ಚೇಳೂರಿನಲ್ಲಿ ತಹಶೀಲ್ದಾರ್ ಕಚೇರಿ
Team Udayavani, Sep 24, 2022, 7:27 PM IST
ಚೇಳೂರು: ನೂತನ ತಾಲೂಕಾದ ಚೇಳೂರು ರಚನೆಯಾಗಿರುವ ತಾಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಕಚೇರಿಯನ್ನು ಪ್ರಾರಂಬಿಸಲು ಬಾಗೇಪಲ್ಲಿ ತಹಶೀಲ್ದಾರ್ ವೈ.ರವಿ ನೇತೃತ್ವದಲ್ಲಿ ಗ್ರಾಮದ ವಿವಿಧ ಸರ್ಕಾರಿ ಕಟ್ಟಡಗಳು ಖಾಸಗಿ ಕಟ್ಟಡಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿ, ತಾಲೂಕಿನಲ್ಲಿ ತಹಶೀಲ್ದಾರ್ ಕಚೇರಿಯನ್ನು ಪ್ರಾರಂಭ ಮಾಡಲು ಅಗತ್ಯ ಸಂಖ್ಯೆಯಲ್ಲಿ ಹುದ್ದೆಗಳನ್ನು ಮಂಜೂರು ಮಾಡಿದೆ. ಚೇಳೂರು ಸರಕಾರಿ ಕಚೇರಿಗಳಿಗೆ ಷೇರ್ ಖಾನ್ ಕೋಟೆ ಸ.ನಂ. 47 ರಲ್ಲಿ 9-10 ಕುಂಟೆ ಜಮೀನು ಗುರುತಿಸಿ ಸರಕಾರಕ್ಕೆ ವರದಿ ನೀಡಿದ್ದು ಜಮೀನಿಗೆ ಅಳತೆ ಮಾಡಿಸಿ ಬೇಲಿ ಹಾಕಲಾಗುವುದು ಎಂದರು.
ಚೇಳೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಾತನಾಡಿದರು. 40 ಕಿ.ಮೀ.ದೂರದ ಬಾಗೇಪಲ್ಲಿ ತಾಲೂಕು ಕಚೇರಿಗಳಿಗೆ ಜಾತಿ ಪತ್ರ. ಮತ್ತಿತರೆ ಕೆಲಸಗಳಿಗೆ ಹೋಗಿ ಬರುವ ಭಾದೆ ತಪ್ಪುತ್ತದೆ ಎಂದರು. ಬಾಗೇಪಲ್ಲಿ ಗ್ರೇಡ್-2 ತಹಶೀಲ್ದಾರ್ ವಿ.ಸುಬ್ರಮಣಿ, ನಾಡಕಚೇರಿಯ ರವಿಶಂಕರ್, ವಿ.ಶ್ರೀನಿವಾಸ್, ವೈ. ವೆಂಕಟೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯ ಪಿ.ರಾಧಾಕೃಷ್ಣಾ, ಗುನ್ನಾಪಾಪರೆಡ್ಡಿ, ಪೇಪರ್ ಜೆ.ವಿ.ಚಲಪತಿ, ಪಿ.ಎನ್.ಆಂಜನೇಯರೆಡ್ಡಿ, ವೈ.ಶಂಕರಪ್ಪ, ಟಿ.ಎನ್.ಸೀನಪ್ಪ, ದರಖಾಸ್ತ ಸಮಿತಿ ಸದಸ್ಯ ವೈ.ಚಂದ್ರ, ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಸೋಮಶೇಖರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Kota: ರಾ.ಹೆ. ಪಕ್ಕದಲ್ಲಿ ನಿರ್ವಹಣೆ ಇಲ್ಲದೆ ಭಾರೀ ಸಮಸ್ಯೆ; ಸೈಕಲ್ ಸವಾರರಿಗೆ ಅಪಾಯ
Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Mangalore: ಲೋವರ್ ಬೆಂದೂರ್‌ವೆಲ್-ಕರಾವಳಿ ವೃತ್ತ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.