ಸೋಮನಾಥಪುರದಲ್ಲಿ ಆರೋಗ್ಯ ಕೇಂದ್ರಕ್ಕೆ ಆಗ್ರಹ
Team Udayavani, Apr 5, 2022, 4:11 PM IST
ಪಾತಪಾಳ್ಯ: ಸೋಮನಾಥಪುರದಲ್ಲಿ ಪ್ರಾಥ ಮಿಕ ಉಪ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಾತಪಾಳ್ಯ ಹೋಬಳಿ ವ್ಯಾಪ್ತಿಯ ಸೋಮನಾಥಪುರ ಗ್ರಾಪಂ ವ್ಯಾಪ್ತಿಗೆ 16 ಹಳ್ಳಿಗಳು ಬರುತ್ತದೆ. ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲದೆ 8 ಕಿ.ಮೀ ದೂರದ ಶಿವಪುರ(ಯರ್ರಗುಡಿ), 6 ಕಿ.ಮೀ. ದೂರದ ಪಾತಪಾಳ್ಯ, 12 ಕಿ.ಮೀ. ದೂರದ ಚೇಳೂರಿಗೆ ಹೋಗಬೇಕಾಗಿದೆ. ದೇವಾರ‌್ಲ ಪಲ್ಲಿ, ದಿಗವ ಹಾಗೂ ಎಗವನೆಟ್ಟ ಕುಂಟ್ಲ ಪಲ್ಲಿ, ದೊಡ್ಡಿಪಲ್ಲಿ, ಮರಿಮಾಕಲಪಲ್ಲಿ ಜನರು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದು, ಬಸ್ ಸೌಕರ್ಯವಿಲ್ಲದೆ ಕಾಲ್ನಡಿಗೆಯಲ್ಲಿ ಸೋಮನಾಥಪುಕ್ಕೆ ಬಂದು ಬಸ್ ಹತ್ತ ಬೇಕು. ಸೋಮನಾಥಪುದಲ್ಲಿ ಆಸ್ಪತ್ರೆ ತೆರೆ ದರೆ ನಕ್ಕಲಪಲ್ಲಿ, ಸೀಗಲಪಲ್ಲಿ, ಚೀಮನ್ನ ಗಾರಪಲ್ಲಿ, ಗೊಟ್ಲಪಲ್ಲಿ, ಕುರ್ರಪಲ್ಲಿ, ಎಂ.ಎಂ. ಪಲ್ಲಿ, ಚಿನ್ನಗಾನಪಲ್ಲಿ, ಗಾಧಿ ವಾಂಡ್ಲಪಲ್ಲಿ, ಕುರುಬರಹಳ್ಳಿ ಮುಂತಾದ ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ವ್ಯವ ಸಾಯ ಹಾಗೂ ಕೂಲಿ ಮಾಡಿ ಜೀವನ ನಡೆ ಸುವ ಇಲ್ಲಿನ ಜನ ಆಸ್ಪತ್ರೆಗೆ ಹೋಗಬೇಕಾ ದರೆ ಒಂದು ದಿನವೆಲ್ಲಾ ಹಾಳಾಗುತ್ತದೆ.
ಸೋಮನಾಥಪುರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರವಾಗಿ ಸೋಮನಾಥಪುರ ದಲ್ಲಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಕಾರ್ಯಗತವಾಗಿಲ್ಲ. ಕಳೆದ 40 ವರ್ಷದ ಹಿಂದೆ ಗ್ರಾಮದಲ್ಲಿ ಆರೋಗ್ಯ ಸಹಾಯಕಿಯ ವಸತಿ ಗೃಹವಿದ್ದು, ಅದು ಪಾಳುಬಿದ್ದು ಪ್ರಯೋಜನವಿಲ್ಲದಂತಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳಿದ್ದು, ಅವುಗಳಲ್ಲಿ ತಾತ್ಕಾಲಿಕವಾಗಿ ಉಪ ಆರೋಗ್ಯ ಕೇಂದ್ರ ತೆರೆದರೆ ರೋಗಿಗಳಿಗೆ ಅನುಕೂಲವಾ ಗುತ್ತದೆ ಎಂದು ಆಗ್ರಹಿಸಿದ್ದಾರೆ.
ಸೋಮನಾಥಪುರದಲ್ಲಿ ಶೀಘ್ರವಾಗಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದ ಗಮನಕ್ಕೆ ತರಲಾಗುವುದು. –ಸಿ.ಎಸ್.ಸತ್ಯನಾರಾಯಣರೆಡ್ಡಿ, ಟಿ.ಎಚ್.ಒ, ಬಾಗೇಪಲ್ಲಿ
ಕೇಂದ್ರ ಸ್ಥಾನದಲ್ಲಿ ಉಪ ಆರೋಗ್ಯ ಕೇಂದ್ರ ತೆರೆದರೆ, ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಹಾಗೂ ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ. –ಬಿ.ವಿ.ಪಾಪಿರೆಡ್ಡಿ, ನಗದು ಗುಮಾಸ್ತ, ಎಸ್‌ಎಸ್‌ಎನ್ ಬ್ಯಾಂಕ್, ಸೋಮನಾಥಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.