![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 14, 2019, 3:47 PM IST
ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದ ಮೇಲೆ ಅಲ್ಲಿಯೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರು ಎಲ್ಲಿದ್ಧರೂ ಬ್ಲಾಕ್ ಮೇಲ್ ಗಿರಾಕಿಗಳೆಂದು ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಟೀಕಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಅವರು ಬ್ಲಾಕ್ ಮೇಲ್ ಶುರುವು ಮಾಡಿದ್ದಾರೆ. ಸೋತವರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಬೇಕೆಂದು ಇವರು ಯಡಿಯೂರಪ್ಪ ಬಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದು ನ್ಯಾಯವೇ? ಈ ರೀತಿಯಾದರೆ ಎಲ್ಲಿದೆ ಪ್ರಜಾಪ್ರಭುತ್ವ ಎಂದು ಶಿವಶಂಕರರೆಡ್ಡಿ ಪ್ರಶ್ನಿಸಿದರು.
ಇವರ ಬ್ಲಾಕ್ ಮೇಲ್ ರಾಜಕಾರಣದಿಂದ ಬಿಜೆಪಿ ಪಕ್ಷದಲ್ಲಿ 25, 30 ವರ್ಷ ಕಾಲ ದುಡಿದು ಸಚಿವರಾಗುವ ಅರ್ಹತೆ ಇದ್ದರೂ ಅನೇಕ ಹಿರಿಯ ಮುಖಂಡರು ಸಚಿವ ಸ್ಥಾನ ವಂಚಿತರಾಗುತ್ತಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಹೆಚ್ಚು ದಿನ ಉಳಿಯವ ಲಕ್ಷಣಗಳು ಕಾಣುತ್ತಿಲ್ಲ ಎಂದರು.
ರಾಜ್ಯ ಬಿಜೆಪಿ ಸರ್ಕಾರ, ಬರೀ ಅಧಿಕಾರ ಹಾಗೂ ಚುನಾವಣೆ ನಡೆಸಲು ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಈ ಸರ್ಕಾರಕ್ಕೆ ಯಾವುದೇ ಜನಪರವಾದ ಅಭಿವೃದ್ಧಿ ಕಾಳಜಿ ಇಲ್ಲ ಎಂದು ಶಿವಶಂಕರ ರೆಡ್ಡಿ ಟೀಕಿಸಿದರು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.