ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38 ಸಾವಿರ ಬಡ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲು ಆದ್ಯತೆ
Team Udayavani, Nov 6, 2021, 9:48 PM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಡವರಿಗೆ ಸ್ವಾಭಿಮಾನದಿಂದ ಜೀವನ ನಡೆಸಲು ಮತ್ತು ತಮ್ಮದೆ ಆದ ಮನೆ ನಿರ್ಮಿಸಿಕೊಳ್ಳುವ ಕನಸನ್ನು ನನಸು ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಸುಮಾರು 838 ಎಕರೆ ಸರ್ಕಾರಿ ಜಮೀನು ಗುರುತಿಸಿ ನಿವೇಶನಗಳನ್ನಾಗಿ ಹಂಚಲು ಮೀಸಲಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯ ಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ (ಗ್ರಾಮ ವಾಸ್ತವ್ಯ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರತಿಯೊಬ್ಬ ಬಡವರಿಗೆ ಪಕ್ಕಾ ಮನೆಗಳು ನಿರ್ಮಿಸಿಕೊಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಮತ್ತು ರಾಜಸ್ವ ನಿರೀಕ್ಷಕರನ್ನು ಬೆನ್ನತ್ತಿ ಸರ್ಕಾರದ ಜಾಗವನ್ನು ಗುರುತಿಸಿ ಅದನ್ನು ನಿವೇಶನಗಳನ್ನಾಗಿ ವಿಂಗಡಿಸಲು ಕ್ರಮ ಕೈಗೊಂಡು ಸುಮಾರು 838 ಎಕರೆ ಜಮೀನು ಮೀಸಲಿಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಜಿಲ್ಲೆಯ 38 ಸಾವಿರ ಕುಟುಂಬಗಳಿಗೆ ವಸತಿ ಭಾಗ್ಯ ಯೋಜನೆಯನ್ನು ಕಲ್ಪಿಸಲು ಪ್ರಥಮ ಆದ್ಯತೆ ನೀಡಿದ್ದೇವೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ 750 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿಗಳನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪುರ ಗ್ರಾಮ ಪಂಚಾಯಿತಿ ಸಹಿತ 18 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿಗಳನ್ನಾಗಿ ಗುರುತಿಸಿ ಈಗಾಗಲೇ ಶಿಫಾರಸ್ಸು ಮಾಡಿದ್ದೇವೆ ಎಂದ ಸಚಿವರು ಕಳೆದ ವಾರದಿಂದ ಪುರ ಗ್ರಾಪಂ ಎಲ್ಲಾ ಇಲಾಖೆಗಳ ಸಹಕಾರದೊಡನೆ 2916 ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಅದೇ ರೀತಿಯ ಸುಮಾರು 700 ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವಿಮೆ ಸೌಲಭ್ಯವನ್ನು ಸಹ ಕಲ್ಪಿಸಿ ಕಾರ್ಡ್‍ಗಳನ್ನು ವಿತರಿಸಲಾಗುತ್ತದೆ ಎಂದರು.
ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳು,ಹಿಂದುಳಿದ ವರ್ಗಗಳು,ಬಲಹೀನ ವರ್ಗದವರು ಹೆಚ್ಚಾಗಿದ್ದಾರೆ ಹೀಗಾಗಿ ಪುರ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು 10 ಎಕರೆ ಜಮೀನು ಮೀಸಲಿಡಲಾಗಿದೆ, ಡಿಎಂಎಫ್‍ಟಿ ಅನುದಾನದಲ್ಲಿ ಪುರ ಗ್ರಾಮ ಪಂಚಾಯಿತಿಗೆ 2 ಕೋಟಿ ರೂಗಳ ಅನುದಾನವನ್ನು ನೀಡಲಾಗಿದೆ ಎಂದ ಸಚಿವರು ಪುರ ಗ್ರಾಮದ ಶಾಲೆಗೆ 4 ಕೊಠಡಿಗಳ ನಿರ್ಮಾಣಕ್ಕೆ 44 ಲಕ್ಷ, ಪುರ ಗ್ರಾಮದಿಂದ ಭಕ್ತರಹಳ್ಳಿ ಗ್ರಾಮಕ್ಕೆ 70 ಲಕ್ಷ,ಪುರ ಗ್ರಾಮದಿಂದ ವರಣಿ ಗ್ರಾಮದವರಿಗೆ 75 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃಧ್ಧಿಗೊಳಿಸಲಾಗುತ್ತದೆ ಎಂದರು.
ಇದನ್ನೂ ಓದಿ:ಪಂಜಾಬ್‌ನಲ್ಲಿ ನಿಲ್ಲದ ಸಿಧು ತೊಳಲಾಟ ಈಗ ಎ.ಜಿ. ವಿಚಾರದಲ್ಲಿ ಮುನಿಸು
ಸಾಮಾನ್ಯವಾಗಿ ತಹಶೀಲ್ದಾರ್ ಅವರು ಕೈಗೆ ಸಿಗುವುದಿಲ್ಲ ಆದರೇ ಪುರ ಗ್ರಾಮಕ್ಕೆ ನಿಮ್ಮ ಡೀಸಿನೇ ಬಂದಿದ್ದಾರೆ, ಒಬ್ಬ ಕಾನ್ಸಟೆಬಲ್ ಸಿಗುವುದಿಲ್ಲ ಆದರೇ ಎಸ್.ಪಿ ಅವರು ನಿಮ್ಮೂರಿಗೆ ಬಂದಿದ್ದಾರೆ ಅದೇ ರೀತಿ ಪಿಡಿಓಗಳು ಸಿಗುವುದಿಲ್ಲ ಜಿಪಂ ಸಿಇಓ ಅವರು ಬಂದಿದ್ದಾರೆ ಎಂದ ಸಚಿವರು ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಸರ್ಕಾರದ ಕಣ್ಣು ಬಾಯಿ ಕಿವಿ ಇದ್ದಂತೆ ಅವರು ಮನಸ್ಸು ಮಾಡಿದರೆ ಸ್ಥಳದಲ್ಲೇ ಪರಿಹಾರ ಸಿಗುತ್ತದೆ ಅವರೆಲ್ಲರು ನಿಮ್ಮೂರಿಗೆ ಬಂದಿದ್ದಾರೆ ಇದು ಒಂದು ರೀತಿಯಲ್ಲಿ ದೀಪಾವಳಿ ಸಂಭ್ರಮ ಇದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಓ ಪಿ.ಶಿವಶಂಕರ್, ಉಪ ವಿಭಾಗಾಧಿಕಾರಿ ರಘುನಂದನ್,ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಜಿಲ್ಲಾ ಅರಣ್ಯಾಧಿಕಾರಿ ಅರರ್ಸಲನ್, ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಡಿ.ಎಸ್.ಆನಂದ್‍ರೆಡ್ಡಿ(ಬಾಬು), ಪುರ ಗ್ರಾಪಂ ಅಧ್ಯಕ್ಷ ವಿರೂಪಾಕ್ಷಗೌಡ, ಉಪಾಧ್ಯಕ್ಷ ಮಾಲಾಶ್ರೀ ಶಂಕರ್,ಕೋವಿಮುಲ್ ನಿರ್ದೇಶಕ ಸುಬ್ಬಾರೆಡ್ಡಿ, ಹನುಮೇಗೌಡ,ನಾರಾಯಣಸ್ವಾಮಿ,ಮಾಜಿ ಜಿಪಂ ಮಾಜಿ ಸದಸ್ಯ ಜಗನ್ನಾಥ್,ಬಾಲಕೃಷ್ಣ,ಸುದರ್ಶನ್‍ರೆಡ್ಡಿ,ಮಿಲ್ಟನ್ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.