ಶಿಡ್ಲಘಟ್ಟ ಸಾರ್ವಜನಿಕ ಗ್ರಂಥಾಲಯ ಶಿಥಿಲ
ಸೋರುತ್ತಿರುವ ಜ್ಞಾನಾರ್ಜನೆ ಕೇಂದ್ರ , ಆತಂಕದಲ್ಲಿ ಓದುಗರು ,ಯಾವ ಕ್ಷಣದಲ್ಲೂ ಕುಸಿಯಬಹುದು
Team Udayavani, Oct 27, 2020, 1:32 PM IST
ಚಿಕ್ಕಬಳ್ಳಾಪುರ: ಮಾಹಿತಿ ಮತ್ತು ತಂತ್ರಜ್ಞಾನದ ಯುಗದಲ್ಲಿ ಇ-ಲೈಬ್ರರಿಯತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜ್ಞಾನಾ ರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯಗಳು ಸರ್ಕಾರಗಳ ನಿರ್ಲಕ್ಷ್ಯ ದಿಂದ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆಗಳ ಸಾಕ್ಷಾತ್ ದರ್ಶನವಾಗುತ್ತದೆ. ಹೆಸರಿಗೊಂದು ಕಟ್ಟಡವಿದ್ದು, ಶಿಥಿಲವಾಗಿದೆ. ಹೊರಗಡೆಯಿಂದ ನೋಡಿದ ನಂತರ ಒಳಗೆ ಹೋಗಲು ಸಾಹಸ ಮಾಡುವಂತಾಗಿದೆ. ಈ ಗ್ರಂಥಾಲಯದಲ್ಲಿ ಓದುಗರಿಗೆ ಅನುಕೂಲವಾಗು ವಂತಹ ಪುಸ್ತಕಗಳಿದ್ದರೂ ಸಹ ಓದುಗರು ಗ್ರಂಥಾಲಯ ದತ್ತ ಸುಳಿಯಲು ಹಿಂಜರಿಯುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಶೋಚನೀಯ: ಉತ್ತಮ ಸಾಹಿತಿಗಳು, ಬರಹಗಾರರ ಪುಸ್ತಕಗಳು ಇಂಟರ್‌ನೆಟ್‌ನಲ್ಲಿ ದೊರೆಯುತ್ತಿರುವುದರಿಂದ ಕಾಲ ಕ್ರಮೇಣ ಸಾರ್ವಜನಿಕ ಗ್ರಂಥಾಲಯಗಳನ್ನು ಮರೆಯು ವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯಗಳನ್ನು ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ನೀಡಿ ಅದರ ಮೂಲಕ ಅಭಿವೃದ್ಧಿಗೊಳಿಸುವ ಪ್ರಯತ್ನ ನಡೆಯು ತ್ತಿದೆ. ಸಾರ್ವಜನಿಕರ ಗ್ರಂಥಾಲಯಗಳನ್ನು ಆಕರ್ಷಿ ಸಲು ಡಿಜಿಟಲ್ ಲೈಬ್ರರಿ ಮಾಡಲು ಪ್ರಯತ್ನಗಳು ಸಾಗಿದೆ. ಆದರೆ ನಗರ ಪ್ರದೇಶಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳ ಸ್ಥಿತಿ ಮಾತ್ರ ಬದಲಾವಣೆಗಳು ಆಗದಿರುವುದು ದುರಂತವೇ ಸರಿ.
ಶಿಥಿಲವಾಗಿರುವ ಸೀಲಿಂಗ್: ಒಂದೆಡೆ ಮಳೆಯಿಂದ ಸಾರ್ವಜನಿಕ ಗ್ರಂಥಾಲಯದ ಗೋಡೆಗಳು ನೆನೆದು ತನ್ನ ಸ್ವರೂಪ ಕಳೆದುಕೊಂಡಿದ್ದು, ಚಾವಣಿಯಲ್ಲಿ ನಿರುಪಯುಕ್ತ ಗಿಡಗಂಟಿಗಳು ಬೆಳೆದುನಿಂತಿದೆ. ಹೊರಭಾಗ ಪಾಚಿ ಆವರಿಸಿ ಕಟ್ಟಡ ಯಾವ ಕ್ಷಣದಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಓದುಗರಲ್ಲಿ ಮನೆ ಮಾಡಿದೆ. ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ಸಹ ಶಿಥಿಲ ವ್ಯವಸ್ಥೆಯಲ್ಲಿರುವ ಗ್ರಂಥಾಲಯ ನೋಡಿಕೊಂಡು ಆತಂಕದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುಂತಾಗಿದೆ.
ಮೀನಮೇಷ ಏಕೆ?: ಜಿಲ್ಲೆಯಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಮಳೆ ಬೀಳುತ್ತಿದೆ. ಮಳೆಯ ಆರ್ಭಟಕ್ಕೆ ಚಿಂತಾಮಣಿ ತಾಲೂಕಿನಲ್ಲಿ ಮನೆ ಕುಸಿದು ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದರೆ, ಮತ್ತೂಂದೆಡೆಮಳೆಯಿಂದ ಬಹುತೇಕ ಹಾಳಾಗಿರುವಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಗೊಳಿಸಲು ಸರ್ಕಾರ ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳುಯಾಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವಂತಾಗಿದೆ.
ನೆನೆಯುತ್ತಿರುವ ಪುಸ್ತಕಗಳು: ಸಾರ್ವಜನಿಕ ಗ್ರಂಥಾಲಯ ಮಳೆಯಿಂದ ಅಸ್ತಿತ್ವಕ್ಕಾಗಿ ಹೋರಾಟ ನಡೆಸು ತ್ತಿದೆ. ಮತ್ತೂಂದೆಡೆ ಮಳೆ ಜೋರಾಗಿ ಬಿದ್ದರೇ ಎಲ್ಲಿ ಕುಸಿದು ಬೀಳುತ್ತದೆ ಎಂಬ ಆತಂಕ ಬಂದೊದಗಿದೆ. ಮಳೆ ಬಂದರೆ ಗ್ರಂಥಾಲಯ ಬಹುತೇಕ ಸೋರುತ್ತದೆ. ಇಲ್ಲಿರುವ ಬೆಲೆ ಬಾಳುವ ಪುಸ್ತಗಳನ್ನು ಸಂರಕ್ಷಣೆ ಮಾಡುವುದೇ ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈಗಾಗಲೇ ಮಳೆಯಿಂದ ಪುಸ್ತಕಗಳಿಗೆ ಹಾನಿಯಾಗಿದ್ದು, ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.
25 ಸಾವಿರ ಪುಸ್ತಕ, 40 ಮಂದಿ ಓದುಗರು : ಸಾರ್ವಜನಿಕ ಗ್ರಂಥಾಲಯದಲ್ಲಿ ಸುಮಾರು 25-28 ಸಾವಿರ ಪುಸ್ತಕಗಳಿವೆ. ಗ್ರಂಥಾಲಯದಲ್ಲಿ ಸುಮಾರು 1910 ಮಂದಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ವಿವಿಧ ಬಗೆಯ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಸಾಮಾನ್ಯವಾಗಿ 11 ಕನ್ನಡ ಪತ್ರಿಕೆಗಳು, 2 ಉರ್ದು, 4 ಆಂಗ್ಲ, 4 ವಾರ, 4 ಮಾಸ ಪತ್ರಿಕೆಗಳು, ಒಂದು ಹಿಂದಿ ಪತ್ರಿಕೆ ಬರುತ್ತಿದ್ದು ಶಿಥಿಲ ವ್ಯವಸ್ಥೆಯಲ್ಲಿರುವ ಗ್ರಂಥಾಲಯಕ್ಕೆ ಸುಮಾರು 40 ಮಂದಿ ಮಾತ್ರ ಓದುಗರು ಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಿಡ್ಲಘಟ್ಟ ನಗರದಲ್ಲಿ ಗ್ರಂಥಾಲಯ ಶಿಥಿಲ ವ್ಯವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದೆ. ನೂತನ ಗ್ರಂಥಾಲಯ ನಿರ್ಮಿಸಲು ಜಾಗ ಸಹ ಇಲಾಖೆಗೆ ಹಸ್ತಾಂತರಿಸಲಾಗಿದೆ. ಯೋಜನೆ ಮತ್ತು ಅಂದಾಜು ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವುದು. –ಶಂಕರ್, ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು
ಸಾರ್ವಜನಿಕ ಗ್ರಂಥಾಲಯ ಶಿಥಿಲವಾಗಿರುವ ಕುರಿತು ಇಲಾಖಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಮಳೆ ಬಂದರೆ ಸೋರುವುದು ನಿಜ ಆದರೂ ಸಹ ಪುಸ್ತಕಗಳು ನೆನೆಯದಂತೆ ಎಚ್ಚರ ವಹಿಸಲಾಗಿದೆ. ಗ್ರಂಥಾಲಯಕ್ಕೆ ಬರುವಓದುಗರಿಗೆ ಹೆಸರು ನೋಂದಣಿ ಮಾಡಿರುವ ಓದುಗರ ಡಿಜಿಟಲ್ ಲಾಗಿನ್ ಮಾಡಲಾಗಿದೆ. – ರಾಮಲೀಲಾ, ಗ್ರಂಥಪಾಲಕಿ, ಶಿಡ್ಲಘಟ್ಟ ಸಾರ್ವಜನಿಕ ಗ್ರಂಥಾಲಯ
ಜ್ಞಾನಾರ್ಜನೆ ಕೇಂದ್ರವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯ ಶಿಥಿಲವಾಗಿ ದುಸ್ಥಿತಿಯಲ್ಲಿದೆ. ಸರ್ಕಾರ, ಗ್ರಂಥಾಲಯ ಅಧಿಕಾರಿಗಳು ಗಮನಹರಿಸಿ ಇರುವ ಗ್ರಂಥಾಲಯವನ್ನು ನೆಲಸಮಗೊಳಿಸಿ ನೂತನ ಗ್ರಂಥಾಲಯವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ. – ಗಂಜಿಗುಂಟೆ ವಸಂತಕುಮಾರ್, ಕರವೇ (ಪ್ರವೀಣ್ ಶೆಟ್ಟಿ ಬಣ) ಶಿಡ್ಲಘಟ್ಟ ತಾಲೂಕು ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.