ರಾಜ್ಯೋತ್ಸವದಲ್ಲೂ ತೆಲುಗು ಚಿತ್ರಗಳ ಅಬ್ಬರ
Team Udayavani, Nov 2, 2019, 12:52 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಒಂದೆಡೆ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಸದ್ದು ಕೇಳಿ ಬಂದರೆ, ಮತ್ತೂಂದೆಡೆ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ತೆಲುಗು ಭಾಷೆಯ ಚಿತ್ರಗಳು ಅಬ್ಬರದ ಪ್ರದರ್ಶನ ಯಾವುದೇ ಅಡೆತಡೆ ಇಲ್ಲದೇ ಕನ್ನಡ ಅಸ್ಮಿತೆಯನ್ನು ಅಣಕಿಸುವಂತಿದ್ದ ದೃಶ್ಯ ಜಿಲ್ಲಾ ಕೇಂದ್ರದಲ್ಲಿಯೇ ಕಂಡು ಬಂತು.
ನವೆಂಬರ್ ತಿಂಗಳ ಪೂರ್ತಿ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವಂತೆ ಜಿಲ್ಲಾಡಳಿತ ನೀಡಿದ ಸೂಚನೆಗೂ ಇಲ್ಲಿನ ಚಿತ್ರ ಮಂದಿರಗಳ ಮಾಲೀಕರು ಬಗ್ಗಲಿಲ್ಲ. ಅತ್ತ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಕೊಟ್ಟು ಕನ್ನಡ ಪರ ಸಂಘಟನೆಗಳು ತೆಲುಗು ಭಾಷಾ ಚಿತ್ರಗಳ ಪ್ರದರ್ಶನಕ್ಕೆ ತೆಲೆ ಕೆಡಿಸಿಕೊಳ್ಳದೇ ಸುಮ್ಮನಾದ ಕಾರಣ ರಾಜ್ಯೋತ್ಸವ ತಿಂಗಳ ಮೊದಲ ದಿನವೇ ಜಿಲ್ಲೆಯಲ್ಲಿ ಪರ ಭಾಷಾ ಚಿತ್ರಗಳು ಕೇಕೆ ಹಾಕುವಂತೆ ಆಯಿತು.
ಕನ್ನಡ ಶಾಲೆಗಳು ವಿಲೀನ: ಜಿಲ್ಲೆಯು ಆಂಧ್ರದ ಗಡಿಯಲ್ಲಿದ್ದು ತೆಲುಗು ಭಾಷೆ ಹೆಚ್ಚು ಪ್ರಾಬಲ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿ ಆಂಗ್ಲ ವ್ಯಾಮೋಹ ದಿಂದ ಕನ್ನಡ ಶಾಲೆಗಳು ಒಂದಂಕಿ ದಾಟದ ಪರಿಸ್ಥಿತಿ ನಿರ್ಮಾಣವಾಗಿ ಜಿಲ್ಲೆಯಲ್ಲಿ ಹತ್ತಾರು ವರ್ಷದಲ್ಲಿ ನೂರಾರು ಕನ್ನಡ ಶಾಲೆಗಳು ಮುಚ್ಚಿ ಇತರೆ ಶಾಲೆಗಳಲ್ಲಿ ಸದ್ದಿಲ್ಲದೇ ವಿಲೀನವಾಗಿದೆ. ಆದರೆ ನವೆಂಬರ್ ತಿಂಗಳಲ್ಲಾದರೂ ಕನ್ನಡ ನೆಲ, ಜಲ ಸಂಸ್ಕೃತಿ, ಭಾಷೆ ಬಗ್ಗೆ ಅರಿವು ಮೂಡಿಸುವ ಅಥವಾ ಒಳ್ಳೆಯ ಸದಾಭಿರುಚಿಯ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಚಿತ್ರ ಮಂದಿರದ
ಮಾಲೀಕರಿಗೆ ಜಿಲ್ಲಾಡಳಿತ ಸೂಚಿಸಿದರೂ ಯಾವುದಕ್ಕೂ ಕ್ಯಾರೆ ಎನ್ನದ ಚಿತ್ರ ಮಂದಿರಗಳು, ಕನ್ನಡ ಭಾಷೆಗೆ ಅಪಮಾನ ಮಾಡುವ ರೀತಿಯಲ್ಲಿ ಪರ ಭಾಷಾ ಚಿತ್ರಗಳನ್ನು ಪ್ರದರ್ಶಿಸಿ ತಮ್ಮ ಮೊಂಡುತನ ಪ್ರದರ್ಶಿಸುತ್ತಿರುವುದು ಜಿಲ್ಲೆಯ ಕನ್ನಡ ಪ್ರೇಮಿಗಳಲ್ಲಿ ಬೇಸರ ತರಿಸಿದೆ.
ಜಿಲ್ಲಾಡಳಿತ ಸೂಚನೆ ಲೆಕ್ಕಕ್ಕಿಲ್ಲ: ಸಾಮಾನ್ಯವಾಗಿ ಹಿಂದೆ ಚಿತ್ರದ ಮಂದಿರ ಮಾಲೀಕರೇ ಜಿಲ್ಲಾಡಳಿತದ ಸೂಚನೆಗೆ ಕಿವಿಗೊಟ್ಟು ಕನ್ನಡ ಚಿತ್ರಗಳನ್ನು ವರ್ಷ ಪೂರ್ತಿ ಅಲ್ಲದಿದ್ದರೂ ನವೆಂ ವರ್ ತಿಂಗಳ ರಾಜ್ಯೋತ್ಸವದ ಪ್ರಯುಕ್ತ ಪ್ರದ ರ್ಶಿಸಿ ಕನ್ನಡ ಪ್ರೇಮ ಮೆರೆಯುತ್ತಿದ್ದವು. ಆದರೆ ವರ್ಷದಿಂದ ವರ್ಷಕ್ಕೆ ನವೆಂಬರ್ ತಿಂಗಳು ಬಂದರೂ ಕೂಡ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಿ ಜಿಲ್ಲಾಡಳಿತ ಸೂಚನೆ ಲೆಕ್ಕಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಚಿತ್ರ ಪ್ರದರ್ಶಿಸಬಹುದು. ಕಡ್ಡಾಯವಲ್ಲ ಅಂತೆ..
ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಹೇಳಿದೆ. ನೀವು ತೆಲುಗು ಭಾಷೆಯ ಚಿತ್ರಗಳ ಪ್ರದರ್ಶನ ಮುಂದುವರೆಸಿದ್ದೀರಲ್ಲಾ ಎಂದು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರ ಮಂದಿರದ ವ್ಯವಸ್ಥಾಪಕ ವೇಣುರನ್ನು ಪ್ರಶ್ನಿಸಿದರೆ, ಯಾವುದೇ ಭಾಷೆಯ ಚಿತ್ರವನ್ನು ನಾವು ಪ್ರದರ್ಶಿಸಬಹುದು. ಕನ್ನಡ ಚಿತ್ರ ಪ್ರದರ್ಶಿಸಬೇಕೆಂಬ ಕಡ್ಡಾಯ ಇಲ್ಲ ಎಂದರು. ಬಾಲಾಜಿ ಚಿತ್ರ ಮಂದಿರದಲ್ಲಿ ತೆಲುಗು ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹರೆಡ್ಡಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಪ್ರೇಕ್ಷಕರು ಬರಲ್ಲ ಎಂಬ ಆರೋಪ : ಕನ್ನಡ ಚಿತ್ರಗಳನ್ನು ಪ್ರದರ್ಶಿಸಬಹುದು. ಆದರೆ ನಾವು ನಿರೀಕ್ಷಿಸಿದಷ್ಟು ಪ್ರೇಕ್ಷಕರು ಸಿನಿಮಾ ನೋಡಲಿಕ್ಕೆ ಬರಲ್ಲ. ಚಿತ್ರ ಮಂದಿರ ನಿರ್ವಹಣೆಗೆ ತಗುಲುವ ವೆಚ್ಚವಾದರೂ ನಮಗೆ ಬರಬೇಕಲ್ಲ. ಸುಮ್ಮನೆ ಕನ್ನಡ ಚಿತ್ರ ಹಾಕಿ ಎನ್ನುತ್ತಾರೆ. ಒತ್ತಾಯ ಮಾಡುವರೇ ಚಿತ್ರ ಮಂದಿರಗಳಿಗೆ ಬಂದು ಚಿತ್ರಗಳನ್ನು ವೀಕ್ಷಣೆ ಮಾಡುವುದಿಲ್ಲ. ಕಳೆದ ವರ್ಷ ಕನ್ನಡ ಚಿತ್ರಗಳನ್ನು ಸಾಕಷ್ಟು ಪ್ರದರ್ಶನ ಮಾಡಿದೆವು. ಈಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ಆದರೆ ನಾವು ನಿರೀಕ್ಷಿದಷ್ಟು ಪ್ರೇಕ್ಷಕರು ಬರಲ್ಲ ಎಂದು ನಗರದ ವಾಣಿ ಚಿತ್ರದ ಮಂದಿರದಲ್ಲಿ ಟಿಕೆಟ್ ಹಂಚಿಕೆ ಮಾಡುವ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಉದಯವಾಣಿಗೆ ತಿಳಿಸಿದರು.
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.