ಸರ್ಕಾರದ ವಿರುದ್ಧ ಸಂಘಟನೆಗಳ ಕಿಡಿ
Team Udayavani, Sep 29, 2020, 1:16 PM IST
ಗೌರಿಬಿದನೂರು: ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆ ರದ್ದು ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೌರಿಬಿದನೂರು ತಾಲೂಕಿನಲ್ಲಿ ಯಶಸ್ವಿಯಾಯಿತು.
ಸಿಐಟಿಯುಜಿಲ್ಲಾಪ್ರಧಾನಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ರೈತ ಮತ್ತು ಕಾರ್ಮಿಕರಿಗೆ ಕಂಟಕರಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಿರುವುದು ಸಂವಿಧಾನ ವಿರೋಧಿ ಎಂದು ದೂರಿದರು. ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಆರ್.ಎನ್.ರಾಜು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗ ಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟಕಾದಿದೆಎಂದರು.ದಲಿತಮುಖಂಡರಾದ ಇಡಗೂರು ಸೋಮಯ್ಯ, ತಾಲೂಕಿನಲ್ಲಿ ದಲಿತರಿಗೆ ರೈತರಿಗೆ ಯಾವುದೇ ರೀತಿಯಕೆಲ ಮಾಡಿಕೊಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.
ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರಾಂತ ರೈತ ಸಂಘದಅಧ್ಯಕ್ಷರಾದ ಎನ್.ಆರ್.ರವಿಚಂದ್ರರೆಡ್ಡಿ, ಆಹಾರ ಉತ್ಪನ್ನ ಗಳಿಗೆ ಬೇರೆ ದೇಶಗಳ ಮೇಲೆ ಅವಲಂ ಬನೆಆಗುವ ದಿನ ದೂರವಿಲ್ಲ ಎಂದರು. ಕರವೇ ಜಿ.ಎಲ್.ಅಶ್ವತ್ಥನಾರಾ ಯಣ್, ಪ್ರಭು, ರೈತ ಮುಖಂಡರಾದ ಗುಂಡಾಪುರ ಲೋಕೇಶ್ ಗೌಡ, ಮುದ್ದರಂಗಪ್ಪ, ಬಾಲಕೃಷ್ಣ, ಕೃಷ್ಣಪ್ಪ ಮಾತನಾಡಿದರು. ದಲಿತ ಸಂಘಟನೆ, ಆಟೋ, ವರ್ತಕರು, ಹಮಾಲಿ ಸಂಘಗಳು, ಅಂಗನವಾಡಿ, ಕೂಲಿ ಕಾರ್ಮಿಕರ ಸಂಘ,ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು ಬಂದ್‌ಗೆ ಬೆಂಬಲ ನೀಡಿದವು.
ಬಾಗೇಪಲ್ಲಿಯಲ್ಲಿ ಉತ್ತಮ ಪ್ರತಿಕ್ರಿಯೆ :
ಬಾಗೇಪಲ್ಲಿ: ವಿವಿಧ ಸಂಘಟನೆಗಳಿಂದ ತಾಲೂಕಿನಲ್ಲಿ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 6ಗಂಟೆ ಸಮಯದಲ್ಲಿ ಬೆಂಗಳೂರು ಕಡೆ ಹೊರಡಲು ಸಿದ್ಧ ವಾಗಿದ್ದ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳನ್ನು ಮುಂದೆ ಹೋಗದಂತೆ ಪ್ರತಿ ಭಟನಾಕಾರರು ತಡೆದಾಗ, ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು-ಪ್ರತಿ ಭಟನಾಕಾರರ ಜತೆ ಮಾತಿನ ಚಕಮಕಿ ನಡೆಯಿತು.
ಮಣಿದ ಅಧಿಕಾರಿಗಳು ಸಾರಿಗೆ ಘಟಕಕ್ಕೆ ಬಸ್‌ಗಳನ್ನು ವಾಪಸ್ ಕಳುಹಿಸಿದರು. ವಾಹನ ಸಂಚಾರಕ್ಕೆ ಅಡ್ಡಿ ಪಡಿಸಲು ಬಸ್ ನಿಲ್ದಾಣಮುಂಭಾಗ ಕಲ್ಲುಗಳನ್ನು ಹಾಕಿಸಿದ್ದರು. ಸುದ್ದಿ ತಿಳಿದ ಪಿಎಸ್‌ಐ ಜಿ.ಕೆ.ಸುನಿಲ್ ಕುಮಾರ್ ಸೈಜುಕಲ್ಲು ತೆರವಿಗೆ ಸೂಚಿಸಿದರು.
ಬೆಂಗಳೂರುಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ-7, ಎಪಿಎಂಸಿ ಮಾರುಕಟ್ಟೆ ಬಿಕೋ ಎನ್ನುವಂತಾಗಿತ್ತು.ಬೆಳಗ್ಗೆಯಿಂದಲೇ ಅಂಗಡಿ,ಹೋಟಲ್,ಬಾರ್,ಫುಟ್‌ಪಾತ್ ಅಂಗಡಿ ಮುಚ್ಚಿದ್ದವು.ಬ್ಯಾಂಕ್,ಅಂಚೆ ಕಚೇರಿ ಹಾಗೂ ವಿವಿಧ ಇಲಾಖೆಗಳ ಕಚೇರಿಗಳು ಬಾಗಿಲು ತೆರದಿದ್ದರೂ ಜನರ ಹಾಜರಾತಿ ಇಲ್ಲದೆ ಬಿಕೋ ಎನ್ನುತ್ತಿದ್ದವು. ರಸ್ತೆ ಸಾರಿಗೆ ಸಂಸ್ಥೆ ಬಸ್,
ಖಾಸಗಿ ಬಸ್, ಆಟೋಗಳ ಸಂಚಾರವಿಲ್ಲದೆ ರಸ್ತೆಗಳು ಖಾಲಿಯಾಗಿದ್ದವು. ವೃತ್ತ ನಿರೀಕ್ಷಕ ನಯಾಜ್‌ಬೇಗ್,ಪಿಎಸ್‌ಐ ಸುನಿಲ್‌ಕುಮಾರ್ ನೇತೃತ್ವದಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಪ್ರಜಾ ಸಂಘರ್ಷ ಸಮಿತಿ ಆಶ್ರಯದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಜಿ.ವಿ.ಶ್ರೀರಾಮರೆಡಿ,xಕೇಂದ್ರ- ರಾಜ್ಯ ಸರ್ಕಾರಗಳು ಕೃಷಿ ಕಾಯ್ದೆ ಗಳಿಂದ ರೈತರ ಪಾಲಿಗೆ ಮರಣ ಶಾಸನವಾಗಿದೆ. ರಾಜ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಕಾಯ್ದೆ ಅಂಗೀಕಾರವಾಗಿಲ್ಲ. ಇದರಿಂದ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಮತ್ತೂಂದು ಸುಗ್ರೀವಾಜ್ಞೆ ತರಲು ಹುನ್ನಾರ ನಡೆಸುತ್ತಿದೆ ಎಂದರು. ತಾಲೂಕಿನ ಚೇಳೂರು, ಪಾತಪಾಳ್ಯ, ಗೂಳೂರು ಹಾಗೂ ಮಿಟ್ಟೇಮರಿಗಳಲ್ಲಿ ಯಶಸ್ವಿ ಬಂದ್ ಆಚರಿಸಲಾಯಿತು.
ಪ್ರಜಾ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚನ್ನ ರಾಯಪ್ಪ, ಸಿಪಿಎಂ ಪಿ.ಮಂಜುನಾಥ ರೆಡ್ಡಿ, ಮಹಮದ್ ಅಕ್ರಂ, ಡಿ.ಅಶ್ವತ್ಥನಾ ರಾಯಣ, ಹೇಮಚಂದ್ರ, ಜೆಡಿಎಸ್‌ನ ಎ.ಸೂರ್ಯನಾರಾ ಯ ಣರೆಡ್ಡಿ, ಮಹ ಮದ್ ಎಸ್.ನೂರು ಲ್ಲಾ, ರೈತ ಸಂಘದ ಎಸ್.ಲಕ್ಷ್ಮಣರೆಡ್ಡಿ, ಜೀವಿಕ ನಾರಾ ಯಣಸ್ವಾಮಿ, ಚೌಡಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.