ಜಿಲ್ಲೆಯ ರೈಲು ನಿಲ್ದಾಣಗಳಿಗಿಲ್ಲ ಮೇಲ್ದರ್ಜೆ ಭಾಗ್ಯ!
Team Udayavani, Aug 6, 2023, 12:46 PM IST
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ರಾಜ್ಯದ 13 ಸೇರಿದಂತೆ ದೇಶಾದ್ಯಂತ 508 ರೈಲ್ವೆ ನಿಲ್ದಾಣ ಗಳನ್ನು ಮೂಲ ಸೌಕರ್ಯ ಗಳೊಂದಿಗೆ ಮೇಲ್ದಜೇì ಗೇರಿಸಲು “ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ರಾಜ್ಯದ 13 ರೈಲ್ವೆ ನಿಲ್ದಾಣಗಳ ಪೈಕಿ ಜಿಲ್ಲೆಯ ಯಾವೊಂದು ರೈಲೈ ನಿಲ್ದಾಣವೂ ಮೇಲ್ದಜೇìಗೇರುವ ಭಾಗ್ಯ ಹೊಂದಿಲ್ಲದಿರುವುದು ಬೇಸರದ ಸಂಗತಿ.
ಹೌದು, ರೈಲ್ವೆ ಸಂಚಾರ, ವಿಸ್ತರಣೆ, ಮೂಲಭೂತ ಸೌಲಭ್ಯ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವ ಜಿಲ್ಲೆಯು ಕೇಂದ್ರ ಸರ್ಕಾರ ಮೇಲ್ದರ್ಜೇಗೇರಿಸು ತ್ತಿರುವ ರೈಲ್ವೆ ನಿಲ್ದಾಣಗಳಲ್ಲಿ ಜಿಲ್ಲೆಯ 4 ರೈಲ್ವೆ ನಿಲ್ದಾಣಗಳಲ್ಲಿ ಜಿಲ್ಲಾ ಕೇಂದ್ರದ ನಿಲ್ದಾಣ ಸೇರಿ ಒಂದು ಕೂಡ ಆಯ್ಕೆ ಗೊಳ್ಳ ದಿರುವುದು ಸಾರ್ವಜನಿಕರಲ್ಲಿ ಅದರಲ್ಲಿಯೂ ರೈಲ್ವೆ ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ.
ಅವಕೃಪೆ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಜಿಲ್ಲೆಯು ನೀರಾವರಿ ಮಾತ್ರವಲ್ಲದೇ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಇದರ ಜೊತೆಗೆ ರಾಜಧಾನಿಗೆ ಹತ್ತಿರ ಇದ್ದರೂ ರೈಲ್ವೆ ಸೌಲಭ್ಯದಲ್ಲೂ ಜಿಲ್ಲಾ ಕೇಂದ್ರ, ರಾಜ್ಯ ಸರ್ಕಾರಗಳ ಅವಕೃಪೆಗೆ ಒಳಾಗುತ್ತಿರುವುದು ಎದ್ದು ಕಾಣುತ್ತಿದೆ.
ಉತ್ತರ ಭಾರತಕ್ಕೆ ಸಂಪರ್ಕ: ಜಿಲ್ಲೆಯಲ್ಲಿ ಗೌರಿಬಿದ ನೂರು ನಗರ ದಲ್ಲಿರುವ ರೈಲ್ವೆ ನಿಲ್ದಾಣ ಇಡೀ ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ನಿಲ್ದಾಣವಾಗಿದ್ದು, ಬಹುತೇಕ ರೈಲುಗಳು ಗೌರಿಬಿದನೂರು ಮೂಲಕವೇ ಹಾದು ಹೋಗಬೇಕು. ಈ ನಿಲ್ದಾಣವೂ ಕನಿಷ್ಠ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಆದರೂ ಕೇಂದ್ರ ಸರ್ಕಾರ ಮೇಲ್ದಜೇìಗೇರಿಸು ತ್ತಿರುವ ರೈಲ್ವೆ ನಿಲ್ದಾಣಗಳ ಪಟ್ಟಿ ಯಲ್ಲಿ ಜಿಲ್ಲೆಯ ಯಾವ ರೈಲ್ವೆ ನಿಲ್ದಾಣವೂ ಆಯ್ಕೆ ಗೊಳ್ಳದೇ ಇರುವುದು ಅಸಮಾಧಾನ ಮೂಡಿಸಿದೆ.
ಮೂಲ ಸೌಕರ್ಯದಿಂದ ವಂಚಿತ: ಗೌರಿಬಿದನೂರು ಮೂಲಕ ಉತ್ತರದ ಭಾರತದ ದೆಹಲಿಗೆ ನಿತ್ಯ ಹತ್ತಾರು ರೈಲುಗಳ ಸಂಚಾರ ಇರು ತ್ತದೆ. ರೈಲುಗಳ ಜೊತೆಗೆ ಪ್ರಯಾಣಿಕರ ಒತ್ತಡ ಕೂಡ ಈ ನಿಲ್ದಾಣದಲ್ಲಿದೆ. ಆದರೆ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ನಿಲ್ದಾಣ ಮೂಲ ಸೌಕರ್ಯ ದಿಂದ ವಂಚಿತವಾಗಿದ್ದು, ಕನಿಷ್ಠ ಗೌರಿಬಿದ ನೂರು ನಿಲ್ದಾಣವನ್ನಾದರೂ ಮೇಲ್ದಜೇìಗೇರಿಸ ಬಹುದಿತ್ತು ಎಂಬ ಮಾತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹೆಸರಿಗಷ್ಟೇ ಆದರ್ಶ ನಿಲ್ದಾಣಗಳು: ಈ ಹಿಂದೆ ಚಿಂತಾಮಣಿ ಹಾಗೂ ಶಿಡ್ಲಘಟ್ಟ ರೈಲ್ವೆ ನಿಲ್ದಾಣಗಳನ್ನು ಆದರ್ಶ ರೈಲ್ವೆ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ಹೆಸರಿಗಷ್ಟೇ ಆದರ್ಶ ನಿಲ್ದಾಣಗಳಾಗಿದ್ದು, ಯಾವೊಂದು ಮೂಲ ಸೌಕರ್ಯ ಕೂಡ ಕಲ್ಪಿಸಿಲ್ಲ. ಬಹುತೇಕ ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಭದ್ರತೆ ಇಲ್ಲ, ಸ್ವತ್ಛತೆ, ಬೆಳಕಿನ ವ್ಯವಸ್ಥೆ ಇಲ್ಲ. ಸಿಬ್ಬಂದಿ ಕೊರತೆ ಕೂಡ ಕೆಲ ನಿಲ್ದಾಣಗಳಲ್ಲಿ ಇದೆ.
ಜಿಲ್ಲಾ ಕೇಂದ್ರದ ನಿಲ್ದಾಣದಲ್ಲಿ ಮೂಲ ಸೌಕರ್ಯ ಕೊರತೆ!:
ಜಿಲ್ಲಾ ಕೇಂದ್ರದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಸಪರ್ಮಕ ಮೂಲ ಸೌಕರ್ಯ ಇಲ್ಲ, ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣವೇ ಎನ್ನುವಷ್ಟರ ಮಟ್ಟಿಗೆ ಸೌಕರ್ಯ ಮರೀಚಿಕೆಯಾಗಿವೆ. ಕನಿಷ್ಠ ಪ್ರಯಾಣಿಕರಿಗೆ ಕೂರಲು ಸಮರ್ಪಕ ಆಸನಗಳ ವ್ಯವಸ್ಥೆ ಇಲ್ಲ, ವಿಶ್ರಾಂತಿ ಕೊಠಡಿಗಳಿಗೆ ಸದಾ ಬೀಗ ಜಡಿಯಲಾಗಿರುತ್ತದೆ. ಭದ್ರತಾ ಸಿಬ್ಬಂದಿ ಕಾಣುವುದೇ ಅಪ ರೂಪ, ಪ್ರಯಾಣಿಕರಿಗೆಂದು ನಿರ್ಮಿಸಿರುವ ಶೌಚಾಲಯ ನೀರಿನ ಕೊರತೆಯಿಂದ ಬಾಗಿಲು ಮಚ್ಚಿರುತ್ತದೆ. ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದೇ ಕಗ್ಗತ್ತಲಿನಿಲ್ಲಿ ಪ್ರಯಾಣಿಕರು ರೈಲು ಇಳಿದು ಬರಬೇಕು. ಕನಿಷ್ಠ ರೈಲು ಬಂದಾಗಲಾದರೂ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಟಿಕೆಟ್ ಬುಕ್ಕಿಂಗ್ ಕೌಂಟರ್ ಬಿಟ್ಟರೆ ನಿಲ್ದಾಣ ದಲ್ಲಿರುವ ಯಾವ ಕೊಠಡಿ ಕೂಡ ಕಾರ್ಯನಿರ್ವಹಿಸುವುದಿಲ್ಲ, ಒಟ್ಟಾರೆ ನಿಲ್ದಾಣದಲ್ಲಿ ಸ್ವತ್ಛತೆ ಎಂಬುದು ಮರೀಚಿಕೆಯಾಗಿದೆ.
4 ರೈಲು ಮಾತ್ರ ಸಂಚಾರ :
ಜಿಲ್ಲೆಯಲ್ಲಿ ಗೌರಿಬಿದನೂರು ಬಿಟ್ಟರೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ವಯಾ ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಕೋಲಾರ ನಡುವೆ ಸಂಚರಿಸುವ ರೈಲು ಸೌಲಭ್ಯ ಸಾಕಷ್ಟು ಸೀಮಿತವಾಗಿದೆ. ಪ್ರಯಾಣಿಕರಿಂದ ಬೇಡಿಕೆ ಇದ್ದರೂ ಸರ್ಕಾರ ಪ್ಯಾಸೆಂಜರ್ ರೈಲುಗಳು ಬಿಟ್ಟರೆ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ. ದಿನದಲ್ಲಿ ಎರಡು ರೈಲುಗಳು ಮಾತ್ರ ಬೆಳಗ್ಗೆ 8 ಗಂಟೆಗೆ ಕೊಲಾರದಿಂದ ಚಿಕ್ಕಬಳ್ಳಾಪುರ ಮೂಲಕ, ಮಧ್ಯಾಹ್ನ 11ಕ್ಕೆ ಚಿಕ್ಕಬಳ್ಳಾಪುರದ ಮೂಲಕ ಕೋಲಾರಕ್ಕೆ, ಮಧ್ಯಾಹ್ನ 3 ಗಂಟೆಗೆ ಕೋಲಾರದಿಂದ ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರಿಗೆ, ರಾತ್ರಿ 8 ಗಂಟೆಗೆ ಬೆಂಗಳೂರಿಂದ ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಚರಿಸುತ್ತಿವೆ. ಆದರೆ, ಈ ಹಿಂದೆ ಚಿಕ್ಕಬಳ್ಳಾಪುರ ಮೂಲಕ ದೆಹಲಿಗೆ ಸಂಚರಿಸುತ್ತಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲನ್ನು ದಿಢೀರನೇ ಸ್ಥಗಿತಗೊಳಿಸಿದ ಬಳಿಕ ಮತ್ತೆ ಪುನಃ ಆರಂಭವಾಗಲೇ ಇಲ್ಲ.
ಸಂಸದರ ಇಚ್ಚಾಶಕ್ತಿ ಕೊರತೆ: ಅಸಮಾಧಾನ:
ಜಿಲ್ಲೆಯನ್ನು ಪ್ರತಿನಿಧಿಸುವ ಕ್ಷೇತ್ರದ ಸಂಸದರು, ಜಿಲ್ಲೆಯ ಹೆದ್ದಾರಿ, ರೈಲ್ವೆ ಸೌಲಭ್ಯಗಳ ವಿಚಾರದಲ್ಲಿ ಕಾಳಜಿ, ಇಚ್ಛಾಶಕ್ತಿ ತೋರದೆ ಇರುವುದು ಜಿಲ್ಲೆಗೆ ಕೇಂದ್ರ ಸರ್ಕಾರ, ಹಾಗೂ ವಿವಿಧ ಇಲಾಖೆಯ ಯೋಜನೆಗಳಲ್ಲಿ ತೀವ್ರ ಅನ್ಯಾಯವಾಲು ಕಾರಣ ಎಂಬ ಮಾತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಂಸದರು ಕ್ಷೇತ್ರಕ್ಕೆ ಬೇಕಾದ ರೈಲ್ವೆ ಸೌಲಭ್ಯ ಅಥವ ಹೆದ್ದಾರಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಂಬಂದಪಟ್ಟ ಸಚಿವರ ಬೆನ್ನು ಬಿದ್ದರೆ ಕಾರ್ಯಸಾಧನೆ ಮಾಡಬಹುದು. ಆದರೆ ಜಿಲ್ಲೆಯ ಬಗ್ಗೆ ಹಾಲಿ ಸಂಸದರಾಗಿರುವ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಜಿಲ್ಲೆಯನ್ನು ಇತ್ತೀಚೆಗೆ ಮರೆತಂತೆ ಕಾಣುತ್ತಿದೆ. ಇನ್ನೂ ಜಿಲ್ಲೆಗೆ ಆಗಬೇಕಾದ ಸೌಲಭ್ಯಗಳ ಬಗ್ಗೆ ಎಲ್ಲಿ ಧ್ವನಿ ಎತ್ತುತ್ತಾರೆಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿಯವರೇ ಆದ ಚಿಕ್ಕಬಳ್ಳಾಪುರದ ಹಿರಿಯ ಮುಖಂಡರೊಬ್ಬರು ಸಂಸದರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದೇಶದ 508 ರೈಲ್ವೆ ನಿಲ್ದಾಣಗಳನ್ನು ಮೇಲ್ದಜೇìಗೇರಿಸಲು ಭಾನುವಾರ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಜ್ಯದ 13 ನಿಲ್ದಾಣಗಳ ಅಭಿವೃದ್ಧಿಗೆ ಕಾಯಕಲ್ಪ ನೀಡಲಾಗುತ್ತಿದೆ. ಜಿಲ್ಲೆಯ ಯಾವ ನಿಲ್ದಾಣವೂ ಇದರಲ್ಲಿ ಸೇರಿಲ್ಲ. ಜಿಲ್ಲೆಯ ಸಂಸದರು ಈ ಬಗ್ಗೆ ಸರ್ಕಾರ ಮತ್ತು ಇಲಾಖೆಯ ಸಚಿವರ ಬಳಿ ಕೇಳಬೇಕಿತ್ತು, ಕೇಂದ್ರದ ಗಮನ ಸೆಳೆದರೆ ಸರ್ಕಾರ ಮಾಡುತ್ತದೆ. ಸಂಸದರ ಕಾರ್ಯವೈಖರಿ ಬೇಸರ ಮೂಡಿಸುತ್ತಿದೆ.-ಡಾ.ಜಿ.ವಿ.ಮಂಜುನಾಥ, ಸದಸ್ಯರು, ಕೇಂದ್ರ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.