ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
Team Udayavani, Aug 14, 2019, 3:00 AM IST
ಗುಡಿಬಂಡೆ: ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ಮತ್ತೇಕೆ ಸಭೆ ಕರೆಯುವುದು ಎಂದು ತಾಪಂ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ವರಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವ ಸಭೆಯಲ್ಲಿ ಸಭೆಗೆ ಬಹುಪಾಲು ಅಧಿಕಾರಿಗಳು ಗೈರು ಹಾಜರಾಗಿದ್ದು, ಕೆಲವು ಇಲಾಖೆಗಳಿಂದ ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಯ ಕೆಳ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕಳುಹಿಸುತ್ತಾರೆ.
ಅವರ ಬಳಿ ಏನನ್ನು ಕೇಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ತಾಪಂ ಇಒ ಶ್ರೀನಾಥ್‌ಗೌಡ ಹಾಗೂ ಅಧ್ಯಕ್ಷರಿಗೆ ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಇಲಾಖಾಧಿಕಾರಿಗಳಿಂದ ಸಮಾಜ ಕಲ್ಯಾಣ, ರೇಷ್ಮೆ, ತೋಟಗಾರಿಕೆ, ಪಶು ಪಾಲನಾ, ಸಾರ್ವಜನಿಕರ ಶಿಕ್ಷಣ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ತಾಪ ಇಒ, ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುವ ಬೆಳೆಗಳು ರೈತರು ಬೆಳೆದಾಗ ಅದನ್ನು ನರೇಗಾ ಯೋಜನೆಯಲ್ಲಿ ಸೇರಿಸಿಕೊಳ್ಳುವುದು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ರೇಷ್ಮೆ ಇಲಾಖೆಗಳ ಎಸ್‌ಇಪಿ, ಟಿಎಸ್‌ಪಿ ಯೋಜನೆಯಲ್ಲಿ 77 ಪರಿಶಿಷ್ಟ ಫಲಾನುಭವಿಗಳಿಗೆ ಔಷಧಿ ಸಿಂಪಡಣೆ ಯಂತ್ರಗಳ ವಿತರಣೆಗೆ ಸಭೆ ಅನುಮೋದನೆ ನೀಡಲಾಗಿದೆ ಎಂದು ತಾಪಂ ಇಒ ತಿಳಿಸಿದರು.
2 ಕೋಟಿಗೆ ಕ್ರಿಯಾ ಯೋಜನೆಗೆ ಸಿದ್ಧತೆ: ತಾಲೂಕಿನ 11ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ 18 ಲಕ್ಷದಂತೆ 2.98 ಕೋಟಿ ಮತ್ತು ಕಚೇರಿಯ ಪೀಠೊಪಕರಣಗಳಿಗೆ 2 ಲಕ್ಷ ಸೇರಿ ಒಟ್ಟು 2 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಲು ಎಲ್ಲಾ ಸದಸ್ಯರ ಒಪ್ಪಿಗೆಯಂತೆ ತೀರ್ಮಾನಿಸಲಾಯಿತು.
ಈಗಾಗಲೇ 50 ಲಕ್ಷ ಅನುದಾನವಿದ್ದು, ಇನ್ನುಳಿದ 1.50 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ. ಎಸ್‌ಸಿ/ಎಸ್‌ಟಿ ಜನಾಂಗದ ಅಭಿವೃದ್ಧಿಗಾಗಿ 50 ಲಕ್ಷ, ರಸ್ತೆ ಕಾಮಗಾರಿಗಳಿಗೆ 40 ಲಕ್ಷ, ಅಂಗವಿಕಲರ ಮೀಸಲಿಗೆ 10 ಲಕ್ಷ, ಗ್ರೀನ್ ಪೌಂಡ್ 10 ಲಕ್ಷ ಹಾಗೂ ಸಾಮಾನ್ಯ ಕಾಮಗಾರಿಗಳಿಗೆ 90 ಲಕ್ಷದಂತೆ ಒಟ್ಟು 2 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ತಾಪಂ ಇಒ ಅಧಿಕಾರಿಗಳಿಗೆ ತಿಳಿಸಿದರು.
ತಾಪಂ ಕಟ್ಟಡಕ್ಕೆ ಅನುಮೋದನೆ: ಸುಮಾರು 2 ವರ್ಷಗಳ ಹಿಂದೆ ಹಳೆ ನ್ಯಾಯಾಲಯದ ಆವರಣದಲ್ಲಿ ತಾಪಂ ಕಾರ್ಯಾಲಯ ನಿರ್ಮಿಸಲು ಎಲ್ಲಾ ಸದಸ್ಯರು ತೀರ್ಮಾನ ಮಾಡಿ ಅನುಮೋದಲನೆ ಪಡೆದು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಅಧಿಕಾರಿಗಳು ಬೇಜಾವಬ್ದಾರಿ ತೋರುತ್ತಿದ್ದಾರೆಂದು ಸದಸ್ಯರು ದೂರಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಬೈರಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಪೋಲಂಪಲ್ಲಿ ಮಂಜುನಾಥ್, ಎಲ್ಲೋಡು ಜಯರಾಮರೆಡ್ಡಿ, ಹಂಪಸಂದ್ರ ಆದಿನಾರಾಯಣಪ್ಪ, ಚೆಂಡೂರು ರಾಮಾಂಜನಪ್ಪ, ಉಲ್ಲೋಡು ವೆಂಕಟಲಕ್ಷ್ಮಮ್ಮ ಸೇರಿ 11 ಸದಸ್ಯರು ಹಾಜರಿದ್ದರು. ಸಮಾಜ ಕಲ್ಯಾಣಾಧಿಕಾರಿ ಶೇಷಾದ್ರಿ, ಪಶುಪಾಲನ ಇಲಾಖೆಯ ಎಡಿಎ ರಾಮಕೃಷ್ಣಾರೆಡ್ಡಿ, ಜಿಪಂ ತಾಂತ್ರಿಕ ವಿಭಾಗದ ಎಇಇ ಮಧು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.