ಜಿಲ್ಲೆಯಲ್ಲಿ ಸಿಗಡಿ ಕೃಷಿ ಮಾಡಿ ಯಶಸ್ವಿಯಾದ ರಘುನಾಥ್‌ ರೆಡ್ಡಿ

ಇಂದು ವಿಶ್ವ ಮೀನುಗಾರಿಕೆ ದಿನಾಚರಣೆ

Team Udayavani, Nov 21, 2020, 3:41 PM IST

ಜಿಲ್ಲೆಯಲ್ಲಿ ಸಿಗಡಿ ಕೃಷಿ ಮಾಡಿ ಯಶಸ್ವಿಯಾದ ರಘುನಾಥ್‌ ರೆಡ್ಡಿ

ಶಿಡ್ಲಘಟ್ಟ ತಾಲೂಕಿನ ಪೂಲಕುಂಟಹಳ್ಳಿಯಲ್ಲಿ Penaeus vannamei ತಳಿಯ ಸಿಗಡಿ ಕೃಷಿ ಮಾಡಿ ಸೈ ಎನಿಸಿಕೊಂಡ ಪೂಲಕುಂಟಹಳ್ಳಿ ರಘುನಾಥ್‌ರೆಡ್ಡಿ ಮಾರಾಟ ಮಾಡಲು ಬಾಕ್ಸ್‌ಗಳಲ್ಲಿ ತುಂಬಿಸುತ್ತಿರುವುದು.

ಚಿಕ್ಕಬಳ್ಳಾಪುರ: ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ ಸೀಮಿತವಾಗಿದ್ದ ಸಿಗಡಿ ಕೃಷಿ ಇದೀಗಬಯಲುಸೀಮೆ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದು, ಜಿಲ್ಲೆಯಶಿಡ್ಲಘಟ್ಟ ತಾಲೂಕಿನ ಪೂಲಕುಂಟಹಳ್ಳಿ ರಘುನಾಥ್‌ರೆಡ್ಡಿ  ಎಂಬುವರು ಸಿಹಿನೀರಿ ನಲ್ಲಿ ಸಿಗಡಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

8 ಲಕ್ಷ ರೂ. ಆದಾಯ: ಸಾಮಾನ್ಯವಾಗಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು, ಉತ್ತರ ಕರ್ನಾಟಕದ ಬಳ್ಳಾರಿ,ರಾಯಚೂರು ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ,ತಮಿಳುನಾಡು, ಮಹಾರಾಷ್ಟ್ರ ಪ್ರದೇಶದಲ್ಲಿ ಸಿಗಡಿ ಕೃಷಿಮಾಡುತ್ತಿದ್ದರು. ಆದರೆ ಜಿಲ್ಲೆಯಲ್ಲಿ ಅದರಲ್ಲೂ ಸಿಹಿ ನೀರಿನಲ್ಲಿ ಸಿಗಡಿ ಕೃಷಿ ಮಾಡುವ ಮೂಲಕ ಪೂಲಕುಂಟಹಳ್ಳಿ ರಘು ನಾಥ್‌ರೆಡ್ಡಿ ಸೈ ಎನಿಸಿಕೊಂಡಿದ್ದಾರೆ. ಕೇವಲ 90 ದಿನಗಳಲ್ಲಿ 5-6 ಲಕ್ಷ ರೂ.ಬಂಡವಾಳ ಹಾಕಿ ಇದೀಗ ಸುಮಾರು 8 ಲಕ್ಷ ರೂ. ಆದಾಯ ಗಳಿಸಿ ಮಾದರಿಯಾಗಿದ್ದಾರೆ.

ವರದಾನ ನಿರೀಕ್ಷೆ: ಚಿಕ್ಕಬಳ್ಳಾಪುರ ಜಿಲ್ಲೆ ಎಂದರೆ ನೆನಪಾಗುವುದು ಬರಪೀಡಿತ ಜಿಲ್ಲೆ ಎಂದು. ಆದರೆ ಮಳೆಯ ನೀರನ್ನು ಆಶ್ರಯಿಸಿಕೊಂಡು ರೇಷ್ಮೆ, ತರಕಾರಿ, ಹಾಲು ಉತ್ಪಾದನೆಯಲ್ಲಿದೇಶ ವಿದೇಶದಲ್ಲಿ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಇದೀಗ ಸಿಗಡಿ ಕೃಷಿ ಪಾದಾರ್ಪಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬರಪೀಡಿತ ತಾಲೂಕಿನ ಜನರಿಗೆ ಇದು ವರದಾನವಾಗ ಬಹುದೆಂದು ನಿರೀಕ್ಷಿಸಲಾಗಿದೆ.

2 ಲಕ್ಷ ಮರಿ, 4 ಟನ್‌ ಫೀಡ್‌: ಮುಕ್ಕಾಲು ಎಕರೆ ಪ್ರದೇಶದಲ್ಲಿ 100 ಅಡಿ ಅಗಲ 300 ಅಡಿ ಉದ್ದ ಹೊಂಡ ನಿರ್ಮಿಸಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ 80 ಸಾವಿರ ವೆಚ್ಚ ಮಾಡಿ 2 ಲಕ್ಷ ಮರಿ ತಂದು ಸಿಗಡಿ ಕೃಷಿ ಮಾಡಿದ್ದಾರೆ. ಅದಕ್ಕೆ ಮೂರು ತಿಂಗಳ ಅವಧಿಯಲ್ಲಿ4 ಟನ್‌ ಫೀಡ್‌ ನೀಡಿದ್ದಾರೆ.

ನಿರೀಕ್ಷೆಗಿಂತ ಅಧಿಕ ಇಳುವರಿ: ಸಿಗಡಿ ಕೃಷಿ ಮಾಡಲು ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಿ ಮೂರು ತಿಂಗಳಿಗೆ60 ಸಾವಿರ ರೂ.ಕೂಲಿ ನೀಡಿರುವ ರೈತ ಪೂಲಕುಂಟ ಹಳ್ಳಿ ರಘುನಾಥ್‌ರೆಡ್ಡಿ ಅವರಿಗೆ ನಿರೀಕ್ಷೆಗಿಂತಲೂ ಅಧಿಕ ಸಿಗಡಿ ಇಳುವರಿ ಬಂದಿದ್ದು, ಮೊದಲ ಪ್ರಯೋಗದಲ್ಲಿ ಯಶಸ್ವಿಯಾದ ಬಳಿಕ ಸಂತಸಗೊಂಡಿದ್ದಾರೆ. ಮೀನುಗಾರಿಕೆ ಯಲ್ಲಿ ಪಿಹೆಚ್‌ಡಿ ಮಾಡಿರುವ ಡಾ. ವಿಶ್ವನಾಥ್‌ರೆಡ್ಡಿ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಸಹಾ ಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ತಮ್ಮ ಜಮೀನಿನಲ್ಲಿ ನೀರಿನ ಹೊಂಡ ನಿರ್ಮಿಸಿ ಆಂಧ್ರದ ನೆಲ್ಲೂಲು ಜಿಲ್ಲೆಯಿಂದ ಮರಿಗಳನ್ನು ತಂದು ಸಾಕಾಣಿಕೆ ಮಾಡಿ ಆದಾಯ ಗಳಿಸಿದ್ದೇನೆ. ನೆಲ್ಲೂರಿನ ಇಮ್ರಾನ್‌ ಪಾಷ ಎಂಬುವರಿಗೆ ಒಂದು ಕೆ.ಜಿ. 300 ರೂ.ಗಳಂತೆ ನಾಲ್ಕೂವರೆ ಟನ್‌ ಸೀಗಡಿ ಮಾರಾಟ ಮಾಡಿದ್ದೇನೆ. ಒಂದು ಕೆ.ಜಿ. 50 ಬಂದರೆ 35 ದರಕ್ಕೆ ಮಾರಾಟವಾಗುವ ಸೀಗಡಿಯನ್ನು ಬೆಳೆಸಲು ಬಯಲುಸೀಮೆ ಜಿಲ್ಲೆಯ ಭಾಗಗಳ ರೈತರು ಪ್ರಯೋಗ ಮಾಡಿ ಆರ್ಥಿಕವಾಗಿ ಅಭೀವೃದ್ಧಿ ಹೊಂದಬೇಕೆಂದು ಪ್ರಗತಿಪರ ರೈತ ಪೂಲಕುಂಟ ಹಳ್ಳಿ ರಘುನಾಥ್‌ರೆಡ್ಡಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಪ್ರಯೋಗ ಇದೇ ಮೊದಲು :  ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಹಾಗೂ ನೆರೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಪ್ರದೇಶದಲ್ಲಿ ಸೀಗಡಿ ಉಪ್ಪುನೀರಿನಲ್ಲಿ ಸಾಕಾಣಿಕೆ ಮಾಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಯೋಗ ಮಾಡಿ

ಪೂಲಕುಂಟಹಳ್ಳಿ ರಘುನಾಥ್‌ರೆಡ್ಡಿ ಯಶಸ್ವಿಯಾಗಿದ್ದಾರೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ ನಾಗೇಂದ್ರ (ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವರ್ಗಾವಣೆಯಾಗಿದ್ದಾರೆ) ತಿಳಿಸಿದ್ದಾರೆ. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ರೈತರು ಸೀಗಡಿ ಕೃಷಿ ಮಾಡಿ ಲಾಭಗಳಿಸ ಬಹುದಾಗಿದೆ. ಒಂದುಕೆ.ಜಿ.300 ರೂ.ಗಳಿಗೆ ಮಾರಾಟವಾಗು ತ್ತದೆ. ಇದರಲ್ಲಿ ಪ್ರೊಟೀನ್‌35% ರಷ್ಟಿದೆ. ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ. ಇದನ್ನು ದೊಡ್ಡ ದೊಡ್ಡ ಹೋಟೆಲ್‌ಗ‌ಳಲ್ಲಿ ಫ್ರೈ ಮಾಡಿ ಮಾರಾಟ ಮಾಡುತ್ತಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ 10 ಎಕರೆ ಪ್ರದೇಶದಲ್ಲಿ ಸೀಗಡಿ ಕೃಷಿಯನ್ನು ವಿಸ್ತರಿಸಲುಯೋಜನೆ ರೂಪಿಸಿ ಅದಕ್ಕಾಗಿ 100 ಸೋಲಾರ್‌ ದೀಪಗಳನ್ನು ಅಳವಡಿಸಿ ಪೂಲಕುಂಟಹಳ್ಳಿಯಲ್ಲಿ ಸೋಲಾರ್‌ ಘಟಕ ಆರಂಭಿಸಲು ಚಿಂತನೆ ಮಾಡಿದ್ದೇನೆ. ಪೂಲಕುಂಟಹಳ್ಳಿ ರಘುನಾಥ್‌ರೆಡ್ಡಿ, ಪ್ರಗತಿಪರ ರೈತ

 

ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

ಸಂಸದ ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.