![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 26, 2021, 2:54 PM IST
ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ನಿಯಂತ್ರಿಸುವಉದ್ದೇಶದಿಂದ ವಾರಾಂತ್ಯದ ಕರ್ಫ್ಯೂ ಜಾರಿಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರೇಷ್ಮೆನಾಡಿನಜನರು ಭಾನುವಾರವೂ ಉತ್ತಮ ಬೆಂಬಲ ವ್ಯಕ್ತಪಡಿಸಿದರು.
ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ನಾಗರಿಕರುಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದರು.ವಾಹನ ಸಂಚಾರವೂ ಸಂಪೂರ್ಣ ಬಂದ್ ಆಗಿತ್ತು.ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕೆಲವೇ ಬಸ್‌ಗಳು ಸಂಚಾರ ನಡೆಸಿದ್ದು,ಬಹುತೇಕ ಬಸ್‌ಗಳು ಡಿಪೋಗಳಿಂದ ಹೊರಬಂದಿಲ್ಲ.
ಗ್ರಾಮೀಣ ಪ್ರದೇಶವೂ ಸ್ತಬ್ಧ: ಚಿಕ್ಕಬಳ್ಳಾಪುರ ನಗರದಪ್ರಮುಖ ರಸ್ತೆಗಳು ಖಾಲಿ ಆಗಿದ್ದು, ಜನಸಂಚಾರವಾಹನಗಳ ಸಂಚಾರ ಇಲ್ಲದೇ ರಸ್ತೆಗಳು ಬಿಕೋಎನ್ನುತ್ತಿವೆ. ಭಾನುವಾರ ಬೆಳಗ್ಗೆ 6 ರಿಂದ 10ರವರೆಗೆಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳುತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದವು.ಇನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂಜನಸಂಚಾರ, ವಾಹನ ಸಂಚಾರ ಸ್ತಬ್ಧಗೊಂಡಿತ್ತು.
ಆಸ್ಪತ್ರೆ, ಮೆಡಿಕಲ್ ಕಾರ್ಯನಿರ್ವಹಿಸಿದವು. ನಗರಹಾಗೂ ಪಟ್ಟಣ ಪ್ರದೇಶಗಳಲ್ಲಿ ಸುಮ್ಮನೆಓಡಾಡುವರಿಗೆ ಪೊಲೀಸರು ಬಸ್ಕಿ ಹೊಡೆಸಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿಚಿಂತಾಮಣಿ, ರೇಷ್ಮೆ ನಗರ ಶಿಡ್ಲಘಟ್ಟ, ಗೌರಿಬಿದನೂರು,ಬಾಗೇಪಲ್ಲಿ, ಗುಡಿಬಂಡೆ ತಾಲೂಕಿನಲ್ಲಿ ವಾರಾಂತ್ಯದಕರ್ಫ್ಯೂಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ನಾಗರಿಕರು ಕಷ್ಟದನಡುವೆಯೂ ಕೊರೊನಾ ಸೋಂಕು ನಿಯಂತ್ರಿಸಲುಸರ್ಕಾರದ ನಿರ್ಧಾರಕ್ಕೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರಿಗೆ ಬಸ್ ಸಂಚಾರ ಇದ್ದರೂಪ್ರಯಾಣಿಕರು ಸಂಚರಿಸಲು ಹಿಂದೇಟು ಹಾಕಿದ್ದರಿಂದಬಸ್ ಸಂಚಾರ ಕಡಿಮೆ ಆಗಿತ್ತು.
ಎಪಿಎಂಸಿ ಮಾರುಕಟ್ಟೆ ಬಂದ್: ಕೊರೊನಾಸೋಂಕು ನಿಯಂತ್ರಿಸಲು ಸರ್ಕಾರ ವಾರಾಂತ್ಯದಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣದ(ಕೆ.ವಿ.ಕ್ಯಾಂಪಸ್ ಹತ್ತಿರದ ಜಾಗಕ್ಕೆ ಸ್ಥಳಾಂತರಿಸಿದಹೂವಿನ ಮಾರುಕಟ್ಟೆ) ಮಾರುಕಟ್ಟೆಗಳಿಗೆ ರಜೆಘೋಷಿಸಿದ್ದರಿಂದ ಭಾನುವಾರದಂದು ಸಹಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ ಎಂದುಎಪಿಎಂಸಿ ಕಾರ್ಯದರ್ಶಿ ಫೆ„ಸಲ್ ಅಹಮದ್ ಹಕೀಂತಿಳಿಸಿದರು.
61 ವಾಹನ ವಶ: ಚಿಕ್ಕಬಳ್ಳಾಪುರ ಜಿಲ್ಲಾದ್ಯಂತವಾರಾಂತ್ಯದ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದ್ದರಲ್ಲದೆ, ಚಿಕ್ಕಬಳ್ಳಾಪುರ-ಶಿಡ್ಲಘಟ್ಟಮಾರ್ಗದ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ವಾಹನಸಂಚಾರ ಇಲ್ಲದೇ ಬಿಕೋ ಎನ್ನುತ್ತಿತ್ತು. ಸೋಂಕುನಿಯಂತ್ರಿಸಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿಬೆಂಬಲ ವ್ಯಕ್ತಪಡಿಸಿದ್ದಾರೆ. ವಾರಾಂತ್ಯದ ಕರ್ಫ್ಯೂಉಲಂಘಿಸಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರಸಂಚರಿಸಿದ 61 ವಾಹನ ವಶಪಡಿಸಿಕೊಳ್ಳಲಾಗಿದೆಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
ದಂಡ: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರಿಂದಕೆಲವರು ಮಹಾವೀರ್ ಜಯಂತಿ ಇರುವುದನ್ನುಲೆಕ್ಕಿಸದೆ ಮಾಂಸದ ಅಂಗಡಿಗಳನ್ನು ತೆರೆದು ಮಾರಾಟಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಅರಿತಪೊಲೀಸರು ಕೂಡಲೇ ಕಾರ್ಯಪ್ರವೃತರಾಗಿಅಂಗಡಿಗಳನ್ನು ಮುಚ್ಚಿದ್ದರಲ್ಲದೆ ಅಂಗಡಿ ಮಾಲಿಕರಿಗೆದಂಡ ವಿಧಿ ಸಿದರು
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.