ಪ್ರಿಯಾಂಕಾರಿಂದ ರಾಜಕೀಯದಲ್ಲಿ ಸಂಚಲನ
Team Udayavani, Jan 25, 2019, 6:44 AM IST
ಚಿಕ್ಕಬಳ್ಳಾಪುರ: ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಬಹುದಿನಗಳ ಇಚ್ಛೆ ಹಾಗೂ ಆಕಾಂಕ್ಷೆ ಯಾಗಿತ್ತು. ರಾಹುಲ್ ಗಾಂಧಿ ಈಗ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಉತ್ತರ ಪ್ರದೇಶ ಉಸ್ತುವಾರಿ ವಹಿಸಿರುವುದ ರಿಂದ ಈ ಬಾರಿ ಅಲ್ಲಿ ರಾಜಕೀಯ ಬದಲಾವಣೆ ನಿಚ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಕನಕದಾಸರ ಜಯಂತ್ಯುತ್ಸವದಲ್ಲಿ ಭಾಗ ವಹಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದನ್ನು ಸ್ವಾಗತಿಸಿದ ಮಾಜಿ ಸಿಎಂ, ಬಿಜೆಪಿ ನಾಯಕರು ಏನೇ ತಂತ್ರಗಾರಿಕೆ ನಡೆಸಿದರೂ ಸಮ್ಮಿಶ್ರ ಸರ್ಕಾರಕ್ಕೆ ಏನು ದಕ್ಕೆಯಾಗುವುದಿಲ್ಲ. ಅವರ ತಂತ್ರ, ಪ್ರತಿತಂತ್ರಗಳು ಅವರ ಕನಸು ಈಡೇರುವುದಿಲ್ಲ. ಅವರ ಭ್ರಮೆಗಳು ಕೂಡ ಭ್ರಮೆಯಾಗಿಯೇ ಉಳಿಯುತ್ತವೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ಶಾಸಕರೆಲ್ಲ ಸೇರಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಎಲ್ಲಾ ಶಾಸಕರು ಕೂಡ ಸಮ್ಮಿಶ್ರ ಸರ್ಕಾರದ ಭಾಗ, ಯಾರನ್ನೂ ಕಡೆಗಣಿಸ ಲಿಕ್ಕೆ ಆಗುವುದಿಲ್ಲ ಎಂದು ತಮ್ಮ ಅಪ್ತ ಶಾಸಕರನ್ನು ಮೈತ್ರಿ ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಿದ್ದರಾಮಯ್ಯ, ತಮ್ಮ ಅಪ್ತ ಶಾಸಕರನ್ನು ಮೈತ್ರಿ ಸರ್ಕಾರದಲ್ಲಿ ಕಡೆಗಣಿಸ ಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.
ಥೂ ಅವರಿಗೆಲ್ಲಾ ಉತ್ತರ ಕೊಡಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರ ಗುಂಪುಗಾರಿಕೆಯಿಂದ ಬಳ್ಳಾರಿ ಶಾಸಕರ ನಡುವೆ ಗಲಾಟೆಯಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಕೆಂಡಾಮಂಡಲರಾದ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದವರ ಪ್ರಶ್ನೆಗೆಲ್ಲ ಉತ್ತರ ಕೊಡಕ್ಕೆ ಆಗಲ್ಲ ಎಂದು ಹೇಳಿದರು.
ಕೇಂದ್ರದ ವಿರುದ್ಧ ಕಿಡಿ: ಕೇಂದ್ರ ಸರ್ಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಲ್ಲ. ಒಮ್ಮೆ ಬಜೆಟ್‌ನಲ್ಲಿ ಅನುದಾನ ಘೋಷಿಸಿದಷ್ಟು ಅನುದಾನ ಕೊಡಲ್ಲ ಎಂದು ಉದ್ಯೋಗ ಖಾತ್ರಿ ಯೋಜನೆಗೆ 371 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು. ಬರಗಾಲದ ಸಂದರ್ಭದಲ್ಲಿ ಕೂಲಿ ಕೊಡುವ ಕಾರ್ಯಕ್ರಮ, ಅದಕ್ಕೆ ಮುಂಚಿತ ವಾಗಿ ಹೆಚ್ಚಾಗಿ ಅನುದಾನ ಕೊಡಬೇಕು. ಬರಗಾಲದ ಸಂದರ್ಭ ದಲ್ಲಿಯೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಹಕಾರ ಕೊಡುವುದಿಲ್ಲ. ರಾಜ್ಯವೇ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಹಾಕಿಕೊಂಡು ಕೆಲಸ ಮಾಡುತ್ತಿದೆಂದರು.
ಜಾತಿ ಕಾರಣಕ್ಕೆ ನನ್ನನ್ನು ಸೋಲಿಸಿದ್ರು: ಮಾಜಿ ಸಿಎಂ
ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಜಾತಿ ವಿರೋಧಿ ಪಟ್ಟ ಕಟ್ಟಿದರು. ನಾನು ಯಾರಿಗೆ ಕೆಲಸ ಮಾಡಿಕೊಟ್ಟೆ ಅವರು ಕೂಡ ತನ್ನ ಕೈ ಹಿಡಿಯಲಿಲ್ಲ. 4 ಕೋಟಿ ಬಡವರಿಗೆ ಅನ್ನಭಾಗ್ಯ ರೂಪಿಸಿದೆ. ಅದರಲ್ಲಿ ಎಲ್ಲಾ ಜಾತಿ ಬಡವರು ಇದ್ದಾರೆ. ನಾನು ಯಾವ ಜಾತಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಅವಲೋಕನ ಮಾಡಿಕೊಂಡರು.
ನಗರದಲ್ಲಿ ಗುರುವಾರ ನಡೆದ ಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1.22 ಕೋಟಿ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ರೈತರಿಗೆ ಸಾಲ ಮನ್ನಾ ಮಾಡಿದೆ. ಬರೀ ಅಹಿಂದ ವರ್ಗದವರು ಮಾತ್ರ ಇದ್ದರಾ? ನಾನು ಬಡವರ ಪರ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಕೆಲವರಿಗೆ ಹೊಟ್ಟೆಕಿಚ್ಚು, ಅಸೂಯೆ, ಹೊಟ್ಟೆ ಉರಿ ಬಂದು ಬಿಡಿತು ಎಂದು ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಈ ದೇಶದ ಇತಿಹಾಸದಲ್ಲಿ ಬದಲಾವಣೆ ಬಯಸುವ ಯಾರೇ ಆಗಲಿ ಅವರನ್ನು ತುಳಿಯುವುದೇ ಪಟ್ಟಭದ್ರ ಹಿತಾಸಕ್ತಿಗಳ ಕೆಲಸವಾಗಿದೆ. ಸಿದ್ದರಾಮಯ್ಯ ಬ್ರಾಹ್ಮಣರ ವಿರೋಧಿ, ಲಿಂಗಾಯಿತರ ವಿರೋಧಿ, ಒಕ್ಕಲಿಗರ ವಿರೋಧಿಯೆಂದು ಸುಮ್ಮು ಸುಮ್ನನೆ ಅಪಪ್ರಚಾರ ಮಾಡಿ ತನ್ನನ್ನು ಸೋಲಿಸಲು ಎಲ್ಲಾರೂ ಒಂದಾದರೆಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗೆ ಆದ ಸೋಲಿನ ನೋವನ್ನು ಸಭೆಯಲ್ಲಿ ತೋಡಿಕೊಂಡರು.
ಶಾಸಕ ಡಾ.ಕೆ.ಸುಧಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಶಾಸಕರಾದ ಮುನಿರತ್ನಂ, ಬೈರತಿ ಬಸವರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ತಾಲೂಕು ಪಂಚಾಯ್ತಿ ಅಧ್ಯಕ್ಷ ರಾಮುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.