ಡೀಸಿ ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಸುರಿಮಳೆ
ನಿವೇಶನ ಹಂಚಿಕೆಗೆ ಹೊಸರೂಪ ನೀಡಲು ಜಿಲ್ಲಾಡಳಿತ ಸಂಕಲ್ಪ!ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಂದ ಕಾಲಾವಕಾಶ
Team Udayavani, Feb 25, 2021, 7:11 PM IST
ಚಿಕ್ಕಬಳ್ಳಾಪುರ: ಹೆಸರಿಗೊಂದು ಸಾಮಾಜಿಕ ಭದ್ರತೆ. ಹಲವು ತಿಂಗಳಿಂದ ಪಿಂಚಣಿ ಬರುತ್ತಿಲ್ಲ, ದೇಶಾದ್ಯಂತ ಸ್ವತ್ಛಭಾರತ ಅಭಿಯಾನ ನಡೆಸಿದರೂ ಗ್ರಾಮಗಳಲ್ಲಿ ತಿಪ್ಪೆಗುಂಡಿಗಳಿಗೆ ಮುಕ್ತಿ ಇಲ್ಲ. ಸುಮಾರು ವರ್ಷಗಳಿಂದ ಗುಡಿಸಲಲ್ಲಿ ವಾಸ ಮಾಡುತ್ತಿದ್ದು ಸೂರಿನ ಭಾಗ್ಯವಿಲ್ಲ, ಸರ್ಕಾರಿ ಜಮೀನು- ರಾಜ ಗಾಲುವೆ ಬಲಾಡ್ಯರ ಪಾಲಾಗುತ್ತಿದೆ, ಒತ್ತುವರಿ ತೆರವು ಮಾಡುವ ಇಚ್ಛಾಶಕ್ತಿಯನ್ನು ಅಧಿಕಾರಿಗಳು ತೋರುತ್ತಿಲ್ಲ….
ಈ ಸಮಸ್ಯೆಗಳು ಕೇಳಿ ಬಂದಿದ್ದು ಜಿಲ್ಲಾಧಿಕಾರಿಗಳು ನಡೆಸಿದ ಗ್ರಾಮ ವಾಸ್ತವ್ಯದಲ್ಲಿ. ಜಿಲ್ಲೆಯಲ್ಲಿ ಜನಸಾಮಾನ್ಯರ ಕುಂದುಕೊರತೆ ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ “ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮಗಳ ಕಡೆಗೆ’ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದು ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಗ್ರಾಮ ವಾಸ್ತವ್ಯ ಮಾಡಿದರೆ, ಇನ್ನುಳಿದಂತೆಚಿಕ್ಕಬಳ್ಳಾಪುರ,ಬಾಗೇಪಲ್ಲಿ, ಚಿಂತಾಮಣಿ, ಗುಡಿ ಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ ಆಯಾ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.
ಕಾಲಾವಕಾಶ ಕೋರಿದ ಅಧಿಕಾರಿಗಳು: ಗ್ರಾಮ ವಾಸ್ತವ್ಯ ಕಾಟಾಚಾರವಾಗಬಾರದು ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹ ಗ್ರಾಮ ವಾಸ್ತವ್ಯ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಅಲ್ಲದೇ, ಗ್ರಾಮದಲ್ಲಿ ಜನರೊಂದಿಗೆ ಗ್ರಾಮ ದರ್ಶನ ಮಾಡಿ ಸಮಸ್ಯೆ ಅರಿತಿದ್ದು ಸಮಸ್ಯೆ ಪರಿಹರಿಸಲು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ಗ್ರಾಮಸ್ಥರೂ ಸಹಮತ ವ್ಯಕ್ತಪಡಿಸಿ ಜಿಲ್ಲಾ ಮತ್ತು ತಾಲೂಕು ಆಡಳಿತ ನಡೆಸಿದ ಗ್ರಾಮ ವಾಸ್ತವ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಗ್ರಾಮದಲ್ಲಿ ಅಧಿಕಾರಿಗಳನ್ನು ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಲಂಚಕ್ಕೆ ಕೈಚಾಚುತ್ತಾರೆ:ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಹುತೇಕ ವಯೋವೃದ್ದರು ಪಿಂಚಣಿ ಸಮಸ್ಯೆ ಪ್ರಸ್ತಾಪಿಸಿದರು. ಕೆಲವರು ಅಂಚೆ ಪೇದೆಗಳು ಮಾಸಾಶನ ಹಣ ನೀಡಲು ಲಂಚಕ್ಕೆ ಕೈ ಚಾಚುತ್ತಾರೆ ಎಂದು ಆರೋಪಿಸಿದರು. ಇನ್ನೂ ಹಲವರು ಪಿಂಚಣಿಗೆ ಆಧಾರ್‌ಲಿಂಕ್ ಮಾಡಿಲ್ಲವೆಂದು ಪಿಂಚಣಿ ನಿಲ್ಲಿಸಿದ್ದಾರೆ. ಇದರಿಂದ ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಧಿಕಾರಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಪಹಣಿ ಮತ್ತು ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡುತ್ತಾರೆ. ಆದರೇ ಸೂಕ್ತ ಆಧಾರ ನೋಂದಣಿ ಕೇಂದ್ರವಿಲ್ಲದೆ ನಾಗರಿಕರು ಮತ್ತು ವಯೋವೃದ್ದರು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.ಸರ್ಕಾರಿ ಜಮೀನು ಸಂರಕ್ಷಣೆಗೆ ಸರ್ಕಾರ ಅನೇಕ ಕಾಯ್ದೆ ಜಾರಿಗೊಳಿಸಿದರೂ ಬಲಾಡ್ಯರು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಸರ್ಕಾರಿ ಜಮೀನು, ರಾಜಗಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರು.
ಅಲ್ಲದೇ, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರಿಗೆ ಬೆವರಿಳಿಸಿದರು. ಗ್ರಾಮಸ್ಥರ ಅಹವಾಲುಆಲಿಸಿದ ಅಧಿಕಾರಿಗಳು ವಾರ, ಹತ್ತು ದಿನಗಳಲ್ಲಿ ಒತ್ತುವರಿ ತೆರವುಗೊಳಿಸುವ ಭರವಸೆ ನೀಡಿದರು.
ನಿವೇಶನ ನೀಡುವ ಯೋಜನೆಗೆ ಚಾಲನೆ: ಗ್ರಾಮ ವಾಸ್ತವ್ಯದಲ್ಲಿ ಬಡವರು ತಮಗೆ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕೆಂದು ಮಾಡಿದ ಮನವಿಗೆ ಜಿಲ್ಲಾಧಿಕಾರಿ ಲತಾ ಸ್ಪಂದಿಸಿ ಪ್ರತಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಸರ್ಕಾರಿ ಜಮೀನು ಮಂಜೂರು ಮಾಡಿ ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
MUST WATCH
ಹೊಸ ಸೇರ್ಪಡೆ
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
Prabhutva Movie: ಮತದಾನದ ಮಹತ್ವ ತಿಳಿಸುವ ಪ್ರಭುತ್ವ…
Sandalwood: ಕನ್ನಡ ಚಿತ್ರರಂಗಕ್ಕಾಗಿ ಮಿಥ್ ಎಫ್ಎಕ್ಸ್ ಆರಂಭ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.