ಜಿಲ್ಲೆಯಲ್ಲಿ ಕನ್ನಡ ಭಾಷೆಗೆ ಕುತ್ತು
Team Udayavani, Nov 1, 2019, 3:50 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಾಗಿ 12 ವರ್ಷ ಕಳೆದರೂ ಚಿಕ್ಕಬಳ್ಳಾ ಪುರ ಜಿಲ್ಲಾದ್ಯಂತ ಕನ್ನಡ ಓದುಬರಹ ಬಾರದವರ ಸಂಖ್ಯೆ ಬರೋಬ್ಬರಿ 2.24 ಲಕ್ಷದಷ್ಟು ಇದ್ದು, ಜಿಲ್ಲೆಯ ಒಟ್ಟಾರೆ ಜನಸಂಖ್ಯೆ ಯಲ್ಲಿ 2.24.828 ಮಂದಿ ಕನ್ನಡ ಭಾಷೆಯ ಅರಿವೇ ಇಲ್ಲದಿರುವುದು ಜಿಲ್ಲಾಡಳಿತ ನೀಡುತ್ತಿರುವ ಅಂಕಿ,ಅಂಶಗಳೇ ಸಾರಿ ಹೇಳುತ್ತಿವೆ.
ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ: ಆಂಧ್ರದಗಡಿಯಲ್ಲಿರುವ ಜಿಲ್ಲೆಯಲ್ಲಿ ತೆಲುಗು ಪ್ರಾಬಲ್ಯ ಮೊದಲಿನಿಂದಲೂ ಇರುವ ಪರಿಣಾಮ ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಜಿಲ್ಲೆಯಲ್ಲಿ ಶೇ.28.74 ರಷ್ಟು ಇದ್ದು ಅದರಪರಿಣಾಮ ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಮೇಲೆ ಬಿದ್ದಿದೆ. ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಹೊರತುಪಡಿಸಿದರೆ ಉಳಿದಂತೆ ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕುಗಳು ಆಂಧ್ರಪ್ರದೇಶಕ್ಕೆ ಕೂಗಳತೆಯ ದೂರದಲ್ಲಿದ್ದು, ತೆಲುಗು ಪ್ರಾಬಲ್ಯದ ಮಧ್ಯೆ ಕನ್ನಡ ಇಲ್ಲಿ ಮಂಕಾಗಿದ್ದರೂ ಹೇಳ್ಳೋರೂ ಕೇಳ್ಳೋರು ಇಲ್ಲವಾಗಿದೆ.
ತೆಲುಗು ಪ್ರಾಬಲ್ಯ: ಗೌರಿಬಿದನೂರಿಗೆ ಆಂಧ್ರದ ಹಿಂದೂಪುರ ಹತ್ತಿರವಾಗಿದ್ದರೆ, ಗುಡಿಬಂಡೆ ಬಾಗೇಪಲ್ಲಿಗೆ ಅನಂತಪುರ, ಕದಿರಿ ಹತ್ತಿರವಾಗಿದೆ. ಇನ್ನೂ ಚಿಂತಾಮಣಿಗೆ ಚಿತ್ತೂರು ಜಿಲ್ಲೆಯ ಮದನಪಲ್ಲಿ, ಪುಗಂನೂರು ಹತ್ತಿರದಲ್ಲಿದ್ದು, ತೆಲುಗು ಭಾಷೆ ಆರ್ಭಟ ಇಲ್ಲಿ ಸಾಮಾನ್ಯವಾಗಿದೆ.
ವ್ಯತಿರಿಕ್ತ ಪರಿಣಾಮ: ಜನರ ದಿನನಿತ್ಯದ ಬದುಕಿನಲ್ಲಿಕನ್ನಡಕ್ಕಿಂತ ತೆಲುಗು ಹೆಚ್ಚು ಆವರಿಸಿರುವುದುಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ 12,55,104 ಮಂದಿ ಜನಸಂಖ್ಯೆ ಇದ್ದು, ಆ ಪೈಕಿ ಪುರುಷರ ಸಂಖ್ಯೆ6,36,437 ಇದ್ದರೆ, ಮಹಿಳೆಯರ ಸಂಖ್ಯೆ 6,18,667 ಇದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ ಅನಕ್ಷರಸ್ಥರ ಸಂಖ್ಯೆ ಇರುವ ಪರಿಣಾಮ ಕನ್ನಡ ಭಾಷಾ ಬೆಳೆವಣಿಗೆಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಜಿಲ್ಲಾಡಳಿತದ ಅಂಕಿ, ಅಂಶಗಳಲ್ಲಿ ಸ್ಪಷ್ಟ: ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಅವಲೋಕಿಸಿದರೆ ಪುರುಷರ ಪ್ರಮಾಣ ಸರಾಸರಿ ಶೇ.77.76 ರಷ್ಟು ಇದ್ದರೆ, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.61.76 ರಷ್ಟು ಇದೆ. ಜಿಲ್ಲೆಯ ಒಟ್ಟಾರೆ ಸಾಕ್ಷರತಾ ಪ್ರಮಾಣ ಶೇ.69.76 ರಷ್ಟು ಮಾತ್ರ ಇದೆ. ಇನ್ನೂ ಶೇ.28.74ರಷ್ಟು ಸಾಕ್ಷರತೆ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣುತ್ತಿರುವುದು ಜಿಲ್ಲಾಡಳಿತ ನೀಡಿರುವ ಅಂಕಿ, ಅಂಶಗಳಲ್ಲಿ ಸ್ಪಷ್ಟವಾಗಿದೆ.
ಹಳ್ಳ ಹಿಡಿದ ಸಾಕ್ಷರತಾ ಕಾರ್ಯಕ್ರಮ: ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಕಳೆದ ಆ.23ಕ್ಕೆ 12 ವರ್ಷ ತುಂಬಿ 13ಕ್ಕೆ ಪದಾರ್ಪಣೆ ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಇಲಾಖೆ ರೂಪಿಸುತ್ತಿರುವ ಸಾಕ್ಷರತಾ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಸಮರ್ಪಕವಾಗಿ ಪಾರದರ್ಶಕವಾಗಿ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯದೇ ಅನಕ್ಷರಸ್ಥರು ಸಾಕ್ಷರರಾಗದೇ ಉಳಿದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಅನಕ್ಷರಸ್ಥರ ಪೈಕಿ ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲೂಕುಗಳು ಮೊದಲಿದ್ದರೆ, ನಂತರ ಸ್ಥಾನದಲ್ಲಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಇದೆ. ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿಂದೆಯೆಲ್ಲಾ ನಡೆದ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ವಯಸ್ಕರ ಪರೀಕ್ಷೆಗಳಲ್ಲಿ ಕೂಡ ನಕಲು ಮಾಡಿಸಲಾಗಿದೆ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದೆ.
ಯಥಾಸ್ಥಿತಿ: ಜಿಲ್ಲೆಯಲ್ಲಿ ಅನಕ್ಷಸ್ಥರಿಗೆ ಕನಿಷ್ಠ ಸಹಿ ಮಾಡುವುದರ ಜೊತೆಗೆ ಓದು ಬರಹ ಬರೆಯುವ ರೀತಿಯಲ್ಲಿ ಸಾಕ್ಷರರನ್ನು ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾರ್ಷಿಕ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಗಡಿ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಯಾವುದೇ ಪರಿಣಾಮ ಬೀರದೆ ಅನಕ್ಷರಸ್ಥರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುವುದರ ಬದಲು ಯಥಾಸ್ಥಿತಿ ಇದೆ.
ಅದರ ಪರಿಣಾಮ ಜಿಲ್ಲೆಯ ಒಟ್ಟಾರೆ ಪ್ರಗತಿ, ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತಿದೆಯೆಂಬ ಆರೋಪ ಪ್ರಜ್ಞಾವಂತ ನಾಗರಿಂದ ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯ ಅನಕ್ಷರಸ್ಥರಿಗೆ ಕನಿಷ್ಠ ಕನ್ನಡ ಓದು, ಬರಹ ಬರೆಯುವ ರೀತಿಯಲ್ಲಿ ಅವರಲ್ಲಿನ ಅಕ್ಷರದ ಹಸಿವನ್ನು ನೀಗಿಸು ಕೆಲಸವನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಿ ಎನ್ನುವುದು ಕನ್ನಡ ಪ್ರೇಮಿಗಳ ಆಶಯವಾಗಿದೆ.
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.