ಪರಿಸರ ಸಂರಕ್ಷಣೆ ಅಗತ್ಯ: ನರೋತ್ತಮಾನಂದ ಸ್ವಾಮಿ
Team Udayavani, Feb 23, 2021, 3:28 PM IST
ಪಾತಪಾಳ್ಯ: ಪರಿಸರ ಸಂರಕ್ಷಣೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸುಂದರ ಸಮಾಜ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹೃಷಿಕೇಶ ಆಶ್ರಮದ ನರೋತ್ತಮಾನಂದ ಸ್ವಾಮಿ ಹೇಳಿದರು.
ಆಚಗಾನಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಪರಿಸರ ಮಹತ್ವದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ಪೂರ್ವಜರು ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿದ್ದರು. ಪರಿಸರವನ್ನು ಪೂಜ್ಯಭಾವದಿಂದ ನೋಡುತ್ತಿದ್ದರು. ಆದರೆ ಇಂದು ಮಾಯವಾಗುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ.
ಕಾಡು ನಾಶ ಮಾಡುವುದು ಸುಲಭ, ಬೆಳೆಸುವುದು ಕಠಿಣ. ಮಾನವಪರಿಸರ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ವಾತಾವರಣದಲ್ಲಿ ಉಷ್ಣತೆಪ್ರಮಾಣ ಅಧಿಕಗೊಂಡಿದೆ. ಪರಸರ ಸಮತೋಲನಕ್ಕೆ ಭಂಗ ತಂದರೆ ನಮ್ಮನ್ನುನಾವೇ ನಾಶ ಮಾಡಿಕೊಂಡಂತೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಬಿ.ಎನ್.ಸೀನಪ್ಪ, ಶಿಕ್ಷಕರಾದ ಚಂದ್ರಶೇಖರಲಂಬಾಣಿ, ಟಿ.ದೇವೇಂದ್ರನಾಯ್ಕ, ಎನ್.ನಾಗರಾಜ್, ಸಿ.ಎಸ್.ಆಂಜಿನೇಯ, ಬಾಬು, ದೈಹಿಕ ಶಿಕ್ಷಣ ಶಿಕ್ಷಕ ಬಿ.ಎನ್.ಮಾರುತಿ ಇದ್ದರು.
ದೊಡ್ಡಗುಟ್ಟಹಳ್ಳಿಯಲ್ಲಿ ಉಕ್ಕಿ ಹರಿದ ಕೊಳವೆ ಬಾವಿ :
ಚಿಂತಾಮಣಿ: ಸಾವಿರಾರು ಅಡಿ ಕೊರೆದರೂದೊರೆಯದ ನೀರು ತಾಲೂಕಿನ ದೊಡ್ಡಗುಟ್ಟ ಹಳ್ಳಿಯ ಆನಂದ ಎಂಬುವರ ಕೊಳವೆಬಾವಿಯಲ್ಲಿ ಉಕ್ಕಿ ಹರಿಯುತ್ತಿರುವುದು ಆಶ್ಚರ್ಯ ಮೂಡುವಂತಾಗಿದೆ.
ಬರದ ನಾಡು ಕೊಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ರೈತರುನೀರಿಗಾಗಿ ಪರದಾಡುತ್ತಿರುವುದು ಸರ್ವೆ ಸಮಾನ್ಯವಾಗಿತ್ತು. ಆದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ಸುರಿದ ಜಡಿಮಳೆಯಿಂದ ಕೆರೆಕುಂಟೆ ಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದ್ದು, ಇದರಿಂದ ಕೆಲ ಕೊಳವೆಬಾವಿಗಳು ರೀಚಾರ್ಜ್ ಆಗಿರು ವುದು ಸಾಮಾನ್ಯವಾಗಿದೆ. ಆದರೆ ತಾಲೂಕಿನ ಚಿಲಕಲನೇಪು ಹೋಬಳಿಯ ದೊಡ್ಡಗುಟ್ಟಹಳ್ಳಿ ಬಳಿ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯು ತ್ತಿರುವುದು ಆಶ್ಚರ್ಯಕರವಾಗಿದೆ.
2 ಕೊಳವೆಬಾವಿಗಳಲ್ಲಿ ಹರಿದ ನೀರು: ದೊಡ್ಡ ಗುಟ್ಟಹಳ್ಳಿಯ ಆನಂದ್ ಬಿನ್ ವೆಂಕಟರವಣಪ್ಪ ಎಂಬುವರು ಕೆಲ ವರ್ಷಗಳ ಹಿಂದೆ 1100 ಅಡಿ ಕೊರೆಸಿದ್ದು, ಸದರಿ ಕೊಳವೆಬಾವಿ ಕೆಲದ ದಿನಗಳ ನಂತರ ನಿಂತು ಹೋಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಆದ್ದರಿಂದಆನಂದ್ ಕಳೆದ ಡಿ.29 ರಂದು 190 ಅಡಿಯಷ್ಟು ಮತ್ತೂಂದು ಕೊರೆಸಿದ್ದಾರೆ. ಇದರಲ್ಲಿ ನೀರು ಸಾಕಷ್ಟು ಬಂದಿದ್ದರಿಂದ ಮೋಟಾರ್ ಪಂಪುಅಳವಡಿಸಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದು, ಕೆಲವೇದಿನಗಳಲ್ಲೇ ಕೊಳವೆ ಬಾವಿಯಲ್ಲಿ ನೀರು ಉಕ್ಕಿಹರಿದಿದೆ. ಈ ಹಿಂದೆ ಕೊರೆಸಿದ್ದ 1100 ಅಡಿಯಕೊಳವೆ ಬಾವಿಯಲ್ಲೂ ಸಹ ನೀರು ಉಕ್ಕಿ ಹರಿಯುತ್ತಿರುವುದು ಆನಂದ್ ಅವರ ಸಂಭ್ರಮಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.