಡಿ ಕಾಂಗ್ರೆಸ್ ಸರ್ಕಾರ ಮೋದಿ ಅವರ ಕೈಗೆ ಚೊಂಬು ನೀಡಿತ್ತು.
ಆದರೆ ಕಾಂಗ್ರೆಸ್ ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ ಕೀರ್ತಿ ಸನ್ಮಾನ್ಯ ಮೋದಿಯವರದ್ದು.
– ಶ್ರೀ @H_D_Devegowda, ಮಾಜಿ ಪ್ರಧಾನ… pic.twitter.com/AJmYccuCIv
— BJP Karnataka (@BJP4Karnataka) April 20, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.