ಪಿಎಚ್‌ಸಿ ಕೇಂದ್ರಗಳಿಗಿಲ್ಲ ಆ್ಯಂಬುಲೆನ್ಸ್ ವ್ಯವಸ್ಥೆ
Team Udayavani, Feb 28, 2023, 1:40 PM IST
ಗುಡಿಬಂಡೆ: ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸೇರಿ 3 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಿದ್ದು, ಇವುಗಳಲ್ಲಿ ಎರಡು ಕೇಂದ್ರಗಳಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ.
ತಾಲೂಕಿನಲ್ಲಿ 2 ಹೋಬಳಿ ಕೇಂದ್ರಗಳಿದ್ದು, ಇಲ್ಲಿ ಹಂಪಸಂದ್ರ, ಎಲ್ಲೋಡು, ಬೀಚಗಾನಹಳ್ಳಿ ಗ್ರಾಪಂ ಕೇಂದ್ರಗಳಲ್ಲಿ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 3 ಕೇಂದ್ರಗಳಿಗೂ ಕಸಬಾ ಹೋಬಳಿ ಗ್ರಾಮಗಳೇ ಸೇರಿವೆ. ಸೋಮೇನಹಳ್ಳಿ ಹೋಬಳಿ ಕೇಂದ್ರಕ್ಕೆ 50 ಕ್ಕೂ ಹೆಚ್ಚು ಗ್ರಾಮಗಳು, ಕೇಂದ್ರ ಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದರೂ ಆ ಭಾಗದಲ್ಲಿ ಒಂದು ಪಿ.ಹೆಚ್.ಸಿ. ಕೇಂದ್ರ ಸಹ ಇಲ್ಲದೆ ಇರುವುದು ದುರಂತವೇ ಸರಿ.
ಮೂರು ಆರೋಗ್ಯ ಕೇಂದ್ರಗಳಲ್ಲೂ ಎಂಬಿಬಿಎಸ್ ವೈದ್ಯರಿದ್ದು, ಎನ್‌ಎಚ್‌ಎಂ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವದಾದಿಯರು ಕರ್ತವ್ಯಕ್ಕೆ ಹಾಜರಾಗದಿರುವ ಕಾರಣಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹಂಪಸಂದ್ರ,ಬೀಚಗಾನಹಳ್ಳಿ ಚಿಕಿತ್ಸಾ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್ ಕೊರತೆಇದ್ದು, ಸಮಯಕ್ಕೆ ಸರಿಯಾಗಿ 108 ಮತ್ತು ಸಾರ್ವಜನಿಕಆಸ್ಪತ್ರೆಯ ಆ್ಯಂಬುಲೆನ್ಸ್‌ಗಳ ಸೌಲಭ್ಯ ಸಿಗದೆ ದುರ್ಘಟನೆ ನಡೆದ ಉದಾಹರಣೆಗಳಿವೆ.
ಸೋಮೇನಹಳ್ಳಿ ಭಾಗದ ಜನರಿಗೆ ತುರ್ತು ಚಿಕಿತ್ಸೆ ಬೇಕಾಗಿದ್ದು, ಆ್ಯಂಬುಲೆನ್ಸ್‌ಗಳಿಗೆ ಕರೆ ಮಾಡಿ ಪೆರೇಸಂದ್ರದಿಂದ ಅಥವಾ ಗುಡಿಬಂಡೆಯಿಂದ ವಾಹನಗಳುಹೋಗಬೇಕಾದ ಸ್ಥಿತಿ ಇದೆ. ಜತೆಗೆ ಖಾಸಗಿ ಮೊರೆಹೋಗಬೇಕಾದ ಸ್ಥಿತಿಯೂ ಇದೆ. ಸರ್ಕಾರ ಕೂಡಲೇಆ್ಯಂಬುಲೆನ್ಸ್ ವ್ಯವಸ್ಥೆ ಒದಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಅಗತ್ಯ ಸಿಬ್ಬಂದಿಯನ್ನು ಕೂಡಲೇ ನೇಮಿಸಿ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕಾಗಿದೆ. -ಲಕ್ಷ್ಮೀನಾರಾಯಣಪ್ಪ, ಹಂಪಸಂದ್ರ ಗ್ರಾಪಂ ಅಧ್ಯಕ್ಷ
ಗುಡಿಬಂಡೆ ತಾಲೂಕಿನಲ್ಲಿ 3 ಪಿಎಚ್‌ಸಿಗಳಿದ್ದು, ಒಂದು ಕೇಂದ್ರಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆಯಿದ್ದು, ಹಂಪಸಂದ್ರಮತ್ತು ಬೀಚಗಾನಹಳ್ಳಿ ಕೇಂದ್ರಕ್ಕೆ ಗುಡಿಬಂಡೆ ಯಿಂದ ವ್ಯವಸ್ಥೆಮಾಡಲಾಗುತ್ತಿದೆ. ಸೋಮೇನಹಳ್ಳಿ ಹೋಬಳಿ ಭಾಗಕ್ಕೆಪೆರೇಸಂದ್ರದಿಂದ ತುರ್ತು ವ್ಯವಸ್ಥೆ ಮಾಡುತ್ತಿದ್ದು, ಎಲ್ಲಾ ಕೇಂದ್ರಗಳಲ್ಲೂ ವೈದ್ಯರು, ಸಿಬ್ಬಂದಿ ಇದ್ದಾರೆ. -ನರಸಿಂಹಮೂರ್ತಿ, ಟಿಎಚ್‌ಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.