ಕೇಂದ್ರ ಪುರಸ್ಕೃತ ಯೋಜನೆ ಪರಿಶೀಲಿಸಿದ ತಂಡ
ಜಿಲ್ಲೆಯ ಆಯ್ದ10 ಗ್ರಾಪಂಗಳಿಗೆ ಭೇಟಿ , ನರೇಗಾ, ವಸತಿ, ಪಿಎಂಜಿಎಸ್‌ವೈ, ಎನ್ ಆರ್‌ಎಲ್‌ಎಂ ಕಾಮಗಾರಿ ವೀಕ್ಷಣೆ
Team Udayavani, Nov 12, 2020, 8:29 PM IST
ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಎನ್‌ಎಲ್‌ಎಂ ವಿಜಯವ್ಯಾಸ್ ಮತ್ತು ಸುಹಾಸ್ ಅವರನ್ನು ಒಳಗೊಂಡ ತಂಡದ ಸದಸ್ಯರು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಕುರಿತು ಪರಿಶೀಲಿಸಿದರು.
ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ತಾಲೂಕಿನ ಆಯ್ದ10 ಗ್ರಾಪಂಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆ, ವಸತಿ, ಪಿಎಂಜಿಎಸ್ ವೈ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆಗಳ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಚ್ಚುಗೆ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ-ತಿಮ್ಮಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳ ಕಲಿಕಾ ವ್ಯವಸ್ಥೆಯನ್ನು ಕಂಡು ಹರ್ಷ ವ್ಯಕ್ತಪಡಿಸಿ ಮಕ್ಕಳು ಆಟದೊಂದಿಗೆ ಪಾಠ ಕಲಿಯುವ ವಿಧಾನ ನೋಡಿ ಇದೇ ಮಾದರಿಯಲ್ಲಿ ಬೇರೆ ಕಡೆ ಕಲಿಕಾ ವ್ಯವಸ್ಥೆ ಮಾಡಬೇಕೆಂದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಮಜಿ ನರೇಗಾ ಯೋಜನೆ ಯಡಿನಿರ್ಮಿಸಿರುವ ಗ್ರಾಮೀಣಾ ಉದ್ಯಾನ ವೀಕ್ಷಿಸಿ ವಿಶ್ರಾಂತಿ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯವನ್ನು ವೀಕ್ಷಿಸಿದರು. ತದನಂತರ ಗೌರಿಬಿದನೂರು ತಾಲೂಕಿನ ರಮಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕರ್ನಾಟಕ ನಕ್ಷೆ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಗೋಕುಂಟೆ ಕಾಮಗಾರಿ ವೀಕ್ಷಣೆ ಮಾಡಿ ಪ್ರಶಂಶಿಸಿದರು.
ಶಿಡ್ಲಘಟ್ಟ ಪಂಚಾಯ್ತಿ ಇಒ ಶಿವಕುಮಾರ್, ಮಜಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಇ.ತಿಮ್ಮಸಂದ್ರ ಗ್ರಾಪಂ ಪಿಡಿಒ ತನ್ವೀರ್ ಮತ್ತಿತರರು ಇದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಜಿನರೇಗಾ ಯೋಜನೆಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಎನ್ ಎಲ್‌ಎಂ ತಂಡ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು, ಗೊರತುಪಲ್ಲಿ,ಪಾಲ್ಯಾಕ್, ಎಲ್ಲಂಪಲ್ಲಿ, ಗೌರಿಬಿದನೂರು ತಾಲೂಕಿನ ಬಿ.ಬೊಮ್ಮಸಂದ್ರ, ಗೌಡಗೆರೆ, ಹೊಸೂರು, ರಮಾಪುರ ಹಾಗೂ ಶಿಡ್ಲಘಟ್ಟ ತಾಲೂಕಿನ ಇ.ತಿಮ್ಮಸಂದ್ರ ಮತ್ತು ಮೇಲೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧಕಾಮಗಾರಿ ವೀಕ್ಷಣೆ ಮಾಡಿದರು ಬಳಿಕ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.