![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 9, 2023, 2:31 PM IST
ಚಿಕ್ಕಬಳ್ಳಾಪುರ: ಹೈನೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲೂ ನಂದಿನಿ ಉಳಿಸಿ ಅಭಿಯಾನ ಶುರುವಾಗಿದೆ.
ಇದು ಒಂದೆಡೆಯಾದರೆ, ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ ಕೆಎಂಎಫ್ ಹಾಲಿನ ಉತ್ಪನ್ನಗಳ ಕೊರತೆ ಕಂಡು ಬಂದಿದೆ. ಇದರಿಂದಾಗಿಯೇ ಗ್ರಾಹಕರು ಅನಿವಾರ್ಯವಾಗಿ ಖಾಸಗಿ ಹಾಲಿನ ಉತ್ಪನ್ನಗಳ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿಯುವುದು ಸಾಮಾನ್ಯ ಸಂಗತಿ. ಆದರೆ, ನಂದಿನಿ ಉತ್ಪನ್ನಗಳಿಗೆ ಬೇಸಿಗೆಯಲ್ಲಿ ಎಂದೂ ಬರ ಬಂದಿರಲಿಲ್ಲ. ಈ ವರ್ಷ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಾವ ಉತ್ಪನ್ನಗಳೂ ನಂದಿನಿ ಬೂತ್‌ಗಳಿಗೆ ಬರುತ್ತಿಲ್ಲ. ವಿಶೇಷವಾಗಿ ಜನ ಸಾಮಾನ್ಯರು ದಿನ ಬೆಳಗಾದರೆ ಬಳಸುವ ಹಾಲು, ಮೊಸರು ಪೂರೈಕೆಯಲ್ಲಿ ಕೊರತೆ ಕಂಡು ಬಂದಿದೆ ಎಂದು ಜಿಲ್ಲಾ ಕೇಂದ್ರದಲ್ಲಿರುವ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಮಾಲಿಕರು ಹೇಳುತ್ತಿದ್ದಾರೆ.
ಹಾಲಿನ ಉತ್ಪಾದನೆಯಲ್ಲಿ ಬೆಂಗಳೂರು ನಗರ ಬಿಟ್ಟರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಒಕ್ಕೂಟಗಳು ಎರಡನೇ ಸ್ಥಾನದಲ್ಲಿವೆ. ಎತಂಹದೇ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಹಾಲಿನ ಉತ್ಪನ್ನಗಳಿಗೆ ಜಿಲ್ಲೆಯಲ್ಲಿ ಕೊರತೆ ಆಗಿಲ್ಲ. ಕಳೆದೊಂದು ತಿಂಗಳಿಂದ ಹಾಲಿನ ಕೊರತೆ ಉಂಟಾಗಿದೆ ಎನ್ನುವ ಮಾತು ಗ್ರಾಹಕರಿಂದ ಹಿಡಿದು ಮಾರಾಟಗಾರರಿಂದ ಕೇಳಿ ಬರುತ್ತಿದೆ.
ನಂದಿನಿ ಉಳಿಸಿ ಅಭಿಯಾನ: ರಾಜ್ಯದ ಹಲವೆಡೆ ಶುರುವಾಗಿರುವ ನಂದಿನಿ ಉಳಿಸಿ ಅಭಿಯಾನ ಜಿಲ್ಲಾದ್ಯಂತ ಸದ್ದು ಮಾಡುತ್ತಿದೆ. ಜಿಲ್ಲೆಯ ಜಾಲತಾಣಗಳಲ್ಲಿ ನಂದಿನಿ ಉಳಿಸಿ ಅಭಿಯಾನ ಆರಂಭಿಸಿರುವ ನೆಟ್ಟಿಗರು, ಗುಜರಾತ್ ಮೂಲದ ಆಮೂಲ್ ಅನ್ನು ಧಿಕ್ಕರಿಸಿ ಎಂದು ಕರೆ ನೀಡುತ್ತಿದ್ದಾರೆ. ಗ್ರಾಹಕರಿಗೂ ನಂದಿನಿ ಹಾಲಿನ ಉತ್ಪನ್ನಗಳ ಕೊರತೆ ಎದುರಾಗಿರುವುದರಿಂದ ನಂದಿನಿ ಉಳಿಸಿ ಅಭಿಯಾನಕ್ಕೆ ಸಹಜವಾಗಿಯೇ ಬೆಂಬಲ ಸಿಗುತ್ತಿದೆ.
ಬೇಡಿಕೆ 500 ಲೀ., ಪೂರೈಕೆ 350 ಲೀ. : ಬೇಸಿಗೆಯಲ್ಲಿ ಹಾಲು, ಮೊಸರಿಗೆ ಭಾರೀ ಬೇಡಿಕೆ ಇದೆ. ಆದರೆ, ಚಿಮೂಲ್ ನಂದಿನಿ ಮಿಲ್ಕ್ ಬೂತ್ ಗಳಿಗೆ ತಲಾ 500, 600 ಲೀಟರ್ ಬೇಡಿಕೆ ಇದ್ದರೆ ಬರೀ 400 ರಿಂದ 350 ಲೀ. ಮಾತ್ರ ಪೂರೈಸಲಾಗುತ್ತಿದೆ. 150 ರಿಂದ 200 ಲೀಟರ್ ಹಾಲು ಪೂರೈಕೆ ಕುಂಠಿತವಾಗಿದೆ. ಬೆಳಗ್ಗೆ ಪೂರೈಸುವ ಹಾಲು ಅರ್ಧಗಂಟೆಯಲ್ಲಿ ಮುಗಿಯುತ್ತದೆ. ಮತ್ತೆ ಎರಡನೇ ಶಿಫ್ಟ್ನಲ್ಲಿ ಹಾಲು ಪೂರೈಕೆ ಆಗುವವರೆಗೂ ಗ್ರಾಹಕರಿಗೆ ಹಾಲು ಸಿಗುವುದಿಲ್ಲ. ಮಧ್ಯಾಹ್ನ ಹಾಲು ಕೊಟ್ಟರೆ ಮತ್ತೆ ಸಂಜೆಗೆ ಹಾಲು ಇರಲ್ಲ ಎಂದು ಜಿಲ್ಲಾ ಕೇಂದ್ರದಲ್ಲಿರುವ ಮಿಲ್ಕ್ ಬೂತ್ ಮಾಲಿಕರು ನಂದಿನಿ ಉತ್ಪನ್ನಗಳ ಕೊರತೆ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ನಂದಿನಿ ಉತ್ಪನ್ನಗಳಿಗೆ ಕೊರತೆ ಇಲ್ಲ. ಆಮೂಲ್ ಉತ್ಪನ್ನಗಳಲ್ಲಿ ಕೆಲವೊಂದು ಮೊದಲಿನಿಂದಲೂ ಎಲ್ಲಾ ಕಡೆ ಮಾರಾಟ ಆಗುತ್ತಿದೆ. ಹಾಗಂತ ಜಿಲ್ಲೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಇಲ್ಲ. ಬೇಸಿಗೆಯಲ್ಲಿ ಸಹಜವಾಗಿ ಹಾಲಿನ ಉತ್ಪಾದನೆ ಕುಸಿತ ಇರುತ್ತದೆ. ಆದರೆ, ಜಿಲ್ಲೆಯಲ್ಲಿ ನಂದಿನಿ ಹಾಲು, ಮೊಸರು, ಮತ್ತಿತರ ಉತ್ಪನ್ನಗಳಲ್ಲಿ ಗ್ರಾಹಕರಿಗೆ ಯಾವುದೇ ಕೊರತೆ ಇಲ್ಲ. ●ಪದ್ಮಾ, ಎಂಡಿ, ಮೇಗಾ ಡೇರಿ, ನಂದಿ ಕ್ರಾಸ್, ಚಿಕ್ಕಬಳ್ಳಾಪುರ.
ಬೆಣ್ಣೆ ಪೂರೈಕೆ ಆಗಿ ತಿಂಗಳ ಮೇಲಾಗಿದೆ ಕೋಲಾರ -ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನಂದಿನಿ ಮಿಲ್ಕ್ ಔಟ್ ಲೇಟ್‌ಗಳಿಗೆ ಬೆಣ್ಣೆ ಸರಬರಾಜು ಆಗಿ ತಿಂಗಳ ಮೇಲೆ ಆಗಿದೆ. ತುಪ್ಪ ಕೂಡ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪನ್ನೀರಿಗೆ ಬೇಡಿಕೆ ಇದ್ದರೂ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ●ಹೆಸರೇಳಲು ಇಚ್ಛಿಸದ ನಂದಿನಿ ಉತ್ಪನ್ನ ಮಾರಾಟ ಮಳಿಗೆ ಮಾಲಿಕ.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.