ಆಧ್ಯಾತ್ಮಿಕತೆ ಆರೋಗ್ಯಕ್ಕೂ ನೇರ ನಂಟಿದೆ: ಶಿವಶಂಕರ್
Team Udayavani, Sep 5, 2021, 7:26 PM IST
ಚಿಕ್ಕಬಳ್ಳಾಪುರ: ಆಧ್ಯಾತ್ಮಿಕತೆಗೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಆಧ್ಯಾತ್ಮಿಕತೆಯಲ್ಲಿ ಕೊರತೆಯುಂಟಾದಾಗ ಆರೋಗ್ಯದ ಮೇಲೆ
ದುಷ್ಪರಿಣಾಮ ಬೀರುತ್ತದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಪಂ, ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ವೈದೇಹಿ ಆಸ್ಪತ್ರೆ ವೈಟ್‌ಫೀಲ್ಡ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, ಕೋವಿಡ್ ಲಸಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಕ್ಕೆ ಆಧ್ಯಾತ್ಮಿಕತೆ ಕೊಡುಗೆ ಕೊಟ್ಟಂತಹ ದೇಶ ಭಾರತ. ಆದ್ದರಿಂದ ವ್ಯಾಯಾಮದ ಜೊತೆಗೆ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕ್ಕೆ ಸಕಾರಾತ್ಮಕವಾಗಿ ಹೆಚ್ಚು ಪರಿಣಾಮ ಕಾರಿ ಆಗಲಿದೆ ಎಂದರು.
ನೌಕರರ ಪಾತ್ರ ಮಹತ್ವದ್ದು: ನೌಕರರ ಕೋವಿಡ್ 1 ಮತ್ತು 2ನೇ ಅಲೆಯ ಸಂದರ್ಭದಲ್ಲಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ, ಸರ್ಕಾರಿ ನೌಕರರು ಮತ್ತು ವೈದ್ಯರು ಮಾತ್ರ ದುಡಿಯುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಇವರಿಬ್ಬರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ವಿವರಿಸಿದರು.
ಜೀವಿತಾವಧಿ ಕ್ಷೀಣ: ಆರೋಗ್ಯದ ಸುಧಾರಣೆಯಲ್ಲಿ ನಷ್ಟವಾದರೆ, ಸಂಪತ್ತಿನಲ್ಲೂ ನಷ್ಟವಾದಂತೆ ಸಾಮಾನ್ಯವಾಗಿ ಆರೋಗ್ಯವು ಉತ್ತಮವಾಗಿರ
ಬೇಕು, ದೈಹಿಕವಾಗಿ ವ್ಯಾಯಾಮ ಬೇಕು, ಒಳ್ಳೆಯ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು, ವ್ಯಾಯಾಮಕ್ಕೆ ನಾವು ಹೆಚ್ಚಿನ ಒತ್ತನ್ನು ನೀಡಬೇಕು. ಇಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಂಡರೂ ರೋಗಗಳು ಬರುತ್ತವೆ.ಕಾಲ ಕಳೆದಂತೆ ಮಾನವನ ಜೀವಿತಾವಧಿ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣ ನಾವು ಸೇವಿಸುವ ಕಡಿಮೆ ಗುಣಮಟ್ಟದ ಆಹಾರ ಎಂದು ಹೇಳಿದರು.
ಇದನ್ನೂ ಓದಿ:ನಗರಸಭೆ: ಪರಿಷ್ಕೃತ ಮೀಸಲಾತಿ ಪಟ್ಟಿ ಪ್ರಕಟ
ಸಕಾರಾತ್ಮಕ ಚಿಂತನೆ ಮೂಡಿಸಿಕೊಳ್ಳಿ: ಮಾನಸಿಕವಾಗಿ ಮತ್ತು ದೈಹಿಕವಾಗಿ ನಾವು ಸದೃಢರಾಗಿರ ಬೇಕು, ಇದರಿಂದ ಉತ್ತಮ ಆರೋಗ್ಯ ಲಭಿಸಲು ಸಾಧ್ಯ. ನಕಾರಾತ್ಮಕ ಯೋಚನೆ ಮತ್ತು ಚಿಂತನೆಗಳನ್ನು ತೊರೆಯಬೇಕು. ನಕಾರಾತ್ಮಕ ಚಿಂತನೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿ ದೈಹಿಕವಾಗಿರೋಗಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಸಕಾರಾತ್ಮಕವಾದ ಯೋಚನೆ ಮತ್ತು ಚಿಂತನೆ ಮೂಡಿಸಿ ಕೊಳ್ಳಬೇಕು ಎಂದು ಹೇಳಿದರು.
ಜನರು ರೋಗ ಬಂದಾಗ ಅವರೇ ಔಷಯನ್ನು ತೆಗೆದುಕೊಳ್ಳುವುದನ್ನು ಬಿಟ್ಟು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದು ಅವರ ಸಲಹೆ
ಮತ್ತು ಸೂಚನೆಗಳನ್ನು ಪಾಲಿಸಬೇಕು ಎಂದರು.
ನೌಕರರ ಕಾರ್ಯ ಶ್ಲಾಘನೀಯ: ಕೋವಿಡ್ ಒತ್ತಡ ದಲ್ಲಿಯೂ ಸರ್ಕಾರದ ಪರವಾಗಿ ನೌಕರಿ ಮಾಡುವಂತಹವರು ಈ ದೇಶದ ಪ್ರಜೆಗಳನ್ನು ಉಳಿಸಲಿಕ್ಕಾಗಿ ದುಡಿಯಬೇಕಾಗುತ್ತದೆ. ಆ ರೀತಿಯದುಡಿಯುವ ಮನೋಭಾವವನ್ನು ಕರ್ನಾಟಕದ ಸರ್ಕಾರಿ ನೌಕರರು ತೋರಿರುವುದು ಶ್ಲಾಘನೀಯ ಎಂದು ಹೇಳಿದರು.
ಶಿಬಿರದಲ್ಲಿ ಕೋವಿಡ್ ಲಸಿಕೆ ನೀಡಿ, ಆರೋಗ್ಯ ತಪಾಸಣೆ ಮಾಡಲಾಯಿತು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್, ಉಪಾಧ್ಯಕ್ಷ
ಬಸವರಾಜು, ಶಿಡ್ಲಘಟ್ಟ ತಾಲೂಕು ಅಧ್ಯಕ್ಷಸುಬ್ಟಾರೆಡ್ಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನೌಕರರ ಸಂಘದ
ಹಿರಿಯರಾದ ಕೆ.ಸಿ.ರೆಡ್ಡಪ್ಪ, ವೈದೇಹಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.