ಮೂರು ತಿಂಗಳಾದ್ರೂ ಕಳ್ಳರ ಬಂಧನ ಇಲ್ಲ
Team Udayavani, Nov 14, 2021, 2:55 PM IST
Representative Image used
ಚೇಳೂರು: ಕಳೆದ ಮೂರು ತಿಂಗಳಿಂದ ಒಂದೇ ರಾತ್ರಿ 5 ಕಡೆ ಕಳ್ಳತನಕ್ಕೆ ಯತ್ನಿಸಿದ ಕಳ್ಳರು, ಮೂರು ಕಡೆ ವಿಫಲವಾಗಿ ಎರಡು ಮನೆಯಲ್ಲಿ ಕಳವು ಮಾಡಿಕೊಂಡು ಹೋಗಿದ್ದರೂ ಪೊಲೀಸರು ಆರೋಪಿಗಳ ಬಂಧಿಸುವಲ್ಲಿ ವಿಫಲವಾಗಿದ್ದಾರೆ. ಗ್ರಾಮದ ಶಾಂತಿನಗರ ನಿವಾಸಿ ಟಿ.ಎನ್. ಸತ್ಯಪ್ಪನಾಯಕ್ ಅವರ ಬೆತೇಲ್ ಚರ್ಚ್‌ನ ವಸತಿ ನಿಲಯದ ಬೀಗ ಹೊಡೆದು ಒಳನುಗ್ಗಿದ ಕಳ್ಳರು 5 ಸಾವಿರ ರೂ. ಬೆಲೆ ಬಾಳುವ ಮಕ್ಕಳ ಪುಸ್ತಕಗಳು, ಕಲಿಕಾ ಸಾಮಗ್ರಿಗಳು, 5 ಸಾವಿರ ರೂ.ಗೂ ಹೆಚ್ಚು ಹಣ ಇದ್ದ ಹುಂಡಿ ಕಳವು ಮಾಡಿದ್ದಾರೆ.
ಇದನ್ನೂ ಓದಿ:- ಕೊಚ್ಚಿ ಹೋದ ಗ್ರಾ.ಪಂ. ಸದಸ್ಯ ಇನ್ನೂ ಸಿಕ್ಕಿಲ್ಲ..!
ಇದೇವೇಳೆ ಟೀಚರ್ ರಾಮು, ಶಿವಣ್ಣ ಅವರ ಬಾಡಿಗೆ ಮನೆ ಬೀಗ ಹೊಡೆದು ಒಳಗೆ ನುಗ್ಗಿದ ಖದೀಮರು ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ವಾಪಸ್ ಬಂದು, ಅದೇ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿಲಾನ್ ಬಾಷ ಅವರ ಮನೆ ಬೀಗ ಮುರಿದು ಬೀರುವಿನಲ್ಲಿದ್ದ 4.8 ಲಕ್ಷ ರೂ. ನಗದು ದೋಚಿಕೊಂಡು, ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾಗಿದ್ದು ಎರಡಲ್ಲ, ನಾಲ್ಕು ಲಕ್ಷ ರೂ.: ಮುಖ್ಯ ಶಿಕ್ಷಕ ಜಿಲಾನ್ ಬಾಷ ಅವರ ಮನೆ ಕಳವು ಪ್ರಕರಣದಲ್ಲಿ 4,80,000 ರೂ. ದೋಚಿದ್ದರೂ ದೂರಿನಲ್ಲಿ 2,10,000 ರೂ. ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಕಳ್ಳರ ಪತ್ತೆಗಾಗಿ ಯಾವುದೇ ಪ್ರಯತ್ನ ನಡೆಸುತ್ತಿಲ್ಲ, ಕಳವಾದ ಮನೆ ದಾರಿಯಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಅವುಗಳ ತನಿಖೆ ಮಾಡಿಲ್ಲ ಎಂದು ಹಣ ಕಳೆದುಕೊಂಡ ಮಾಲಿಕರು ದೂರಿದ್ದಾರೆ.
ದ್ವಿಚಕ್ರ ವಾಹನ ಕಳವು: ಚೇಳೂರು ಗ್ರಾಮದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚುತ್ತಿವೆ. ವಾಹನ ಸವಾರರು, ಮಾಲಿಕರು ಭಯಭೀತರಾಗಿದ್ದಾರೆ. ಗ್ರಾಮದ ಜಿಲಾನಿಬಾಷ ದ್ವಿಚಕ್ರ ವಾಹನ ಸೇರಿ ಸಾಬಾಜಾನ್, ಬಾರ್ ರಹಮತ್ತುಲ್ಲ, ಮಧುಸೂದನರೆಡ್ಡಿ ಇತರ ವಾಹನಗಳು ಕಳವು ಆಗಿವೆ. ಚೇಳೂರು ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಪತ್ತೆ ಮಾಡುವ ಗೋಜಿಗೆ ಹೋಗಲೇ ಇಲ್ಲ.
ಹೆಸರಿಗೆ ಸಿಪಿಐ ಆಫೀಸ್: ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂದು ಎರಡು ಪೊಲೀಸ್ ಠಾಣೆಗಳಿಗೆ ಒಂದು ಸರ್ಕಲ್ ಇನ್ಸ್‌ಪೆಕ್ಟರ್ ಆಫೀಸ್ ನೀಡಿದ್ದು, ವೃತ್ತ ನಿರೀಕ್ಷಕರು, ಐವರು ಸಿಬ್ಬಂದಿ, ಕಚೇರಿಗೆ ಪೀಠೊಪಕರಣ ನೀಡಿದೆ. ಅಪರಾಧ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಗಮನ ಹರಿಸದೇ ಕೇಸಿಗೂ ನಮಗೂ ಸಂಬಂಧ ಇಲ್ಲ ಎಂಬಂತೆ ಇಲ್ಲಿನ ಪೊಲೀಸರು ವರ್ತಿಸುತ್ತಿರುವುದು ಜನತೆಗೆ ಬೇಸರ ತಂದಿದೆ.
ಪ್ರತಿಭಟನೆಗೆ ಸಜ್ಜು: ಚೇಳೂರು ಪೊಲೀಸರ ಕಾರ್ಯ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಸ್ತುಗಳನ್ನು ಕಳೆದುಕೊಂಡ ಮಾಲಿಕರು, ರಾತ್ರಿ ಗಸ್ತು ಹೆಚ್ಚಿಸುವುದರ ಜೊತೆಗೆ ಕಳವು ಪ್ರಕರಣಗಳ ಪತ್ತೆ ಮಾಡಲು ಅನುಭವಿ ಪೊಲೀಸರನ್ನು ನೇಮಿಸಲು ಮೀನ ಮೇಷ ಎಣಿಸಲಾಗುತ್ತಿದೆ ಎಂದು ಕಳವು ಪ್ರಕರಣದ ದೂರುದಾರರು ಆರೋಪಿಸಿದ್ದಾರೆ.
“ಕಳವು ಪ್ರಕರಣದ ಆರೋಪಿಗಳ ಸೆರೆಗೆ ಅಧಿಕಾರಿಗಳನ್ನು ನೇಮಿಸಿದ್ದೇವೆ. ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ನಾವು ಕಳ್ಳರನ್ನು ಹಿಡಿಯುತ್ತೇವೆ.” – ಜಿ.ಪಿ.ರಾಜು, ಚೇಳೂರು ಸರ್ಕಲ್
ಇನ್ಸ್‌ಪೆಕ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.