ರಸ್ತೆಯಲ್ಲೇ ಪಾರ್ಕಿಂಗ್‌,ಕಿರಿಕಿರಿ


Team Udayavani, Jan 31, 2019, 10:06 AM IST

chikk-1.jpg

ಗುಡಿಬಂಡೆ: ಪಟ್ಟಣ ಈಗ ತಾನೆ ಬೆಳವಣಿಗೆ ಹೊಂದುತ್ತಿದ್ದು, ವಾಹನಗಳ ಬಳಕೆದಾರರ ಸಂಖ್ಯೆ ಪ್ರತಿವರ್ಷವೂ ದ್ವಿಗುಣಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಪಪಂ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ. ಅಲ್ಲದೆ, ಪಾರ್ಕಿಂಗ್‌ ಮಾಡಲು ಸಾಕಷ್ಟು ಜಾಗವಿದ್ದರೂ ಜನ ಉಳಿದವರು ಹೋಗಲಿ, ಬಿಡಲಿ ಆ ಚಿಂತೆ ನಮಗಿಲ್ಲ ಎಂದು ವಾಹನಗಳನ್ನು ನಡುರಸ್ತೆ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರೆ ವಾಹನ ಸವಾರರಿಗಷ್ಟೇ ಅಲ್ಲ, ಪಾದಚಾರಿಗಳಿಗೂ ತೀವ್ರ ತೊಂದರೆಯಾಗಿದೆ.

ಎರಡು ಮೂರು ವರ್ಷಗಳಿಂದ ಗುಡಿಬಂಡೆ ಪಟ್ಟಣದಲ್ಲಿ ಪಾರ್ಕಿಂಗ್‌ ತಲೆನೋವು ಕಾಡುತ್ತಿದೆ. ಮುಖ್ಯರಸ್ತೆ ಅಗಲೀಕರಣವಾದ್ರೂ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ರಸ್ತೆ ಇಕ್ಕೆಲಗಳಲ್ಲಿ, ಫ‌ುಟ್ಪಾತ್‌ನಲ್ಲಿ ಬೈಕ್‌, ಕಾರ್‌ ಪಾರ್ಕಿಂಗ್‌ ಸಾಮಾನ್ಯ. ಪಾದಚಾರಿಗಳೇ ಉಸಿÃ‌ನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಿದೆ. ತಾಲೂಕಿನಿಂದ ರೈತರು, ಸಾಮಾನ್ಯ ಜನರು ಕೃಷಿ ಪರಿಕರಗಳು, ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಲು, ಸರ್ಕಾರಿ ಕಚೇರಿಯಲ್ಲಿನ ಕೆಲಸದ ಮೇಲೆ ಪಟ್ಟಣಕ್ಕೆ ಬರುತ್ತಾರೆ. ಬೆಳಗ್ಗೆ ಬಂದು ವಾಹನವನ್ನು ಮುಖ್ಯರಸ್ತೆಯಲ್ಲಿ ನಿಲ್ಲಿಸಿ ಹೋದ್ರೆ ಕೆಲಸ ಮುಗಿಸಿಕೊಂಡು ಸಂಜೆಯೇ ತೆಗೆಯುವುದು. ಇದರಿಂದ ಇತರೆ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತದೆ. ಇದು ಬೆಳೆಯುತ್ತಿರುವ ಗುಡಿಬಂಡೆಯಲ್ಲಿ ಓಡಾಡುವ ಪ್ರತಿಯೊಬ್ಬ ಪ್ರಯಾಣಿಕನ ಗಮನಕ್ಕೂ ಬರುವ ಟ್ರಾಫಿಕ್‌ ಗೋಳು.

ಪಟ್ಟಣದ ಅಭಿವೃದ್ಧಿ ಜತೆಗೆ ಟ್ರಾಫಿಕ್‌ ಸಮಸ್ಯೆಯೂ ಬಳುವಳಿಯಾಗುತ್ತಿದೆ. ವಾಹನ ಓಡಾಟಕ್ಕೆ ದ್ವಿಪಥವಾದರೂ ಸುಗಮ ಸಂಚಾರ ಕಷ್ಟ. ರಸ್ತೆ ಇಕ್ಕೆಲಗಳಲ್ಲೇ ಅಂಗಡಿ ಮುಂಗಟ್ಟು, ಆಸ್ಪತ್ರೆ, ಸರ್ಕಾರಿ ಕಚೇರಿ, ಹೆಚ್ಚಿನ ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದ್ರೂ ಅಲ್ಲಿಯೂ ವಾಹನ ಗಳು ತುಂಬಿರುತ್ತವೆ. ಹೀಗಾಗಿ ರಸ್ತೆಯ ಕಾರು, ಬೈಕ್‌ ಪಾರ್ಕ್‌ ಮಾಡಿ ಕೆಲಸ ಕಾರ್ಯಗಳಿಗೆ ತೊಡಗಿಕೊಳ್ಳುತ್ತಾರೆ.

ಒತ್ತುವರಿ: ಕೆಲವು ಕಡೆ ವಾಹನಗಳು ಪಾರ್ಕಿಂಗ್‌ ಮಾಡುವ ಸ್ಥಳವನ್ನು ಬೀದಿ ಬದಿ ವ್ಯಾಪಾರಿಗಳು, ತರಕಾರಿ ಜ್ಯೂಸ್‌ ಮಾರಾಟ ಮಾಡುವವರು ಒತ್ತುವರಿ ಮಾಡಿಕೊಂಡಿರುವ ಕಾರಣ ಜನ ರಸ್ತೆಯಲ್ಲೇ ವಾಹನ ನಿಲ್ಲಿಸುವಂತಾಗಿದೆ. ಕಿರಿಕಿರಿ ಆದ್ರೂ ಪಾದಚಾರಿಗಳು ಅನುಸರಿಸಿಕೊಂಡು ಓಡಾಡುತ್ತಿದ್ದಾರೆ.

ಅಂಗಡಿ ಮಾಲಿಕರಿಗೂ ತೊಂದರೆ: ಸಾಮಾನು ಖರೀದಿಸಲು ಅಂಗಡಿ ಬರುವ ಗ್ರಾಹಕರು ವಾಹನವನ್ನು ಅಂಗಡಿ ಮುಂದೆಯೇ ನಿಲ್ಲಿಸಿ, ಒಂದು ಸಣ್ಣ ಕೆಲಸ ಇದೆ, ಮುಗಿಸಿಕೊಂಡು ಬಂದು ವಾಹನ ತೆಗೆದುಕೊಂಡು ಹೋಗುತ್ತೇನೆ, ಅಲ್ಲಿಯವರೆಗೂ ವಾಹನ ಇಲ್ಲೇ ಇರಲಿ ಎಂದು ಹೇಳಿ ಹೋದವರು ಎರಡು ಮೂರು ಗಂಟೆಯಾದ್ರೂ ಬರುವುದಿಲ್ಲ. ಇದರಿಂದ ಅಂಗಡಿ ಮಾಲಿಕರಿಗೂ, ಇತರೆ ವಾಹನಗಳ ಚಾಲಕರಿಗೂ ತೊಂದರೆಯಾಗುತ್ತದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗವೂ ವಾಹನ ಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತಿದೆ. ನಿತ್ಯ ನೂರಾರು ರೋಗಿಗಳು ಆರೋಗ್ಯ ತಪಾಸಣೆ, ಚಿಕಿತ್ಸೆಗೆಂದು ಬರುತ್ತಾರೆ. ಇಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆಯಿಲ್ಲದ ಕಾರಣ ಆಸ್ಪತ್ರೆ ಮುಂಭಾಗವೇ ದ್ವಿಚಕ್ರ ವಾಹನ ಪಾರ್ಕಿಂಗ್‌ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪಟ್ಟಣಕ್ಕೆ ಕೆಲಸದ ನಿಮಿತ್ತ ಆಗಮಿಸುವ ಸಾರ್ವಜನಿಕರೂ ಇಲ್ಲೇ ಪಾರ್ಕಿಂಗ್‌ ಮಾಡಿ ಹೋಗುತ್ತಿದ್ದಾರೆ. ಇದ ರಿಂದ ಆ್ಯಂಬುಲೆನ್ಸ್‌ ಹೋಗಲು ಹರಸಾಹಸ ಪಡುವ ಸನ್ನಿವೇಶ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.