Nidumamidi Mutt: ಸಾಹಿತ್ಯಕ್ಕೆ ನಿಡುಮಾಮಿಡಿ ಮಠದ ಕೊಡುಗೆ ಅಪಾರ
Team Udayavani, Sep 5, 2023, 5:02 PM IST
ಬಾಗೇಪಲ್ಲಿ: ತಾಲೂಕಿನ ಗೂಳೂರುನಲ್ಲಿರುವ ನಿಡುಮಾಮಿಡಿ ಮಹಾ ಸಂಸ್ಥಾನ ಮಠ ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಒಂದು, ಸಾಮಾಜಿ ಕವಾಗಿ, ಧಾರ್ಮಿಕರವಾಗಿ, ಸಾಹಿತ್ಯಕವಾಗಿ ಪ್ರಾಂತ್ಯ ಭೇದವಿಲ್ಲದೆ ಸರ್ವರನ್ನು ಸಮಾನ ದೃಷ್ಟಿಯಿಂದ ಆದರಿಸಿದೆ.
ಹೌದು, 20ನೇ ಶತಮಾನದಲ್ಲಿ 300 ಗ್ರಂಥಗ ಳನ್ನು ರಚಿಸಿ ಪ್ರಕಟಿಸಿ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಹಾಗೂ ಭಾರತಿಯ ಧರ್ಮ ದರ್ಶನಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿರುವ ಡಾ. ಜಚನಿ ಅವರು. ಈ ನಿಡುಮಾಮಿಡಿ ಪೀಠಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುನಲ್ಲಿ ನೂರಕ್ಕೂ ಹೆಚ್ಚು ಶಾಖಾ ಮಠಗಳಿದ್ದು ದಕ್ಷಿಣ ಭಾರತ 4 ರಾಜ್ಯಗಳಲ್ಲಿ ಲಕ್ಷಾಂತರ ಜನ ಶಿಷ್ಯರಿದ್ದಾರೆ.
ಶೂನ್ಯಮಾಸದಲ್ಲಿ ಪೀಠಾರೋಹಣ: ಈವರೆಗೆ ಈ ಪೀಠದಲ್ಲಿ 39 ಪೀಠಾಧೀಶರು ಸೇವೆ ಸಲ್ಲಿಸಿದ್ದಾರೆ. ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಶ್ರೀಜಚನಿ ಉತ್ತರಾಧಿಕಾರಿಯಾಗಿ ಡಿಸೆಂಬರ್ 27, 1990ರಂದು ನಿಡುಮಾಮಿಡಿ ಪೀಠಕ್ಕೆ 40ನೇ ಪೀಠಾಧಿಪತಿಗಳಾದರು. ಪೂಜ್ಯರು ಅಶುಭವೆನಿಸಿದ ಶೂನ್ಯಮಾಸದಲ್ಲಿ ಪೀಠಾರೋಹಣ ಮಾಡಿದರು. ಪೀಠಾಧಿಕಾರದ ಸಂದರ್ಭದಲ್ಲಿ ನಾನು ಪ್ರಾಣ ಇರುವವರಿಗೆ ಜಗದ್ಗುರುವೆಂದು ಕರೆದುಕೊಳ್ಳುವುದಿಲ್ಲ ಪಲ್ಲಕ್ಕಿ ಹತ್ತುವುದಿಲ್ಲ, ಕೀರಿಟ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿದ್ದಾರೆ. ಭಾರತದ ಮಠ ಪೀಠಗಳ ಇತಿಹಾಸದಲ್ಲಿ ಸಾಂಪ್ರದಾಯಕ ಬಿರುದುಗಳು ಹಾಗೂ ಕಿರೀಟ ಪಲ್ಲಕ್ಕಿಯನ್ನು ತ್ಯಜಿಸಿದ ಮೊದಲ ಪೀಠಾಧೀಶರಾಗಿದ್ದಾರೆ. ಸ್ವಾಮೀಜಿ ಕರ್ನಾಟಕದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹೋರಾಟಗಳಿಗೆ ನೈತಿಕ ಸ್ಥೈರ್ಯ ವನ್ನು ತುಂಬಿದವರಾಗಿದ್ದಾರೆ. ಈ ಸಮುದಾಯಗಳ ಮೇಲೆ ಎಲ್ಲೆ ದೌರ್ಜನ್ಯ ನಡೆಯಲಿ ಅವರ ಪರವಾಗಿ ಧ್ವನಿ ಎತ್ತುವ ಸ್ವಾಮೀಜಿ ಕೋಮು ಸೌಹಾರ್ದ ನಿರ್ಮಾಣದಲ್ಲಿ ವಿಶೇಷವಾದ ಪಾತ್ರವಹಿಸಿದ್ದಾರೆ.
ಧರ್ಮಕ್ಕಿಂತ ದೇಶ ದೊಡ್ಡದೆನಿಸಬೇಕು ದೇವರಿಗಿಂತ ಮನುಷ್ಯ ದೊಡ್ಡವನಾಗಬೇಕು ಎಂದು ಪ್ರತಿಪಾದಿಸುತ್ತಿರುವ ಸ್ವಾಮೀಜಿ ರಾಷ್ಟ್ರದ ಏಕತೆ ಸಮಗ್ರತೆ ಉಳಿವಿಗಾಗಿ ಕೋಮು ಕೋಮುಗಳ ನಡುವೆ ಇರುವ ದ್ವೇಷವನ್ನು ಹೋಗಲಾಡಿಸಿ, ಶಾಂತಿ ಸಾಮರಸ್ಯ ಸಹಬಾಳ್ವೆಗಾಗಿ ತಮ್ಮ ಕೃತಿಗಳು ಪತ್ರಿಕಾ ಬರಹಗಳು ಭಾಷಣಗಳು ರಚನಾತ್ಮಕ ಕಾರ್ಯಗಳ ಮೂಲಕ ಮೂಲಕ ಜನಮತವನ್ನು ನಿರಂತರವಾಗಿ ಜಾಗೃತಿಗೊಳಿಸುತ್ತಿರುವುದು ಈ ನಾಡಿನ ಹೆಮ್ಮೆಯ ಸಂಗತಿ.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 16 ವರ್ಷಗಳಾಗಿರುವುದು ನನಗೆ ಸಂತಸ ತಂದಿದೆ.ಆದರೆ ಜಿಲ್ಲೆಯ ಶಾಸಕರು ಮತ್ತು ಲೋಕಸಭಾ ಸದಸ್ಯರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಆಂಧ್ರಗಡಿಯಲ್ಲಿರುವ ಈ ಜಿಲ್ಲೆಯಲ್ಲಿ ಇಂದಿಗೂ ಕೂಡ ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ● ವೀರಭದ್ರಚನ್ನ ಮಲ್ಲ ಸ್ವಾಮೀಜಿ
– ಜಿ.ಎಂ.ಗುರುಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.