ನಿರ್ಮಲ ಸೀತಾರಾಮನ್ ದೇಶ ಕಂಡ ಬೆಸ್ಟ್ ಫೈನಾನ್ಸ್ ಮಿನಿಸ್ಟರ್ : ಸಂಸದ ಬಿ.ಎನ್.ಬಚ್ಚೇಗೌಡ
Team Udayavani, Feb 15, 2020, 2:48 PM IST
ಚಿಕ್ಕಬಳ್ಳಾಪುರ: ಇತ್ತೀಚೆಗೆ ಸಂಸತ್ತಿನಲ್ಲಿ ಎರಡನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲ ಸೀತಾರಾಮನ್ ದೇಶ ಕಂಡ ಬೆಸ್ಟ್ ಫೈನಾನ್ಸ್ ಮಿನಿಸ್ಟರ್ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶೇಶ್ವರಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕೃಷಿ ಮೇಳದ ಭಾಗವಾಗಿ ಆಯೋಜಿಸಿರುವ ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಪ್ಪ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಬಜೆಟ್ ಅನ್ನದಾತರ ಪರವಾಗಿದೆ. ನಿರ್ಮಲ ಸೀತಾರಾಮನ್ ಒಳ್ಳೆಯ ಹಣಕಾಸು ಸಚಿವರು ಅದಕ್ಕಾಗಿ ಅವರು ಧಾನ್ಯ ಲಕ್ಮೀ ಯೋಜನೆ ರೂಪಿಸಿದ್ದಾರೆ ಎಂದರು.
ಜಗತ್ತಿನಲ್ಲಿ ಭಾರತ ಆರ್ಥಿಕಾಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿ ಇದೆ. 2025 ಕ್ಕೆ ದೇಶದ ಆರ್ಥಿಕತೆ ಪ್ರಮಾಣ ಐದು ಟ್ರೆಲಿಯನ್ ಡಾಲರ್ ತಲುಪಲಿದೆ ಎಂದರು.
ರೈತರ ಅಭಿವೃದ್ಧಿಗೆ ಆಗಬೇಕು. ಇದಕ್ಕಾಗಿ ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು ಕೊಡಬೇಕೆಂದರು. ಕೇಂದ್ರ ಸರ್ಕಾರ 9 ಕೋಟಿ ರೈತರ ಖಾತೆಗಳಿಗೆ 54 ಸಾವಿರ ಕೋಟಿ ಹಣವನ್ನು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಜಮೆ ಮಾಡಲಾಗಿದೆ ಎಂದರು. ಸರ್ಕಾರಗಳು ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಒತ್ತು ಕೊಡಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.