ಪ್ರವಾಸಿಗರ ರಕ್ಷಣೆಗಾಗಿ ಸ್ಕಂದಗಿರಿ ಬೆಟ್ಟಕ್ಕೆ ಬೇಲಿ
Team Udayavani, Feb 23, 2022, 1:42 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವ ವಿಖ್ಯಾತ ನಂದಿಬೆಟ್ಟದ ದರ್ಶನ ಮಾಡಲು ಬಂದು ಚಾರಣ ಮಾಡುವಾಗ ಪ್ರಪಾತಕ್ಕೆ ಬಿದ್ದು, ದೆಹಲಿ ಮೂಲದ ವಿದ್ಯಾರ್ಥಿಯೊಬ್ಬ ಬದುಕುಳಿದಿರುವ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯ ವ್ಯಾಪ್ತಿಯ ಚಾರಣ ಸ್ಪಾಟ್‌ಗಳಲ್ಲಿ ಚಾರಣಕ್ಕೆ ಸಕ್ಷಮ ಪ್ರಾಧಿಕಾರ ಗುರುತಿಸಿರುವ ನಿಗದಿತ ಮಾರ್ಗಗಳಲ್ಲಿ ಜಿಲ್ಲಾಡಳಿತದ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಸುರಕ್ಷತಾ
ಕ್ರಮ ಪಾಲಿಸಿ, ಚಾರಣಕ್ಕೆ ಅನುಮತಿ ನೀಡಿದ ದಿನಗಳಲ್ಲಿ ಮಾತ್ರ ಚಾರಣ ಮಾಡಬೇಕೆ ಹೊರತು, ಚಾರಣವನ್ನು ನಿಷೇಧಿಸಿದ ಸ್ಥಳಗಳಲ್ಲಿ ಮತ್ತು ನಿರ್ಬಂಧಿಸಿದದಿನಾಂಕಗಳಲ್ಲಿ ಚಾರಣ ಮಾಡುವಂತಿಲ್ಲ. ಆ ರೀತಿ ಅನುಮತಿ ರಹಿತ ಮತ್ತು ಅಸುರಕ್ಷಿತ ಚಾರಣ ಕೈಗೊಂಡುಇಂತಹ ಅವಘಡಗಳಿಗೆ ಆಸ್ಪದ ನೀಡಬಾರದು ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪ್ರಾಣದ ಹಂಗನ್ನು ತೊರೆದು ಯುವಕನ ರಕ್ಷಣೆ: ನಂದಿಬೆಟ್ಟದಲ್ಲಿ ಭಾನುವಾರ ಸುಮಾರು 300 ಅಡಿಆಳದ ಪ್ರಪಾತಕ್ಕೆ ಕಾಲು ಜಾರಿಬಿದ್ದು, ಚಲಿಸಲಾಗದ ಸ್ಥಿತಿಯಲ್ಲಿ ಸಿಲುಕಿದ್ದ ಯುವಕನನ್ನು ಮೇಲೆತ್ತಲುನೆರವಿಗೆ ಬಂದಿದ್ದ ಹೆಲಿಕಾಪ್ಟರ್ ಪೈಲೆಟ್ ಹಾಗೂವಾಯು ಪಡೆಯ ರಕ್ಷಣಾ ತಂಡದ ಸಕಾಲಿಕ
ಕಾರ್ಯಕ್ಷಮತೆ ಹಾಗೂ ಪ್ರಾಣದ ಹಂಗನ್ನು ತೊರೆದು ಯುವಕನನ್ನು ರಕ್ಷಣೆ ಮಾಡಿ, ಮಾನವೀಯತೆ ಹಾಗೂ ಸಾಹಸ ಮೆರೆದ ವಾಯು ಪಡೆಯ ತಂಡ ಹಾಗೂ ಸಹಕಾರ ನೀಡಿದ ರಾಷ್ಟ್ರೀಯ ಮತ್ತು ರಾಜ್ಯನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ತಂಡಕ್ಕೆಜಿಲ್ಲಾಧಿಕಾರಿ ಆರ್.ಲತಾ ಕೃತಜ್ಞತೆ ತಿಳಿಸಿ, ಕಾಲೋಚಿತಸಾಹಸ ಕಾರ್ಯ ಮೆರೆದ ಪೊಲೀಸ್, ಕಂದಾಯ, ಅರಣ್ಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಬ್ರಹ್ಮಗಿರಿಗೂ ಬೇಲಿ ಮಾಡಲು ಯೋಜನೆ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ವಿವಿಧಬೆಟ್ಟಗುಡ್ಡ ಪ್ರದೇಶಗಳಲ್ಲಿ ಚಾರಣ ಮಾಡುವಕಾಯಕದಲ್ಲಿ ತೊಡಗಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಪ್ರಸ್ತುತ ಸ್ಕಂದಗಿರಿ ಬೆಟ್ಟದ ಸುತ್ತಮುತ್ತ ಸುಮಾರು 2 ಕಿ.ಮೀ ಬೇಲಿ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರಿಂದಅಕ್ರಮವಾಗಿ ಚಾರಣ ಮಾಡಲು ಅನುಕೂಲ ಇಲ್ಲದಂತಾಗಿದೆ. ಜಿಲ್ಲೆಯ ನಂದಿಗಿರಿಧಾಮದ ಬ್ರಹ್ಮಗಿರಿ ಬೆಟ್ಟದಲ್ಲಿ ಚಾರಣ ಮಾಡಲು ಹೋಗಿ ವಿದ್ಯಾರ್ಥಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿದ ಘಟನೆಯಿಂದ ಅಧಿಕಾರಿಗಳುಎಚ್ಚೆತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಹ್ಮಗಿರಿಗೂ ಬೇಲಿ ಯೋಜನೆಯನ್ನು ರೂಪಿಸಿದ್ದಾರೆ.
ಜಿಲ್ಲೆಯ ಸ್ಕಂದಗಿರಿಯ ಕೆಲ ಭಾಗಗಳಲ್ಲಿ ಬೇಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಪೂರ್ವ ಅನುಮತಿ ಇಲ್ಲದೇ ಚಾರಣಕ್ಕೆ ಅವಕಾಶ ನೀಡುವುದಿಲ್ಲ. ಇಲಾಖೆಯ ನಿಯಮ ಮತ್ತುಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪ್ರವಾಸಿಗರು ಪಾಲಿಸಬೇಕು. ಪ್ರಸ್ತುತ ಸ್ಕಂದಗಿರಿಯಲ್ಲಿ2 ಕಿ.ಮೀ ಬೇಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ರಹ್ಮಗಿರಿಯಲ್ಲಿ ಸಹ ಬೇಲಿ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರವಾಸಿಗರು ಸಹಕರಿಸಬೇಕು.–ಅರ್ಸಲನ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.