ಚುನಾವಣೆ ಬಹಿಷ್ಕಾರ ಮಾಡುವುದಿಲ್ಲ
Team Udayavani, Mar 16, 2019, 7:36 AM IST
ಚಿಂತಾಮಣಿ: ಮತದಾನ ಸಂವಿಧಾನ ನೀಡಿರುವ ಹಕ್ಕು, ಯಾವುದೇ ಕಾರಣಕ್ಕೂ ನಾವು ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಿಲ್ಲ ಎಂದು ನೆರ್ನಕಲ್ಲು, ಮಡಬಹಳ್ಳಿ, ಮಾದರಕಲ್ಲು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಮ್ಮ ಗ್ರಾಮಗಳ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಕೆಲ ಮುಖಂಡರು ಗ್ರಾಮಸ್ಥರ ಜೊತೆ ಯಾವುದೆ ರೀತಿಯಲ್ಲಿ ಚರ್ಚೆ ಮಾಡದೆ ಇಲ್ಲಸಲ್ಲದ ಹೇಳಿಕೆ ನೀಡಿ ಗ್ರಾಮಸ್ಥರನ್ನು ಮರಳು ಮಾಡಿದ್ದಾರೆ. ನೆರ್ನಕಲ್ಲು, ಮಡಬಹಳ್ಳಿ ಹಾಗೂ ಮಾದರ ಕಲ್ಲು ಗ್ರಾಮಸ್ಥರು ಮತದಾನ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಶುಕ್ರವಾರ ಪತ್ರಿಕೆಯೊಂದಿಗೆ ಪೆರಮಾಚನಹಳ್ಳಿ ಗ್ರಾಪಂ ಸದಸ್ಯ ಶ್ಯಾಮೇಗೌಡ, ಮಡಬಹಳ್ಳಿಯ ಹಿರಿಯ ಮುಖಂಡ ಕೆ.ವಿ.ವೆಂಕಟೇಶ್ ಮೂರ್ತಿ ನೆತೃತ್ವದಲ್ಲಿ ಹಲವು ಗ್ರಾಮಸ್ಥರು ಮಾತನಾಡಿ, ಕಲ್ಲು ಗಣಿಗಾರಿಕೆ ವಿರುದ್ಧ ಆಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರ ಕಲ್ಲು ಗಣಿಗಾರಿಕೆಯು ಕಾನೂನು ಬದ್ಧವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಚುನಾವಣೆ ಬಹಿಷ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಗ್ರಾಮದ ಕೆಲ ಮುಖಂಡರು ಗ್ರಾಮಸ್ಥರಿಂದ ಯಾವುದೇ ಅಭಿಪ್ರಾಯ ಪಡೆಯದೆ ಕಲ್ಲು ಗಣಿಗಾರಿಕೆಯ ಮಾಲೀಕರಿಂದ ಹಣ ವಸೂಲಿ ಮಾಡುವ ನೆಪದಲ್ಲಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಇಲ್ಲಸಲ್ಲದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು. ಕೃಷಿಕ ಸಮಾಜದ ನಿರ್ದೇಶಕ ಕೆ.ವಿ.ವೆಂಕಟೇಶ್ ಮೂರ್ತಿ, ಆನಂದ, ಕರವೇ ಜಿಲ್ಲಾ ಕಾರ್ಯದರ್ಶಿ ಅಮರನಾಥ್, ನಾರಾಯಣಸ್ವಾಮಿ, ಮಂಜುನಾಥ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.