ಮತದಾನಕ್ಕೆ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳು!
Team Udayavani, May 9, 2023, 3:21 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಬುಧವಾರ ನಡೆಯಲಿರುವ ಮತದಾನ ಪ್ರಮಾಣ ಹೆಚ್ಚಿಸಲು ಮತದಾರರನ್ನು ಆಕರ್ಷಿ ಸಲು ಜಿಲ್ಲಾದ್ಯಂತ ಬರೋಬರಿ 50 ಮತಗಟ್ಟೆ ಕೇಂದ್ರಗಳನ್ನು ವಿವಿಧ ಮಾದರಿಗಳಲ್ಲಿ ಸಿಂಗಾರಗೊಳಿಸಿದ್ದು, ಅಲಂಕೃತ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿವೆ.
ಜಿಲ್ಲೆಯ 5 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ 2 ರಂತೆ ಸಖೀ ಮತಗಳನ್ನು ಸ್ಥಾಪಿಸಿ ಸಂಪೂರ್ಣ ಮಹಿಳಾ ಅಧಿಕಾರಿಗಳನ್ನೇ ಆ ಮತಗಟ್ಟೆಗಳಿಗೆ ನೇಮಕ ಮಾಡಿದ್ದು, ಸಖಿ ಮತಗಟ್ಟೆಗಳನ್ನು ನಾವೀನ್ಯ ಪೂರ್ಣ ವಾಗಿ ಸಜ್ಜುಗೊಳಿಸಲಾಗಿದೆ. ಅಲ್ಲದೇ ಪ್ರತಿ ಕ್ಷೇತ್ರಕ್ಕೆ ತಲಾ ಒಂದರಂತೆ 5 ವಿಕಲಚೇತನ ಮತಗಟ್ಟೆ ಸ್ಥಾಪಿಸಲಾಗಿದೆ.
ಗ್ರಾಪಂ ಹಾಗೂ ಸ್ಥಳೀಯ ಗ್ರಾಪಂಗಳ ಸಹಕಾರೊಂದಿಗೆ ಮಹಿಳೆಯರು ಮತ್ತು ಯುವಕರನ್ನು ಮತದಾನ ಮಾಡಲು ಆಕರ್ಷಿಸಲು ಮತಗಟ್ಟೆ ಕೇಂದ್ರಗಳನ್ನು ವಿಶೇಷ ಕಾಳಜಿ ಅನೇಕ ಮತಗಟ್ಟೆ ಕೇಂದ್ರಗಳಿಗೆ ಹೊಸ ರೂಪ ನೀಡಿದ್ದು, ಶೃಂಗಾರಗೊಂಡಿರುವ ಮತಗಟ್ಟೆ ಕೇಂದ್ರಗಳು ಯುವಕರನ್ನು ಮತ್ತು ಮಹಿಳಾ ಮತದಾರರನ್ನು ಆಕರ್ಷಿಸುತ್ತಿವೆ. ಮತಗಟ್ಟೆಗಳಿಗೆ ಸುಲಭವಾಗಿ ವಿಕಲಚೇತನರು ನಡೆದುಕೊಂಡು ಬರಲು ಅನುಕೂಲ ಕಲ್ಪಿಸುವ ಸಲುವಾಗಿ ತ್ರಿಚಕ್ರ ಸೈಕಲ್‌ಗಳ ಜೊತೆಗೆ ವೀಲ್ ಚೇರ್ ವ್ಯವಸ್ಥೆಗಳನ್ನು ಸಹ ಒದಗಿಸಲಾಗಿದೆ.
ನೆರಳಿನ ವ್ಯವಸ್ಥೆ: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೇಸಿಗೆ ಇರುವ ಕಾರಣದಿಂದ ಮತದಾನಕ್ಕೆ ಬರುವ ಮತದಾರರಿಗೆ ಜಿಲ್ಲಾಡಳಿತವೇ ನೆರಳಿನ ವ್ಯವಸ್ಥೆ ಮಾಡುತ್ತಿದೆ. ಮತಗಟ್ಟೆಗಳ ಹೊರಗೆ ಶಾಮಿಯಾನ ಜೊತೆಗೆ ತೆಂಗಿನ ಗರಿಗಳನ್ನು ಬಳಸಿ ಸಂಪ್ರದಾಯಕವಾದ ಚಪ್ಪರ ಹಾಕುವಂತೆ ಸೂಚಿಸಲಾಗಿದೆ. ಮತಗಟ್ಟೆ ಕೇಂದ್ರಗಳ ಬಳಿ ಇರುವ ಶಾಲಾ ಕೊಠಡಿಗಳನ್ನು ನೆರಳಿಗಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ 1281 ಮತಗಟ್ಟೆಗಳು: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,281 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಅವುಗಳಲ್ಲಿ 1040 ಸ್ಥಳಗಳಲ್ಲಿ ಇವೆ. ಗೌರಿಬಿದನೂರಲ್ಲಿ 259, ಬಾಗೇಪಲ್ಲಿ 263, ಚಿಕ್ಕಬಳ್ಳಾಪುರದಲ್ಲಿ 252, ಶಿಡ್ಲಘಟ್ಟದಲ್ಲಿ 242, ಚಿಂತಾಮಣಿಯಲ್ಲಿ 265 ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳಲ್ಲಿ ತಲಾ 5 ಸಖೀ, 5 ವಿಕಲಚೇತನರ ಮತಗಟ್ಟೆ, 5 ಯುವಕ, ನೌಕರರ ಕಾರ್ಯನಿರ್ವಹಿಸುವ ಮತಗಟ್ಟೆಗಳು, ಸಾಂಪ್ರದಾಯಿಕ 5 ಹಾಗೂ ಥೀಮ್ ಮತಗಟ್ಟೆಗಳು 5 ಸೇರಿ ಒಟ್ಟು 50 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.