ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಚಿತ್ರಮಂದಿರಗಳ ಹೋರಾಟ

ಕೋವಿಡ್ ತಗ್ಗಿದರೂ ಹೆಚ್ಚುತ್ತಿಲ್ಲ ಪ್ರೇಕ್ಷಕರು , ದೊಡ್ಡ ನಟರ ಚಿತ್ರಗಳ ಮೇಲೆ ನಿರೀಕ್ಷೆ , ತೆರಿಗೆ, ವಿದ್ಯುತ್‌ ರಿಯಾಯ್ತಿಗೆ ಆಗ್ರಹ

Team Udayavani, Feb 13, 2021, 3:53 PM IST

ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಚಿತ್ರಮಂದಿರಗಳ ಹೋರಾಟ

ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ತಗ್ಗಿದ ಬಳಿಕ ಸ್ಯಾಂಡಲ್‌ವುಡ್‌ ತಾರೆಯರ ಬೇಡಿಕೆಗೆ ಮಣಿದು ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಗೆ ನಿರ್ಬಂಧಿಸಿದ ಆದೇಶ ವಾಪಸ್‌ ಪಡೆದು ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ್ದರೂ ಸಹ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಮಾಲೀಕರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಇದುವರೆಗೆ ಹೊಸ ಹಾಗೂ ದೊಡ್ಡ ನಟರ ಚಿತ್ರಗಳು ಹೆಚ್ಚು ಬಿಡುಗಡೆಯಾಗಿಲ್ಲ. ರಿಲೀಸ್‌ ಬಳಿಕ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎನ್ನುವುದು ಮಾಲೀಕರ ವಿಶ್ವಾಸ. ಒಟ್ಟಾರೆ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಚಿತ್ರಮಂದಿರಗಳ ಸ್ಥಿತಿಗತಿ ಹೇಗಿದೆ ಎಂಬುವುದರ ಕುರಿತು ವಿಶೇಷ ವರದಿ.

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಎಲ್ಲೆಡೆ ಜನಸಂದಣಿ ಹೆಚ್ಚಾಗಿದೆ. ಆದರೂ ಸಹ ಚಿತ್ರಮಂದಿರಗಳಿಗೆ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಎಷ್ಟು ಸರಿ ಎಂಬುದರ ಕುರಿತು ಸ್ಯಾಂಡಲ್‌ವುಡ್‌ ತಾರೆಯರ ಭಾವನೆ ಗಳನ್ನು ಉದಯವಾಣಿ ಅಭಿಯಾನಕ್ಕೆ ರಾಜ್ಯ ಸರ್ಕಾರಸ್ಪಂದಿಸಿ ಈ ಹಿಂದೆ ಹೇರಿದ್ದ ನಿರ್ಬಂಧ ಸಡಿಲಗೊಳಿಸಿ ಆದೇಶ ಜಾರಿಗೊಳಿಸಿತು. ಆದರೆ ಚಿತ್ರಮಂದಿರಗಳಲ್ಲಿ ಹೊಸ ಹಾಗೂದೊಡ್ಡ ನಟರ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆಯು ಕ್ಷೀಣಿಸಿದೆ.

ಅಭಿಮಾನಿಗಳ ಸಂಘ: ಚಿಕ್ಕಬಳ್ಳಾಪುರದಲ್ಲಿ ಕನ್ನಡದ ಜೊತೆಗೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಈ ಭಾಗದಲ್ಲಿ ತೆಲುಗು ಭಾಷೆಯ ಪ್ರಮುಖ ನಟರ ಹೆಸರಿನಲ್ಲಿ ಅಭಿಮಾನಿಗಳು ಸಂಘಗಳನ್ನು ರಚಿಸಿಕೊಂಡು ಸಮಾಜಸೇವಾಕಾರ್ಯಗಳನ್ನು ಸಹ ನಡೆಸುತ್ತಿರುವುದು ವಿಶೇಷ. ಅಲ್ಲದೇ ವರನಟ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಶ್‌, ರವಿಚಂದ್ರನ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಯಶ್‌ ಇನ್ನಿತರೆ ನಟರ ಹೆಸರಿನಲ್ಲೂ ಅಭಿಮಾನಿಗಳು ಸಂಘ ರಚಿಸಿಕೊಂಡು ಸೇವಾ ಕಾರ್ಯ ನಡೆಸುತ್ತಿದ್ದಾರೆ. ಹೊಸ ಚಿತ್ರಗಳು ಬಿಡುಗಡೆಯಾಗದೆ, ಸಿನಿಪ್ರಿಯರು ಸಹ ಚಿತ್ರಮಂದಿರಗಳತ್ತ ಮುಖ ಮಾಡದ್ದರಿಂದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಚೇತರಿಕೆಗೆ ಪರದಾಟ: ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಸೋಂಕು ಪ್ರವೇಶಿಸಿದ್ದೇ ತಡ ಕೇವಲ ಚಿತ್ರೋದ್ಯಮಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಉದ್ಯಮ ನೆಚ್ಚಿಕೊಂಡು ಜೀವನ ನಡೆಸುವ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಚೇತರಿಸಿಕೊಳ್ಳಲು ಪರದಾಡುವಂತಾಗಿದೆ.

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸಹ ಚಲನಚಿತ್ರ ಮಂದಿರಗಳತ್ತ ದರ್ಶನವಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾಲೀಕರು ಪ್ರತಿನಿತ್ಯ ನಷ್ಟ ಅನುಭವಿಸಿ ಚಿತ್ರಮಂದಿರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

ತೆರಿಗೆ ವಿದ್ಯುತ್‌ ರಿಯಾಯಿತಿ: ಸುಮಾರು 10 ತಿಂಗಳಿಂದ ಚಿತ್ರಮಂದಿರಗಳನ್ನು ಮುಚ್ಚಿ ಆರ್ಥಿಕ ಸಂಕÐ ಎ‌r ದುರಿಸಿರುವ ಮಾಲೀಕರು, ಇದೇ ಪರಿಸ್ಥಿತಿ ಮುಂದುವರಿದರೆ ಚಿತ್ರಮಂದಿರ ನಂಬಿಕೊಂಡಿರುವ ಜೀವನ ಡೋಲಾಯಮನವಾಗಲಿದೆಎಂಬ ಆತಂಕ ಮನೆ ಮಾಡಿದೆ. ಸರ್ಕಾರ ಚಿತ್ರಮಂದಿರಗಳ ಅಭಿ ವೃದ್ಧಿಗಾಗಿ ಕೆಲವೊಂದು ತೆರಿಗೆ ಮತ್ತು ವಿದ್ಯುತ್‌ ರಿಯಾಯಿತಿ ನೀಡುವ ಮೂಲಕ ಸಹಾಯಹಸ್ತ ಚಾಚಬೇಕಾಗಿದೆ.

ಧಾರವಾಹಿಗಳ ಎಫೆಕ್ಟ್: ಸಾಮಾನ್ಯವಾಗಿ ಈ ಹಿಂದೆ ಹೊಸ ಚಿತ್ರ ಬಿಡುಗಡೆಯಾದ ತಕ್ಷಣ ಕುಟುಂಬ ಸದಸ್ಯರು ಚಿತ್ರಮಂದಿರ ಅಥವಾ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ನೋಡುತ್ತಿದ್ದರು. ಇದೀಗಾ ಇಂಟರ್‌ನೆಟ್‌ ಪ್ರಭಾವದಿಂದ ಯೂಟ್ಯೂಬ್‌, ಆ್ಯಪ್‌, ಅಮೆಜಾನ್‌, ಒಟಿಟಿಗಳಲ್ಲಿ ಚಿತ್ರಗಳನ್ನು ನೋಡಿಕೊಳ್ಳುವಂತಹಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಧಾರವಾಹಿಗಳ ಪ್ರಭಾವದಿಂದ ಚಿತ್ರಮಂದಿರಗಳತ್ತ ಸುಳಿಯುವುದೇ ಕಷ್ಟ ಸಾಧ್ಯವಾಗಿದೆ.

ಚಿತ್ರ ವೀಕ್ಷಣೆಗೆ ಆಂಧ್ರದ ಮದನಪಲ್ಲಿಗೆ :

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದೆ ನೆರೆಯ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಹೊಸದಾಗಿ ಬಿಡುಗಡೆಯಾಗುವ ತೆಲುಗು ಚಿತ್ರವನ್ನು ನೋಡಲು ಇಲ್ಲಿಂದ ಜನ ಹೋಗ್ತಾರೆ. ನಮ್ಮಲ್ಲಿರುವ ಚಿತ್ರಮಂದಿರಗಳಲ್ಲಿ ಮ್ಯೂಸಿಕ್‌ ಸಿಸ್ಟಮ್‌ ಸರಿಹೋಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕೆಂದು ಸಿನಿಪ್ರಿಯರ ಆಗ್ರಹವಾಗಿ¨.

ಶಿಡ್ಲಘಟ್ಟ: ಆರ್ಥಿಕ ಸಂಕಷ್ಟ ನಡುವೆಯೂ ಅಸ್ತಿತ್ವ :

ಶಿಡ್ಲಘಟ್ಟ ತಾಲೂಕಿನಲ್ಲಿ 03 ಚಿತ್ರಮಂದಿರಗಳಿವೆ. 1960ರಲ್ಲಿ ಆರಂಭವಾಗಿದ್ದ ಶಂಕರ್‌ ಚಿತ್ರಮಂದಿರ ಬಳಿಕ 1970 ರಲ್ಲಿವಿಜಯಲಕ್ಷ್ಮೀಯಾಗಿ ಪರಿವರ್ತನೆಗೊಂಡು 1975ರಲ್ಲಿ ಮಾರಾಟವಾಗಿತ್ತು. ಖರೀದಿಸಿದವರು 2014ರವರೆಗೆ ವಿವಿಧ ಭಾಷೆಗಳ ಚಿತ್ರಗಳನ್ನು ಪ್ರದರ್ಶನ ಮಾಡಿ ನಿರ್ವಹಣೆ ಮಾಡಲು ಸಾಧ್ಯವಾಗದೆ ನಷ್ಟ ಎದುರಿಸಿ 2014 ರಲ್ಲಿ ಮಾರಾಟವಾಗಿ 2016 ರಲ್ಲಿ ಚಿತ್ರಮಂದಿರವನ್ನು ನೆಲಸಮಗೊಳಿಸಲಾಗಿದೆ. 1980ರಲ್ಲಿ ಸ್ಥಾಪನೆಯಾದ ಶ್ರೀ ವೆಂಕಟೇಶ್ವರ ಮತ್ತು ಮಯೂರ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆ ಮತ್ತು ಆರ್ಥಿಕ ಸಂಕಷ್ಟಗಳ ನಡೆವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಿನಿಪ್ರಿಯರಿಗೆ ಚಿತ್ರಗಳನ್ನು ತೋರಿಸಿ ಮನರಂಜನಾ ಕೇಂದ್ರಗಳನ್ನು ಉಳಿಸಿಕೊಂಡಿದ್ದಾರೆ

ಚಿಂತಾಮಣಿ: ಬದಲಾವಣೆ ತಂದರೂ ಪ್ರೇಕ್ಷಕರು ಬರುತ್ತಿಲ್ಲ :

ಚಿಂತಾಮಣಿ ತಾಲೂಕಿನಲ್ಲಿ 04 ಚಿತ್ರಮಂದಿರಗಳ ಪೈಕಿ ಈಗಾಗಲೇ ಡೈಮಾಂಡ್‌ ಎಂಬ ಚಿತ್ರಮಂದಿರ ಮುಚ್ಚಿ ಹೋಗಿದೆ. ಎಸ್‌ಎಲ್‌ಎನ್‌, ಆದರ್ಶ, ಅಂಜನಿ ಚಿತ್ರಮಂದಿರಗಳ ಪೈಕಿ ಕೊರೊನಾ ಸೋಂಕಿನ ಪ್ರಭಾವದ ಮೊದಲೇ ಆದರ್ಶ್‌ ಚಿತ್ರಮಂದಿರದಲ್ಲಿ ಪ್ರದರ್ಶನ ನಿಂತು ಹೋಗಿತ್ತು. ಇನ್ನುಳಿದಿರುವ ಅಂಜನಿ ಮತ್ತು ಎಸ್‌ಎಲ್‌ಎನ್‌ ಚಿತ್ರಮಂದಿರಗಳಲ್ಲಿ ಮಾತ್ರಚಿತ್ರ ಪ್ರದರ್ಶನ ಮಾಡುತ್ತಿದ್ದು, ಅಲ್ಲಿಯೂ ಸಹ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಪ್ರೇಕ್ಷಕರನ್ನು ಅಥವಾ ಸಿನಿಪ್ರಿಯರನ್ನು ಆಕರ್ಷಿಸಲು ಅನೇಕ ರೀತಿಯ ಬದಲಾವಣೆ ತಂದರೂ ಸಹ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಜನಪ್ರಿಯ ನಟರ ಚಿತ್ರಗಳು ಬಿಡುಗಡೆಯಾಗುವವರೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಗೌರಿಬಿದನೂರು ಶಂಕರ್‌-ಅಭಿಲಾಷ್‌ ಪ್ರದರ್ಶನ :

ಗೌರಿಬಿದನೂರು ತಾಲೂಕಿನಲ್ಲಿ 04 ಚಿತ್ರ ಮಂದಿರಗಳ ಪೈಕಿ ಈಗಾಗಲೇ ನಟರಾಜ, ಪುಷ್ಪಾಂಜಲಿ ಚಿತ್ರಮಂದಿರವನ್ನು ಕೋವಿಡ್ ಪ್ರಭಾವದ ಮೊದಲೇ ಮುಚ್ಚಲಾ ‌ಗಿದೆ. ನಟರಾಜ ಈಗಾಗಲೇ ಅಸ್ತಿತ್ವ ಕಳೆದುಕೊಂಡಿದ್ದು, ಪುಷ್ಪಾಂಜಲಿಯಲ್ಲಿ ಪ್ರದರ್ಶನ ಸ್ಥಗಿತಗೊಂಡಿದೆ. ಇನ್ನುಳಿದಿರುವ ಶಂಕರ್‌ ಮತ್ತು ಅಭಿಲಾಷ್‌ ಚಿತ್ರಮಂದಿರಗಳಲ್ಲಿಮಾತ್ರ ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪ್ರದರ್ಶನ ನಡೆಸಲಾಗುತ್ತಿದ್ದು, ಇಲ್ಲಿಯೂ ಸಹ ಹೊಸ ಹಾಗೂ ದೊಡ್ಡ ನಟರ ಚಿತ್ರಗಳ ಬಿಡುಗಡೆಗೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ಚಿಕ್ಕಬಳ್ಳಾಪುರ: ಗಾಯತ್ರಿ, ಬಾಲಾಜಿ, ಕೃಷ್ಣದಲ್ಲಿ ಪ್ರದರ್ಶನ :

ಚಿಕ್ಕಬಳ್ಳಾಪುರ ನಗರದ ವಾಣಿ ಚಿತ್ರಮಂದಿರ ಕೋವಿಡ್  ಸೋಂಕಿನ ಪ್ರಭಾವ ಬೀರುವ ಮುನ್ನವೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ವಾಣಿ ಚಿತ್ರಮಂದಿರದಲ್ಲಿ ಒಂದು ಜಮಾನಾದಲ್ಲಿ ಪ್ರೇಕ್ಷರಿಂದತುಂಬಿ ತುಳುಕಾಡುತ್ತಿತ್ತು ಆದರೆ ಚಿತ್ರಪ್ರೇಮಿಗಳ ಅತ್ಯಾಧುನಿಕ ಸೌಲಭ್ಯಗಳುಳ್ಳ ಚಿತ್ರಮಂದಿರಗಳಿಗೆ ಮುಖಮಾಡಿದ ಬಳಿಕ ಪ್ರೇಕ್ಷಕರ ಸಂಖ್ಯೆ ದಿನೇ ದಿನೆ ಕಡಿಮೆಯಾಗಿಹೂಡಿದ್ದ ಬಂಡವಾಳ ಕೈಗಟುಕದೆ ಕೊನೆಗೂ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ನಗರದ ಶ್ರೀ ಬಾಲಾಜಿ, ಕೃಷ್ಣ ಹಾಗೂ ಗಾಯತ್ರಿ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ನಡೆಯುತ್ತಿದೆ.

ಅಭಿಲಾಷ್‌ಗೆ ಡಾ.ರಾಜ್‌ಕುಮಾರ್‌ ಭೇಟಿ :

ವರನಟ ಡಾ.ರಾಜ್‌ಕುಮಾರ್‌ ಮತ್ತು ಅವರ ಕುಟುಂಬ ಸದಸ್ಯರಿಗೆ ಗೌರಿಬಿದನೂರು ತಾಲೂಕಿನ ಮೇಲೆ ಅಚ್ಚುಮೆಚ್ಚಿನ ಪ್ರೀತಿ. ಏಕೆಂದರೆ ಗೌರಿಬಿದನೂರಿನ ಅಭಿಲಾಷ್‌ ಚಿತ್ರಮಂದಿರದಲ್ಲಿ ಚಲಿಸುವ ಮೋಡಗಳು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಡಾ. ರಾಜ್‌ ಕುಮಾರ್‌ ಅವರು ಗೌರಿಬಿದನೂರಿನ ಅಭಿಲಾಷ್‌ಚಿತ್ರಮಂದಿರಕ್ಕೆ ಬಂದಿದ್ದು ವಿಶೇಷ. ಅಲ್ಲದೇ ಶಂಕರ್‌ ಚಿತ್ರಮಂದಿರದಲ್ಲಿಜನುಮದ ಜೋಡಿ ಶತದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಡಾ. ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್‌ ಬಂದು ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡರು.

ಶಾಶ್ವತ ಪರಿಹಾರ ಬೇಕು :

ದೊಟ್ಟ ನಟರ ಹೊಸ ಚಿತ್ರಗಳು ಬಿಡುಗಡೆಯಾದರೆ ಮಾತ್ರ ಚಿತ್ರಮಂದಿರಗಳು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಸರ್ಕಾರ ಸಹ ಚಿತ್ರೋದ್ಯಮ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿತು ಶಾಶ್ವತವಾಗಿ ಪರಿಹಾರವನ್ನು ಒದಗಿಸಬೇಕಾಗಿದೆ. – ರಾಮಕಿಟ್ಟಿ, ಮಯೂರ,ಚಿತ್ರಮಂದಿರ ಮಾಲೀಕರು ಶಿಡ್ಲಘಟ್ಟ

ದೊಡ್ಡ ನಟರ ಚಿತ್ರಕ್ಕೆ ಕಾತರ :

ಕೋವಿಡ್ ಸೋಂಕು ನಿಯಂತ್ರಣ ಬಳಿಕ ರಾಜ್ಯ ಸರ್ಕಾರ ಪ್ರೇಕ್ಷಕರ ಸಂಖ್ಯೆ ನಿರ್ಬಂಧದ ಆದೇಶ ತೆರವುಗೊಳಿಸಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿದೊಡ್ಡ ನಟರ ಚಿತ್ರಗಳು ಬಿಡುಗಡೆಯಾದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ವೇಣುಗೋಪಾಲ್‌, ವ್ಯವಸ್ಥಾಪಕರು, ಬಾಲಾಜಿ ಚಿತ್ರಮಂದಿರ

ಹೊಸ ವ್ಯವಸ್ಥೆ ಅಗತ್ಯ :

ಕೋವಿಡ್ ಸೋಂಕಿನ ಭೀತಿ ಪ್ರಸ್ತುತ ತಗ್ಗಿದೆ. ಹೊಸ ಹಾಗೂ ದೊಡ್ಡ ನಟರ ಚಿತ್ರಗಳು ರಿಲೀಸ್‌ ಆದರೆ ಪ್ರೇಕ್ಷಕರು ಸಹ ಹೋಗುತ್ತಾರೆ. ಚಿತ್ರಮಂದಿರಗಳಲ್ಲಿ ಹೊಸ ಹೊಸವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ ಚಿತ್ರ ವೀಕ್ಷಣೆಗೆ ಮಾಲ್‌ ಅಥವಾ ನೆರೆ ರಾಜ್ಯಗಳಿಗೆ ಹೋಗುವುದಿಲ್ಲ. ನರಸಿಂಹ (ಎನ್‌.ಟಿ.ಆರ್‌), ಚಿತ್ರಪ್ರೇಮಿ ಶಿಡ್ಲಘಟ್ಟ

ಬದಲಾವಣೆ ಆಗಿಲ್ಲ :

ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಗಳಿಂದ ಚಿತ್ರೋದ್ಯಮ ಕುಂಠಿತಗೊಂಡಿದೆ. ಕೋವಿಡ್ ಬರುವುದಕ್ಕೆ ಮುನ್ನ ಹಾಗೂ ನಂತರ ಸಹ ಒಂದೇ ರೀತಿಯ ವಾತಾವರಣ ಇದ್ದು ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ. ಮುನಿಶಾಮಿರೆಡ್ಡಿ, ಅಂಜಿನಿ ಚಿತ್ರಮಂದಿರ ಮಾಲಿಕ, ಚಿಂತಾಮಣಿ.

ಹೊಸ ಚಿತ್ರಗಳ ನಿರೀಕ್ಷೆ :

ಕೋವಿಡ್ ಬಂದ ನಂತರ ಚಿತ್ರಮಂದಿರಗಳ ನಿರ್ವಹಣೆ ಕಷ್ಟವಾಗಿದೆ. ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಬರುವುದೂ ಕೂಡ ಕಡಿಮೆಯಾಗಿದ್ದು, ಹೊಸ ಚಿತ್ರಗಳು ಬಿಡುಗಡೆ ಆದರೆ ಮಾತ್ರ ಪ್ರೇಕ್ಷಕರ ಸಂಖ್ಯೆ ಹೆಚ್ಚಳವಾಗಲಿದೆ. ಹರೀಶ್‌, ವ್ಯವಸ್ಥಾಪಕರು, ಎಸ್‌ಎಲ್‌ಎನ್‌ ಚಿತ್ರಮಂದಿರ, ಚಿಂತಾಮಣಿ.

10-15 ಜನಕ್ಕೆ ಸೀಮಿತ :

ಇಂಟರ್‌ನೆಟ್‌ ಪ್ರಭಾವದಿಂದ ಹೊಸ ಚಿತ್ರಗಳು ರಿಲೀಸ್‌ ಆದ ಕೆಲವೇ ದಿನಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಮನೆಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳಲ್ಲಿಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಆಕರ್ಷಿಸಲು ಹೊಸಆಸನ ಮತ್ತು ಸೌಲಭ್ಯ ಒದಗಿಸಿದ್ದರೂ ಪ್ರೇಕ್ಷಕರ ಸಂಖ್ಯೆ 10-15-20ಕ್ಕೆ ಸೀಮಿತವಾಗಿದೆ. ಪ್ರಕಾಶ್‌, ವೆಂಕಟೇಶ್ವರ ಚಿತ್ರಮಂದಿರ ಮಾಲೀಕರು ಶಿಡ್ಲಘಟ್ಟ

ಅಸ್ತಿತ್ವಕ್ಕೆ ಸವಾಲು :

ಇಂಟರ್‌ನೆಟ್‌ ಮತ್ತು ಮೊಬೈಲ್‌ ಪ್ರಭಾವದಿಂದ ಸಿನಿಮಾ ಥಿಯೇಟರ್‌ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಮನೆಗಳಲ್ಲಿ ದೊಡ್ಡ ದೊಡ್ಡ ಟಿವಿಗಳನ್ನು ಇಟ್ಟುಕೊಂಡು ಮನೆಯಲ್ಲೇ ಸಿನಿಮಾ ನೋಡುವುದರಿಂದ ಚಿತ್ರಮಂದಿರಗಳ ಅಸ್ತಿತ್ವಕ್ಕೆ ಸವಾಲಾಗಿದೆ. ಸತೀಶ್‌, ವ್ಯವಸ್ಥಾಪಕರು ಶಂಕರ್‌ ಚಿತ್ರಮಂದಿರ ಗೌರಿಬಿದನೂರು.

ಸರ್ಕಾರ ಸ್ಪಂದಿಸಲಿ :

ರಾಜ್ಯ ಸರ್ಕಾರ ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಪ್ರೇಕ್ಷಕರ ಸಂಖ್ಯೆಯ ಮೇಲೆ ಹೇರಿದ್ದ ನಿರ್ಬಂಧ ಸಡಿಲಗೊಳಿಸಿದ್ದರಿಂದ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಸರ್ಕಾರ ಸಹ ಚಿತ್ರಮಂದಿರಗಳ ಮಾಲೀಕರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲಿ. ಜಿ.ಎನ್‌.ಸುರಾಜ್‌, ಮಾಲೀಕರು ಅಭಿಲಾಷ್‌, ಚಿತ್ರಮಂದಿರ ಗೌರಿಬಿದನೂರು.

 

 -ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

10-gudibande

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.