22 ಕೋಟಿ ವೆಚ್ಚದ ಜಿಲ್ಲಾಸ್ಪತ್ರೆಯಲ್ಲಿ ಸಿಗಲ್ಲ ಬಿಸಿನೀರು!
Team Udayavani, Jul 12, 2018, 3:33 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಬಡ ರೋಗಿಗಳ ಪಾಲಿಗೆ ಸ್ವರ್ಗವಾಗಬೇಕಿದ್ದ ಜಿಲ್ಲಾಸ್ಪತ್ರೆ ಉದ್ಘಾಟನೆಗೊಂಡದಾಗಿ
ನಿಂದಲೂ ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಕನಿಷ್ಠ
ಶುದ್ಧ ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿ
ಕರು ನಿತ್ಯ ಬಿಸಿ ನೀರಿಗಾಗಿ ಬಾಟಲು ಹಿಡಿದು ಅಕ್ಕಪಕ್ಕದ ಹೋಟೆಲ್‌ಗಳ ಮುಂದೆ ಕ್ಯೂ ನಿಲ್ಲಬೇಕಾದ ದುಸ್ಥಿತಿ
ಎದುರಾಗಿದೆ.
ಬರೋಬ್ಬರಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಯ ಮೇಲೆ ಮೊದಲೇ ಔಷಧಗಾಗಿ ಬಿಳಿ ಚೀಟಿ
ಹಾವಳಿ, ತಜ್ಞ ವೈದ್ಯರ ಕೊರತೆ, ಡಿ ಗ್ರೂಪ್ ನೌಕರರ ಲಂಚಕ್ಕೆ ಬೇಡಿಕೆ, ಹೆರಿಗೆ ವಾರ್ಡ್‌ಗಳಲ್ಲಿ ನಾಯಿಗಳ ಕಾಟ, ಆಸ್ಪತ್ರೆ ಸುತ್ತಮುತ್ತಲೂ ನೈರ್ಮಲ್ಯದ ಕೊರತೆ ಜತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ಅಪವಾದ ಇದೆ. ಆದರೆ, ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಅಗತ್ಯ ಸಮರ್ಪಕ ಶುದ್ದ ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ರೋಗಿಗಳು ನಿತ್ಯ ಪರದಾಡುವುದು ಸಾಮಾನ್ಯವಾಗಿದೆ.
ನೀರಿಗೆ ಪರದಾಟ: ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಹೆರಿಗೆಗೆಂದು ಜಿಲ್ಲೆಯ ದೂರದ ಪ್ರದೇಶಗಳಿಂದ ಬರುವ ಮಹಿಳೆಯರ
ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಒಳ ರೋಗಿಗಳಿಗೆ 200 ರಿಂದ 250 ಮಂದಿ ನಿತ್ಯ ಚಿಕಿತ್ಸೆ ಪಡೆಯುತ್ತಾರೆ. ಹೊರ
ರೋಗಿ ಗಳಾಗಿ ನಿತ್ಯ 300 ಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಬಂದು
ಹೋಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸಮರ್ಪಕ ಕುಡಿಯುವ ನೀರು ಇಲ್ಲದಿರುವುದು ಮಾತ್ರ ರೋಗಿಗಳಿಗೆ
ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಶಿಶು ಸ್ನಾನಕ್ಕೂ ನೀರಿಲ್ಲ: ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಸ್ನಾನ ಮಾಡಿಸಲು ಬಿಸಿ ನೀರಿನ ಸೌಲಭ್ಯ
ಇಲ್ಲದಿರುವುದರಿಂದ ಸಂಬಂಧಿಕರು ಬಾಟಲು ಹಿಡಿದು ಹೋಟೆಲ್‌ಗಳಲ್ಲಿ ಬಿಸಿ ನೀರು ಖರೀದಿಸಿ ಮಕ್ಕಳಿಗೆ ಸ್ನಾನ
ಮಾಡಿಸಬೇಕಿದೆ. ಆಸ್ಪತ್ರೆಯಲ್ಲಿ ಒಂದು ಕಡೆ ಮಾತ್ರ ನೀರಿನಸೌಲಭ್ಯ ಇದ್ದರೂ ಅದು ಶುದ್ಧ ಕುಡಿಯುವ ನೀರು ಅಥವಾ ಇನ್ನಾವುದೋ ಎಂದು ಜನ ಆ ನೀರನ್ನು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಇಡೀ ಆಸ್ಪತ್ರೆಗೆ
ಒಂದು ಕಡೆ ನೀರಿನ ಸೌಕರ್ಯ ಕಲ್ಪಿಸಿರುವುದರಿಂದ ಬಹುತೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ
ಇಂತಹ ಕಡೆಗೆ ನೀರು ಸಿಗುತ್ತದೆ ಎಂದು ಮಾಹಿತಿ ಕೂಡ ಇಲ್ಲವಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು
ದಿಕ್ಕು ತೋಚದೇ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬಿಸಿ ನೀರುಗಾಗಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ಸೋಲಾರ್‌ಗಳನ್ನು ಅಳವಡಿಸಲಾಗದ್ದಿರೂ ಅವು ಆಟಕ್ಕಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಾಗಿದೆ. ಸೋಲಾರ್ ಬಳಸದ ಕಾರಣ ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ
ಬಿಸಿ ನೀರಿಗಾಗಿ ರೋಗಿಗಳ ಸಂಬಂಧಿಕರು ಹೋಟೆಲ್‌ಗಳಿಗೆ ಹೋಗುವುದು ನನ್ನ ಗಮನಕ್ಕೆ ಬಂದಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಬಿಸಿ ನೀರಿಗಾಗಿಯೇ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ರೋಗಿಗಳಿಗೆ ಬಿಸಿ ನೀರು ಕಲ್ಪಿಸುವ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರ ಜತೆಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ.
ಡಾ.ಬಿ.ಎಂ.ರವಿಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ
ಸಮರ್ಪಕ ಊಟವೂ ಇಲ್ಲ
ಜಿಲ್ಲಾಸ್ಪತ್ರೆಯು ಮೂಲ ಸೌಕರ್ಯಗಳ ಕೊರತೆಯಿಂದ ಅವ್ಯವಸ್ಥೆಗಳ ಆಗರವಾಗಿದೆ. ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆ ಇಲ್ಲ. ಬೆಳಗ್ಗೆ, ರಾತ್ರಿ ಸಮರ್ಪಕವಾಗಿ ತಿಂಡಿ ಕೊಡುವುದಿಲ್ಲ. ಕೊಡುವ ಊಟ ಕೂಡ ಗುಣಮಟ್ಟದಿಂದ ಇರಲ್ಲ. ಮೊಟ್ಟೆ, ಬಾಳೆಹಣ್ಣು ವಿತರಿಸುವುದಿಲ್ಲ. ಆಸ್ಪತ್ರೆಯಲ್ಲಿ ನೀಡುವ ತಿಂಡಿ ಸೇವಿಸಲಾಗದೇ ಬಹಳಷ್ಟು ರೋಗಿಗಳು ಹೋಟೆಲ್‌ಗಳಲ್ಲಿ ಇಡ್ಲಿ ತಂದು ತಿನ್ನಬೇಕಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ಒಮ್ಮೆ ಜಿಲ್ಲಾಸ್ಪತ್ರೆಗೆ ಬಂದು ಖುದ್ದು ಪರಿಶೀಲನೆ ನಡೆಸಲಿ ಎಂದು ಆಸ್ಪತ್ರೆಯ
ಅವ್ಯವಸ್ಥೆಯಿಂದ ರೋಸಿ ಹೋಗಿರುವ ರೋಗಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ನೀರಿಗೆ ಹೋಟೆಲ್‌ಗೆ ಅಲೆದಾಟ
ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಾಗೂ ಹೆರಿಗೆಗೆ ಬಂದು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಬಾಣಂತಿಯರು ವೈದ್ಯರ ಸೂಚನೆಯಂತೆ ಬಿಸಿ ನೀರು ಕುಡಿಯಬೇಕು. ಆದರೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲದ ಪರಿಣಾಮ ರೋಗಿಗಳ ಸಂಬಂಧಿಕರು ದಿನ ಬೆಳಗಾದರೆ ಆಸ್ಪತ್ರೆಯ ಅಕ್ಕಪಕ್ಕದ
ಹೋಟೆಲ್‌ಗಳಿಗೆ ಖಾಲಿ ಬಾಟಲು ಹಿಡಿದು ಹೋಗಿ ಹೋಟೆಲ್ ಮಾಲಿಕರಿಗೆ 10, 20 ರೂ. ಕೊಟ್ಟು ಬಿಸಿ ನೀರನ್ನು ತರುತ್ತಾರೆ.
ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.