ಅಪರೇಷನ್ ಕಮಲದಿಂದ ಬಿಜೆಪಿಗೆ ಅಧಿಕಾರ; ವೀರಪ್ಪ ಮೊಯ್ಲಿ
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಇತರೆ ಪಕ್ಷಗಳಿಗೆ ಇಲ್ಲಿ ನೆಲೆ ಇಲ್ಲ
Team Udayavani, Oct 21, 2022, 6:22 PM IST
ಗುಡಿಬಂಡೆ: ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಬಂದ ಬಿಜೆಪಿ ಸರ್ಕಾರ ರಾಜಕೀಯ ಹಿತಾಸಕ್ತಿಗಾಗಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಅತಿ ಹೆಚ್ಚು ಬಡತನದಿಂದ ನರಳುತ್ತಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ. ಆದರೆ, ಈಗಿನ ಪ್ರಧಾನಿ ಮೋದಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆ ಮಾಡಲು ಕ್ರಮ ತೆಗೆದುಕೊಳ್ಳುವ ಬದಲು, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ವಾಗ್ಧಾಳಿ: ಸಂಸ್ಕೃತಿ, ಜನಾಂಗ, ಧರ್ಮ, ಆಚಾರ ವಿಚಾರಗಳಲ್ಲಿ ವೈಮನಸ್ಸು ಮೂಡುವಂತೆ ಮಾಡಿ, ಅಧಿ ಕಾರದ ಚುಕ್ಕಾಣಿ ಹಿಡಿಯಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ವಿಧಾನಸಭೆ ಚುನಾವಣೆ ದೊಡ್ಡ ಸವಾಲು: ನಂತರ ವಿಧಾನ ಪರಿಷತ್ ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆ ದೊಡ್ಡ ಸವಾಲಾಗಿದ್ದು, ಹಣ ಮತ್ತು ಜಾತಿ ಬಲದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಪರೇಷನ್ ಕಮಲದ ಮೂಲಕ ಕೃತಕ ಬಹುಮತ ಪಡೆದು ಅಧಿಕಾರ ನಡೆಸುತ್ತಿದ್ದು, ಈ ಸರ್ಕಾರದ ಭ್ರಷ್ಟಾಚಾರ, ಜನ ವಿರೋಧಿ ನೀತಿಗಳು, ವೈಫಲ್ಯದ ವಿರುದ್ಧ ಜನರ ಬಳಿ ತಲುಪಿಸಿ, ಆ ಮೂಲಕ ಹೋರಾಟ ಮಾಡಬೇಕಾಗಿದೆ
ಎಂದು ಹೇಳಿದರು.
9 ಕ್ಷೇತ್ರಗಳಲ್ಲಿ ಭದ್ರ ಬುನಾದಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಭದ್ರ ಬುನಾದಿಯನ್ನು ಹೊಂದಿದೆ. ಈ ಭಾಗದಲ್ಲಿ ಇನ್ನಷ್ಟು ಶ್ರಮವಹಿಸಿ 12 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಇತರೆ ಪಕ್ಷಗಳಿಗೆ ಇಲ್ಲಿ ನೆಲೆ ಇಲ್ಲ ಎಂಬುದನ್ನು ತೋರಿಸಿ, ಬಿಜೆಪಿಯ ಭ್ರಷ್ಟಾಚಾರನ್ನು ಪ್ರತಿ ಹಳ್ಳಿಗೂ ಹಾಗೂ ಪ್ರತಿ ಒಬ್ಬರಿಗೂ ಮುಟ್ಟಿಸುವಂತಹ ಕೆಲಸ ಮಾಡಿ, ಬಿಜೆಪಿಯನ್ನು ಸೋಲಿಸಬೇಕು ಎಂದು ವಿವರಿಸಿದರು.
ಆಯ್ಕೆ ಆಗುವುದು ಖಚಿತ: ಅವಳಿ ಜಿಲ್ಲೆಯಲ್ಲಿ ಹಿಂದೆದೂ ಮಾಡದಂತಹ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಗುಡಿಬಂಡೆಯಲ್ಲಿ ಅದ್ಧೂರಿಯಾಗಿ ನೋಡಿದರೆ, ಮುಂಬರುವ ಚುನಾವಣೆಯಲ್ಲೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಸುಬ್ಟಾರೆಡ್ಡಿ ಅವರೇ ಮತ್ತೂಮ್ಮೆ ಆಯ್ಕೆ ಆಗುವುದು ಖಚಿತ ಎಂದು ಹೇಳಿದರು.
ನಂತರ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಮಾತನಾಡಿ, ಬಿಜೆಪಿಯಂತೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವ ಅವಶ್ಯಕತೆ ನಮಗಿಲ್ಲ, ಪಪಂನಲ್ಲಿ ಒಂದೂ ಸದಸ್ಯ ಸ್ಥಾನ ಗೆಲ್ಲದ ಬಿಜೆಪಿ ಅಧಿಕಾರ ಪಡೆಯಲು ಹೇಗೆ ಸಾಧ್ಯವಾಯಿತು. ಇದರ ಹಿಂದೆ ಹಣಬಲ ಕೆಲಸ ಮಾಡಿಲ್ಲವೆ, ಅನ್ಯ ಪಕ್ಷಗಳ ಅಧಿಕಾರ ಹಾಗೂ ಹಣದಾಸೆಗೆ ಬಲಿಯಾಗುವ ಮನುಷ್ಯ ನಾನಲ್ಲ, ನಾನು ನಿಯತ್ತಿನಿಂದ ಬದುಕುವವನು, ಬೇರೆ ಪಕ್ಷಕ್ಕೆ ಹೋಗಿ ಅಧಿಕಾರ ಪಡೆದು ನನ್ನ ಕ್ಷೇತ್ರದ ಮತದಾರರಿಗೆ ಮುಖ ತೋರಿಸಲಾಗದೆ ಮುಚ್ಚಿಕೊಂಡು ಕಾರಿನ ಗ್ಲಾಸ್ ಮುಚ್ಚಿಕೊಂಡು ಹೋಗುವ ಅವಶ್ಯಕತೆ ನನಗಿಲ್ಲ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.