ಕನ್ನಡ ನೆಲದಲ್ಲಿ ತ್ರಿಪುರ ಸದ್ಭಾವನಾ ಯಾತ್ರೆ
Team Udayavani, Feb 7, 2021, 2:40 PM IST
ಶಿಡ್ಲಘಟ್ಟ: ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಎಲ್ಲಾ ಅಂಶಗಳಡಿಯಲ್ಲಿ ಸೌಹಾರ್ದತೆ, ಸದ್ಭಾವನೆ ಮೂಡುವುದರಿಂದ ರಾಷ್ಟ್ರದಲ್ಲಿ ಭಾವೈಕ್ಯತೆ ದೃಢ ಗೊಳ್ಳುವುದು. ಅಂತಹ ದೇಶದ ಏಕತೆ ಅಗತ್ಯವಿದ್ದು, ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಲು ಸಾಧ್ಯವಾ ಗುವುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಸುಗಟೂರು ಗ್ರಾಮದಲ್ಲಿ ತ್ರಿಪುರ ಯುವ ವಿಕಾಸಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್ ಬಹುಗುಣ ಇಕೋ ಕ್ಲಬ್‌ಗಳ ಆಶ್ರಯದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸದ್ಭಾವನಾ ಯಾತ್ರೆಯ ಗ್ರಾಮ ಮೆರವಣಿಗೆಗೆ ಹಸಿರು ನಿಶಾನೆ ತೋರಿ ಮಾತನಾಡಿದರು.
ಸುಗಟೂರು ಪಾಳೆಯಗಾರರ ರಾಜಧಾನಿ ಯಾಗಿದ್ದ ಸುಗಟೂರು ಗ್ರಾಮವು ಧಾರ್ಮಿಕ, ಐತಿಹಾಸಿಕವಾಗಿ ಪ್ರಸಿದ್ಧವಾಗಿದ್ದು ತ್ರಿಪುರದನಿ ಯೋಗಕ್ಕೆ ಭೇಟಿ ನೀಡಲು ರಾಜ್ಯದಿಂದ ಇದೇ ಗ್ರಾಮ ಆಯ್ಕೆ ಮಾಡಿಕೊಂಡಿರುವುದು ಸೂಕ್ತವಾಗಿದೆ. ತ್ರಿಪುರ ರಾಜ್ಯದ ಸದ್ಭಾವನಾ ಯಾತ್ರೆಯು ರಾಜ್ಯದಲ್ಲಿ ಕೇವಲ ಎರಡು ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಆ ಪೈಕಿ ನಮ್ಮ ಜಿಲ್ಲೆಯ ಸುಗಟೂರು ಒಂದು ಆಗಿರುವುದಕ್ಕೆ ಜಿಲ್ಲೆಗೆ ಸ್ಮರಣೀಯ ದಿನ. ಇಲ್ಲಿನ ಸಂಸ್ಕೃತಿ, ಕಲೆ, ಧಾರ್ಮಿಕ ಅಂಶಗಳು ತ್ರಿಪುರ ರಾಜ್ಯದಲ್ಲಿ ಸದ್ಭಾವನಾ ಯಾತ್ರೆಯಸಮಾರೋಪ ಸಮಾರಂಭದಲ್ಲಿ ಬಿಂಬಿತವಾಗಲಿವೆ ಎಂದರು.
ಒರಿಸ್ಸಾದ ಹಿರಿಯ ಗಾಂಧಿವಾದಿ ಮಧುಸೂದನ್ ದಾಸ್ ಮಾತನಾಡಿ, ಭಾರತದ ನೆಲದಲ್ಲಿ ವಾಸಿಸುವ ಎಲ್ಲರ ಭಾವೈಕ್ಯ, ಸೌಹಾರ್ದತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಮಕ್ಕಳು ದೇಶಸೇವೆಯ ಬಗ್ಗೆ ಅರಿತುಕೊಳ್ಳಬೇಕು ಎಂದರು.
28 ರಾಜ್ಯಗಳಲ್ಲಿ ಸಂಚಾರ: ತ್ರಿಪುರ ರಾಜ್ಯದ ಸದ್ಭಾವನಾ ಯಾತ್ರೆಯ ಸಂಚಾಲಕ ಡೆಬಾಸಿಸ್ ಮಜುಂದಾರ್ ಮಾತನಾಡಿ, ದೇಶದ 28 ರಾಜ್ಯ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಭಾವನಾ ಯಾತ್ರೆಯು ಸಂಚರಿಸಲಿದೆ.
ಈಗಾಗಲೇ 8 ರಾಜ್ಯಗಳ 20 ಕ್ಕೂ ಹೆಚ್ಚು ಸ್ಥಳಗಳಲ್ಲಿಯಾತ್ರೆ ಸಂಚರಿಸಿದ್ದು ಕನ್ನಡದ ನೆಲದಲ್ಲಿ ನೀಡಿರುವ ಪ್ರೀತಿ, ವಿಶ್ವಾಸವು ಇನ್ನೆಲ್ಲಿಯೂ ಸಿಕ್ಕಿಲ್ಲ.ಇಲ್ಲಿನ ಜನರ ಸಂಸ್ಕೃತಿ, ಸಂಸ್ಕಾರವು ಜಾಗತಿಕ ಮನ್ನಣೆ ಪಡೆದಿದೆ ಎಂದರು.
ಇದನ್ನೂ ಓದಿ :
ತೆಲಂಗಾಣ ರಾಜ್ಯದ ರಾಷ್ಟ್ರೀಯ ಯುವ ಯೋಜನೆಯ ಅಧ್ಯಕ್ಷ ಕೆ.ಯಾದವರಾಜು ಮಾತನಾಡಿದರು. ಸುಂದರಲಾಲ್ ಇಕೋ ಕ್ಲಬ್ ನ ಸಂಚಾಲಕ ಎಚ್.ಎಸ್.ರುದ್ರೇಶಮೂರ್ತಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆಂಜಿನೇಯ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ. ಪ್ರಶಾಂತ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯ ನಾರಾಯಣ ಸ್ವಾಮಿ, ಗ್ರಾಪಂ ಸದಸ್ಯ ಸತೀಶ್, ನಾಗರಾಜು, ನಾರಾಯಣಸ್ವಾಮಿ, ಸದಸ್ಯೆ ಇಂದಿರಾ ಶಿವಶಂಕರಪ್ಪ, ಶಾಂತಮ್ಮ ದೇವರಾಜು, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್ ಕುಮಾರ್, ದೊಡ್ಡಮುನಿವೆಂಕಟಶೆಟ್ಟಿ, ಎನ್‌ಎಸ್ ಎಸ್ ಸ್ವಯಂ ಸೇವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.