Education Department; ಕೋವಿಡ್‌ ಬಳಿಕದ ಕಲಿಕಾ ಪ್ರಗತಿಯಲ್ಲೂ ಹೆಣ್ಮಕ್ಕಳೇ ಮುಂದು!

5 ಮತ್ತು 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಿದ್ದ ಶಿಕ್ಷಣ ಇಲಾಖೆ

Team Udayavani, Sep 19, 2023, 6:30 AM IST

Education Department; ಕೋವಿಡ್‌ ಬಳಿಕದ ಕಲಿಕಾ ಪ್ರಗತಿಯಲ್ಲೂ ಹೆಣ್ಮಕ್ಕಳೇ ಮುಂದು!

ಚಿಕ್ಕಬಳ್ಳಾಪುರ: ಕೋವಿಡ್‌-19 ಬಳಿಕ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಂಡ ಅನಂತರ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ತಿಳಿಯಲು ಶಿಕ್ಷಣ ಇಲಾಖೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ್ದ ಮೌಲ್ಯಾಂಕನ ಪರೀಕ್ಷೆಯಲ್ಲಿ ಗಂಡು ಮಕ್ಕಳಗಿಂತ ಹೆಣ್ಣು ಮಕ್ಕಳೇ ಕಲಿಕಾ ಪ್ರಗತಿಯಲ್ಲಿ ಸ್ಟ್ರಾಂಗ್‌ ಇರುವುದು ತಿಳಿದು ಬಂದಿದೆ.

ಪೋಷಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ರಾಜ್ಯದ ಉಚ್ಚ ನ್ಯಾಯಾಲಯದ ಗಮನ ಕೂಡ ಸೆಳೆದಿದ್ದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನಡೆಸಿದ್ದ ಮೌಲ್ಯಾಂಕನ ಪರೀಕ್ಷೆಯ ಫ‌ಲಿತಾಂಶವನ್ನು ಕ್ರೋಡೀಕರಿಸಿರುವ ಶಿಕ್ಷಣ ಇಲಾಖೆ, 5ನೇ ತರಗತಿಗಿಂತ 8ನೇ ತರಗತಿ ವಿದ್ಯಾರ್ಥಿಗಳು ಕಲಿಕಾ ಪ್ರಗತಿಯಲ್ಲಿ ಸ್ವಲ್ಪ ಹಿನ್ನಡೆ ಇರುವುದನ್ನು ಖಚಿಪಡಿಸಿಕೊಂಡಿದೆ.

2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕ ಪರೀಕ್ಷೆ ನಡೆಸಿದ್ದು 5ನೇ ತರಗತಿಯ 56,157 ಶಾಲೆಗಳ ಬರೋಬ್ಬರಿ 9,59,734 ಮಂದಿ ವಿದ್ಯಾರ್ಥಿಗಳು ಹಾಗೂ 8ನೇ ತರಗತಿಯ ಒಟ್ಟು 22,638 ಶಾಲೆಗಳ ಒಟ್ಟು 9,43,919 ವಿದ್ಯಾರ್ಥಿಗಳು ಸಹಿತ ಒಟ್ಟು 19,03,653 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪ್ರಮುಖವಾಗಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನತೆಗಳು, ಕಲಿಕಾ ಪ್ರಗತಿ, ಯಾವ ವಿಷಯದ ಕಲಿಕೆಯಲ್ಲಿ ಎಷ್ಟು ಹಿನ್ನಡೆ ಇದ್ದಾರೆ ಎಂಬುದನ್ನು ತಿಳಿಯುವುದರ ಜತೆಗೆ ವಿವಿಧ ಆಯಾಮಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅಳೆಯುವ ದೃಷ್ಟಿಯಿಂದ ಅದರಲ್ಲೂ ಕೋವಿಡ್‌ ಪರಿಣಾಮ ಶಾಲೆಗಳು ಒಂದೆರಡು ವರ್ಷ ಸಂಪೂರ್ಣ ಬಾಗಿಲು ಮುಚ್ಚಿದ್ದರ ಪರಿಣಾಮ ಬಳಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ತಿಳಿಯುವ ಉದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನುರಿತ ಸಂಪನ್ಮೂಲ ಶಿಕ್ಷಕರಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮೌಖಿಕ ಹಾಗೂಲಿಖಿತ 40 ಸೇರಿ ಒಟ್ಟು 50 ಅಂಕಗಳಿಗೆ ಮೌಲ್ಯಾಂಕನ ಪರೀಕ್ಷೆಯನ್ನು ಕಳೆದ ಮಾರ್ಚ್‌, ಎಪ್ರಿಲ್‌ ತಿಂಗಳಲ್ಲಿ ನಡೆಸಿತ್ತು. ಮೌಲ್ಯಂಕನ ಪರೀಕ್ಷೆ ಬಳಿಕ ತರಗತಿವಾರು, ಲಿಂಗವಾರು ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ವಿಶ್ಲೇಷಿಸಲಾಗಿದೆ.

ಕಲಿಕಾ ಪ್ರಗತಿಯಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುಂದಿದ್ದಾರೆ. 5ನೇ ತರಗತಿಯಲ್ಲಿ ನಗರ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಶೇ.76ರಷ್ಟಿದ್ದರೆ ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿ ಶೇ.80ರಷ್ಟಿದೆ. 8ನೇ ತರಗತಿಯಲ್ಲಿ ನಗರ ವಿದ್ಯಾರ್ಥಿಗಳು ಪ್ರಗತಿ ಶೇ.76ರಷ್ಟಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿ ಶೇ.78ರಷ್ಟಿದೆ. ಇನ್ನೂ ಮೌಲ್ಯಾಂಕನವನ್ನು ಮಾಧ್ಯಮವಾರು, ವಿಷಯವಾರು, ಭಾಷೆಯವಾರು, ಶಾಲಾ ಆಡಳಿತವಾರು, ಸಾಮಾಜಿಕ ವರ್ಗವಾರು, ಸ್ಥಾನಿಕವಾರು ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಗುರುತಿಸಿದ್ದು, ಎಲ್ಲ ವಿಭಾಗಗಳಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚು ಕಲಿಕಾ ಪ್ರಗತಿ ಸಾಧಿಸಿರುವುದು ಮೌಲ್ಯಾಂಕ ಪರೀಕ್ಷೆಯಲ್ಲಿ ಗೊತ್ತಾಗಿದೆ.

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapura: ಹೋಟೆಲ್ ಗೆ ನುಗ್ಗಿದ ಟಿಪ್ಪರ್; ಇಬ್ಬರು ಸಾವು

Chikkaballapura: ಹೋಟೆಲ್ ಗೆ ನುಗ್ಗಿದ ಟಿಪ್ಪರ್; ಇಬ್ಬರು ಸಾವು

ಅತ್ಯಾಚಾರಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ

Chikkaballapura: ಅತ್ಯಾ*ಚಾರಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ

1-asaas

Sidlaghatta; ಚರಂಡಿಗೆ ಉರುಳಿದ ಸರಕಾರಿ ಬಸ್: ತಪ್ಪಿದ ಅವಘಡ

1-aaaa

Chikkaballapura: ಮರು ಮದುವೆ ಒಪ್ಪಿ ವ್ಯಕ್ತಿಗೆ 7.40 ಲಕ್ಷ ರೂ. ವಂಚಿಸಿದ್ದ ಮಹಿಳೆ, ಬಂಧನ

1-PE-a1

Pradeep Eshwar; ರಾಜಕಾರಣದಲ್ಲಿ ತುಂಬಾ ಜನರನ್ನ ಡ್ಯಾನ್ಸ್ ಮಾಡಿಸಿದ್ದೀನಿ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.