ಚಿಕ್ಕಬಳ್ಳಾಪುರ ಎಸಿಬಿ ದಾಳಿಗೆ ಹೊಸ ತಿರುವು: ಈ ಶಾಸಕರಿಗೆ ಕೊಡಬೇಕಂತೆ ಐದು ಲಕ್ಷ
Team Udayavani, Oct 18, 2019, 12:26 PM IST
ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮತ್ತು ರಂಗಪ್ಪ ( ಒಳಚಿತ್ರದಲ್ಲಿ)
ಚಿಕ್ಕಬಳ್ಳಾಪುರ: ಕಳೆದ ಗುರುವಾರ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಲಂಚ ಸ್ವೀಕರಿಸಿರುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಪ್ರಾಧಿಕಾರ ಸದಸ್ಯ ಕೃಷ್ಣಪ್ಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಸದ್ಯ ಪ್ರಾಧಿಕಾರದಿಂದ ಶೇ 40 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು 8 ಲಕ್ಷಕ್ಕೆ ಬೇಡಿಕೆ ಇಟ್ಟು ಕಚೇರಿಯಲ್ಲಿ 3 ಲಕ್ಷ ರೂ. ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಕೃಷ್ಣಪ್ಪ, ಎಂಎಲ್ಎಯೋರ್ವರಿಗೆ 5 ಲಕ್ಷ ರೂ, ನೀಡಬೇಕೆಂದಿರುವುದು ಸಾಕಷ್ಟು ಕುತೂಹಲ ಕೆರಳಿಸಿದ್ದು, ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ.
ಈ ಬಗ್ಗೆ ಕೃಷ್ಣಪ್ಪ- ದೂರುದಾರ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಮಾಡಲಾಗಿದೆಯೆಂದು ಎಸಿಬಿ ಅಧಿಕಾರಿಗಳು ಎಫ್ ಐಆರ್ ನಲ್ಲಿ ನಮೂದಿಸಿದ್ದು, ಹೆಸರು ಪ್ರಸ್ತಾಪಿಸದೇ ಶಾಸಕರು ಎಂದು ಉಲ್ಲೇಖಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಹೆಗಡೆ ನಗರದ ನಿವಾಸಿ ರಾಮಾಂಜಿನಪ್ಪ ಸಂಬಂಧಿಯೊಬ್ಬರು ಚಿಕ್ಕಬಳ್ಳಾಪುರ ತಾಲೂಕಿನ ಕುಪ್ಪಳ್ಳಿ ಸಮೀಪ ನಿರ್ಮಿಸಿದ ಬಡಾವಣೆಯಲ್ಲಿ ಶೇ.40ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಕೃಷ್ಣಪ್ಪ 8 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಕಚೇರಿಯಲ್ಲಿ ತಮ್ಮ ಅಪ್ತ ಅಚ್ಯುತ್ ಕುಮಾರ್ ಮುಖಾಂತರ ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.