ನಿಯಮ ಉಲ್ಲಂಘಿಸಿದವರಿಗೆ ಡೀಸಿ ತರಾಟೆ


Team Udayavani, Apr 30, 2021, 2:41 PM IST

news held at chikkaballapura

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಕಾಣಿಸಿಕೊಂಡು ಹೋಂ ಐಸೋಲೇಷನ್‌ನಲ್ಲಿರುವ ಜನ ಮನೆಯಿಂದ ಹೊರ ಬಂದರೇ ಪ್ರಕರಣ ದಾಖಲಿಸಿ ಕಾನೂನುರೀತಿಯ ಕ್ರಮ ಜರುಗಿಸಲಾಗುವುದು ಎಂದುಜಿಲ್ಲಾಧಿಕಾರಿ ಆರ್‌.ಲತಾ ಖಡಕ್‌ ಎಚ್ಚರಿಕೆ ನೀಡಿದರು.

ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್‌ಸಮಿತಿಗಳ ಕಾರ್ಯ ವೈಖರಿ ಪರಿಶೀಲಿಸಿ ಮಾತನಾಡಿದ ಅವರು, ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.ನಾಗರಿಕರು ಸಹ ಅದಕ್ಕೆ ‌ಪೂರಕವಾಗಿ ಸಹಕಾರ ನೀಡಬೇಕು, ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದುಹೇಳಿದರು.

ನಿಯಮ ಉಲ್ಲಂಸಿದವರಿಗೆ ತರಾಟೆ: ಕೋವಿಡ್‌ಸೊಂಕು ದೃಢಪಟ್ಟು ಯಾವುದೇ ಮಾಸ್ಕ್ ಧರಿಸದೇ,ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಂಚನಬಲೆ ಗ್ರಾಮ ವ್ಯಾಪ್ತಿಯ ಈತಮಾಕಲಹಳ್ಳಿಯಲ್ಲಿ ಕೆಲವರು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಬಗ್ಗೆ ಆಶಾಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಗಮನಕ್ಕೆತಂದರು. ಕೂಡಲೇ ಸ್ಪಂದಿಸಿದ ಡೀಸಿ, ಅಂತಹವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ಕೋವಿಡ್‌ಕೇರ್‌ ಸೆಂಟರ್‌ಗೆ ಸೇರಿಸುವಂತೆ ಸ್ಥಳದಲ್ಲೇ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ತಾಲೂಕು ಕೋವಿಡ್‌ ನೋಡಲ್‌ ಅಧಿಕಾರಿಗಳಿಗೆ ಆದೇಶಿಸಿದರು. ಅಲ್ಲದೆ,ಕೋವಿಡ್‌ ನಿಯಮ ಉಲ್ಲಂಘಿಸುವವರನ್ನು ತರಾಟೆಗೆತೆಗೆದುಕೊಂಡರು.

ಕರ್ತವ್ಯ ಅಡ್ಡಿಮಾಡಿದ್ರೆ ಕ್ರಮ: ಕೋವಿಡ್‌ ಕರ್ತವ್ಯನಿರ್ವಹಿಸುತ್ತಿರುವ ಟಾಸ್ಕ್ ಪೋರ್ಸ್‌ ಸಮಿತಿಯಸದಸ್ಯರಿಗೆ, ಆಶಾ ಕಾರ್ಯಕರ್ತೆಯರಿಗೆ ಗೌರವ ಕೊಟ್ಟು ಕೋವಿಡ್‌ ಕರ್ತವ್ಯ ನಿರ್ವಹಿಸಲು ಸ್ಫೂರ್ತಿ ನೀಡಬೇಕು.ಅವರ ಕರ್ತವ್ಯಗಳಿಗೆ ಅಡ್ಡಿ ಪಡಿಸಿದರೆ ಮುಲಾಜಿಲ್ಲದೇಶಿಸ್ತು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಲಕ್ಷಣಗಳಿದ್ದವರಿಗೂ ಚಿಕಿತ್ಸೆ ನೀಡಿ: ಆರ್ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ವರದಿ ಬಂದಿದ್ದು,ಸೋಂಕಿನ ಲಕ್ಷಣಗಳಿದ್ದಲ್ಲಿ ಅವರನ್ನು ಸಹ ಸೋಂಕಿತರೆಂದು ಭಾವಿಸಿ ಚಿಕಿತ್ಸೆ ನೀಡಬೇಕೆಂದು  ಸರ್ಕಾರ ಆದೇಶಿಸಿದೆ. ಅದರಂತೆ ಆರೋಗ್ಯ ಇಲಾಖೆಯಅ ಧಿಕಾರಿಗಳು ಕ್ರಮ ವಹಿಸಬೇಕು. ಒಟ್ಟಾರೆ,ಯಾರೊಬ್ಬರೂ ಚಿಕಿತ್ಸೆ ಸಿಗದೆ ಸಾವು ಸಂಭವಿಸದಂತೆ ಎಚ್ಚರ ವಹಿಸುವಂತೆ ಅ ಧಿಕಾರಿಗಳಿಗೆ ಸೂಚಿಸಿದರು.

ಮಹತ್ವದ ದಿನಗಳು: ಜ್ವರ, ಕೆಮ್ಮು, ಶೀತ ಹೀಗೆ ಏನೇಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ಕೋವಿಡ್‌ಪರೀಕ್ಷೆ ಮಾಡಿಕೊಳ್ಳುವುದರಿಂದ ಮುಂದಾಗುವಅನಾಹುತಗಳನ್ನು ತಪ್ಪಿಸಬಹುದೆಂದ ಜಿಲ್ಲಾಧಿಕಾರಿಗಳು,ನಾವು ವಯಸ್ಸಿನಲ್ಲಿ ಚಿಕ್ಕವರಿದ್ದೇವೆ, ಕೋವಿಡ್‌ ಏನೂಮಾಡಲ್ಲ ತಡೆದುಕೊಳ್ಳುತ್ತೇವೆಂದು ಕೋವಿಡ್‌ ಗಂಟಲುದ್ರವ ಪರೀಕ್ಷೆ ಮಾಡಿಸಿಕೊಳ್ಳದೇ ನಿರ್ಲಕ್ಷ್ಯವಹಿಸುವುದರಿಂದ ಸಾವು ಸಂಭವಿಸುತ್ತವೆ. ಪ್ರಸ್ತುತ ಈಸಂಕಷ್ಟದ ಅವ ಧಿಯಲ್ಲಿ ಪ್ರತಿ ದಿನವೂ ಮಹತ್ವವಾಗಿದೆಎಂದು ಹೇಳಿದರು.

ಹತ್ತಿರದ ಕೋವಿಡ್‌ ಆಸ್ಪತ್ರೆಗೆ ಸೇರಿಸಿ: ಯಾವುದೇರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಗಂಟಲುದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೊಂಕು ದೃಢ ಪಟ್ಟುಯಾವುದೇ ರೋಗ ಲಕ್ಷಣಗಳಿದ್ದಲ್ಲಿ ನಮ್ಮ ಆರೋಗ್ಯಅ ಧಿಕಾರಿಗಳು ಅಥವಾ ಟಾಸ್ಕ್ ಪೋರ್ಸ್‌ ಸಮಿತಿಗಳ ಸದಸ್ಯರನ್ನು ಸಂಪರ್ಕಿಸಿ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಕ್ವಾರಂಟೈನ್‌ ಇರಬಹುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿಹತ್ತಿರದ ಕೋವಿಡ್‌ ಆಸ್ಪತ್ರೆಗಳಲ್ಲಿ ದಾಖಲಾಗಬಹುದುಎಂದು ವಿವರಿಸಿದರು.

ವಿಡಿಯೋ ಸಂವಾದ: ಮಂಚನಬಲೆ ಗ್ರಾಪಂಉಪಾಧ್ಯಕ್ಷ ಶ್ರೀಧರ್‌ ಮಾತನಾಡಿ, ಜಿಲ್ಲಾ ಧಿಕಾರಿಗಳುಸರಣಿಯೋಪಾ ದಿಯಲ್ಲಿ ಪ್ರತಿ ಹಳ್ಳಿ ಹಾಗೂ ನಗರಪ್ರದೇಶಗಳ ಪ್ರತಿ ವಾರ್ಡ್‌ಗಳಿಗೆ ಖುದ್ದು ಭೇಟಿ ನೀಡಿಕೋವಿಡ್‌ ಸೊಂಕಿತರನ್ನು ಹಾಗೂ ಗುಣಮುಖರಾಗಿಹೋಂಐಸೋಲೇಷನ್‌ನಲ್ಲಿ ಇರುವವರನ್ನು ಭೇಟಿಮಾಡಿ, ವಿಡಿಯೋ ಸಂವಾದದ ಮೂಲಕ ಅವರಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ ಎಂದು ಹೇಳಿದರು.

ಅದರಂತೆ 28 ಸಕ್ರಿಯ ಪ್ರಕರಣಗಳಿರುವ ನಮ್ಮಗ್ರಾಪಂಗೆ ಭೇಟಿ ನೀಡಿ, ಅಧ್ಯಕ್ಷರು, ಸದಸ್ಯರಿಗೆ ಹಾಗೂಸಾರ್ವಜನಿಕರಿಗೆ ಕೋವಿಡ್‌ ಜಾಗೃತಿ ಮೂಡಿಸಿರುವುದುನಮ್ಮ ಟಾಸ್ಕ್ ಪೋರ್ಸ್‌ ಸಮಿತಿಗೆ ಧೈರ್ಯಬಂದಿದೆ.ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ನಮ್ಮಗ್ರಾಪಂನಿಂದ ಕೋವಿಡ್‌ ನಿರ್ಮೂಲನೆ ಮಾಡುವುದಾಗಿ ತಿಳಿಸಿ, ಜಿಲ್ಲಾಧಿ ಕಾರಿಗಳ ಭೇಟಿಗೆ ಅಭಿನಂದನೆ ತಿಳಿಸಿದರು. ಜಿಪಂ ಸಿಇಒ ಪಿ.ಶಿವಶಂಕರ್‌, ತಾಲೂಕು ನೋಡಲ್‌ಅ ಧಿಕಾರಿ ಭಾಸ್ಕರ್‌, ಗ್ರಾಪಂ ಅಧ್ಯಕ್ಷೆ ಗಾಯತ್ರಮ್ಮ ಮತ್ತುಸದಸ್ಯರು, ಆಶಾ, ಅಂಗನವಾಡಿ ಸಿಬ್ಬಂದಿ, ಟಾಸ್ಕ್ಪೋರ್ಸ್‌ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.