ಪಡಿತರದಾರರಿಗೆ ಅಕ್ಕಿ ಕಡಿತದ ಬಿಸಿ
Team Udayavani, Apr 29, 2023, 4:08 PM IST
ಚಿಕ್ಕಬಳ್ಳಾಪುರ: ಚುನಾವಣೆ ಹೊಸ್ತಿಲಲ್ಲಿ ಜಿಲ್ಲೆಯ ಪಡಿತರದಾರರಿಗೆ ಅಕ್ಕಿ ಕಡಿತದ ಬಿಸಿ ತಟ್ಟುತ್ತಿದೆ. ಈ ಮೊದಲು ಅನ್ನಭಾಗ್ಯ ಯೋಜನೆಯಡಿ 6 ಕೆ.ಜಿ. ವಿತರಿಸುತ್ತಿದ್ದ ಅಕ್ಕಿಯಲ್ಲಿ ಇದೀಗ 2 ಕೆ.ಜಿ. ಕಡಿತವಾಗಿದ್ದು, ಬಡ ಕುಟುಂಬಗಳಿಗೆ ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲಾದ್ಯಂತ ಏಪ್ರಿಲ್ ತಿಂಗಳಿಗೆ ಹಂಚಿಕೆ ಆಗಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಇದುವರೆಗೂ ವಿತರಣೆ ಆಗುತ್ತಿದ್ದ 6 ಕೆ.ಜಿ. ಬದಲಾಗಿ ಪ್ರತಿ ಬಿಪಿಎಲ್ ಕುಟುಂಬ ಒಬ್ಬ ಸದಸ್ಯನಿಗೆ ತಲಾ 4 ಕೆ.ಜಿ. ಮಾತ್ರ ವಿತರಿಸುವ ಮೂಲಕ 2 ಕೆ.ಜಿ. ಅಕ್ಕಿ ಕಡಿತ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
7 ಕೆ.ಜಿ.ಯಿಂದ 4 ಕೆ.ಜಿ.ಗೆ ಇಳಿಕೆ: ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರತಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆ.ಜಿ. ಅಕ್ಕಿ ವಿತರಣೆ ಆಗುತ್ತಿತ್ತು. ಅದು ಜನವರಿ, ಫೆಬ್ರವರಿಯಲ್ಲಿ 1 ಕೆ.ಜಿ. ಕಡಿತವಾಗಿ 6 ಕೆ.ಜಿ.ಗೆ ಬಂದು ನಿಂತಿತ್ತು. ಆದರೆ, ಈಗ 6ರಲ್ಲಿ 4 ಕೆ.ಜಿ. ಮಾತ್ರ ವಿತರಣೆ ಆಗುವ ಮೂಲಕ ಉಳಿದ 2 ಕೆ.ಜಿ. ಅಕ್ಕಿ ಕಡಿತ ಆಗಿರುವುದರಿಂದ ಸಹಜವಾಗಿಯೇ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕಡಿತಗೊಳಿಸಿರುವುದು ಬಡವರನ್ನು ಕೆರಳಿಸಿದೆ.
ಸದ್ಯ ಜಿಲ್ಲೆಯ ಎಎವೈ (ಅಂತ್ಯೋದಯ) ಪ್ರತಿ ಪಡಿತರ ಚೀಟಿಗೆ 21 ಕೆ.ಜಿ. ಅಕ್ಕಿ, 14 ಕೆ.ಜಿ. ರಾಗಿ ವಿತರಿಸಲಾಗುತ್ತಿದ್ದರೆ, ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯನಿಗೆ ಅನ್ನಭಾಗ್ಯದಡಿ 4 ಕೆ.ಜಿ. ಅಕ್ಕಿ, 2 ಕೆ.ಜಿ. ರಾಗಿ ಉಚಿತವಾಗಿ ವಿತರಿಸಲಾಗುತ್ತಿದೆ. ಏಕ ಸದಸ್ಯ ಇರುವ ಎಪಿಎಲ್ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ., ಒಂದಕ್ಕಿಂತ ಹೆಚ್ಚಿರುವ ಪ್ರತಿ ಪಡಿತರ ಚೀಟಿಗೆ ಕೆ.ಜಿ.ಗೆ 15 ರೂ. ನಂತೆ 10 ಕೆ.ಜಿ. ಅಕ್ಕಿ ನೀಡುತ್ತಿದ್ದು, ರಾಗಿ ವಿತರಿಸುತ್ತಿಲ್ಲ.
ರಾಗಿ ಬೆಳೆದವರಿಗೆ ಪುನಃ ರಾಗಿ ವಿತರಣೆ: ಜಿಲ್ಲೆಯಲ್ಲಿ ಈಗಾಗಲೇ 8,573 ರೈತರಿಂದ 1,19,234 ಕ್ವಿಂಟಲ್ ರಾಗಿಯನ್ನು ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದೆ. ಆದರೆ, ಪುನಃ ರೈತರಿಂದ ಖರೀದಿಸಿದ ರಾಗಿಯನ್ನು ಪಡಿತರ ಅಂಗಡಿಗಳ ಮೂಲಕ ರೈತರಿಗೆ ವಿತರಿಸುತ್ತಿದೆ. ಒಂದು ರೀತಿ ಅಕ್ಕಿ ಬೇಕಿದ್ದರೂ ಅಕ್ಕಿ ಕಡಿತ ಮಾಡಿರುವ ಇಲಾಖೆ, ಬೇಡವಾದ ರಾಗಿಯನ್ನು ಬಲವಂತವಾಗಿ ನೀಡಲಾಗುತ್ತಿದೆಯೆಂಬ ಆರೋಪ ಪಡಿತರ ಗ್ರಾಹಕರಿಂದ ಕೇಳಿ ಬರುತ್ತಿದೆ.
ನಮ್ಮ ಹಂತದ ನಿರ್ಧಾರವಲ್ಲ: ಸವಿತಾ 2 ಕೆ.ಜಿ. ಅಕ್ಕಿ ಕಡಿತ ನಮ್ಮ ಹಂತದಲ್ಲಿ ಆಗಿರುವ ನಿರ್ಧಾರ ಅಲ್ಲ. ಸರ್ಕಾರದ ಆದೇಶದಂತೆ 2 ಕೆ.ಜಿ. ಅಕ್ಕಿ ಬದಲಾಗಿ ತಲಾ 2 ಕೆ.ಜಿ. ರಾಗಿ ವಿತರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿರುವ ರಾಗಿ ಮುಗಿಯುವರೆಗೂ ಬಿಪಿಎಲ್ ಕುಟುಂಬಗಳಿಗೆ ರಾಗಿ ವಿತರಿಸುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಸವಿತಾ ಉದಯವಾಣಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿಂದ ಕೇವಲ 4 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಜೊತೆಗೆ 2 ಕೆ.ಜಿ. ರಾಗಿ ವಿತರಿಸಲಾಗುತ್ತಿದೆ. ರಾಗಿ ಬದಲು ಅಕ್ಕಿಯೇ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಮಾರುಕಟ್ಟೆಯಲ್ಲಿ ರಾಗಿಗಿಂತ ಅಕ್ಕಿ ಬೆಲೆ ಏರಿಕೆ ಆಗಿರುವುದರಿಂದ ಪಡಿತರ ಅಂಗಡಿಗಳಲ್ಲಿ ಮೊದಲಿನಂತೆ ತಲಾ 6 ಕೆ.ಜಿ. ಅಕ್ಕಿ ವಿತರಿಸಿದರೆ ಬಡವರಿಗೆ ಅನುಕೂಲವಾಗಲಿದೆ. –ಶ್ರೀನಿವಾಸ್, ಕೂಲಿ ಕಾರ್ಮಿಕ, ಚಿಕ್ಕಬಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.