ಕೋರಂ ಕೊರತೆಗೆ ರದ್ದಾಗಿದ್ದ ಜಿಪಂ ಸಾಮಾನ್ಯ ಸಭೆ 25ಕ್ಕೆ
ಜಿಲ್ಲೆಯ ಕೈ ಸದಸ್ಯರ ಗುಂಪುಗಾರಿಕೆ ಶಮನವಾಗುತ್ತಾ? • ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಸಭಾ ಸೂಚನಾ ಪತ್ರ
Team Udayavani, Jun 14, 2019, 9:15 AM IST
ಚಿಕ್ಕಬಳ್ಳಾಪುರ ಜಿಪಂ ಕಚೇರಿ ಹೊಂದಿರುವ ಜಿಲ್ಲಾಡಳಿತ ಭವನ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೂ ಮೊದಲು ಡಿ.26 ರಂದು ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಅಧ್ಯಕ್ಷತೆಯಲ್ಲಿ ಕರೆದಿದ್ದ ಜಿಪಂ ಸಾಮಾನ್ಯ ಸಭೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ, ಭಿನ್ನಮತದಿಂದ ಸ್ವಪಕ್ಷೀಯ ಸದಸ್ಯರೇ ಕೈ ಕೊಟ್ಟಿದ್ದಕ್ಕೆ ಕೋರಂ ಕೊರತೆಯಿಂದ ರದ್ದಾದ ಬಳಿಕ ಬರೋಬ್ಬರಿ ಆರು ತಿಂಗಳ ನಂತರ ಮತ್ತೆ ಜಿಪಂ ಸಾಮಾನ್ಯ ಸಭೆ ನಡೆ ಸಲು ಜೂ.25ಕ್ಕೆ ಮುಹೂರ್ತ ನಿಗದಿಯಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಸಭಾ ಸೂಚನಾ ಪತ್ರ: ಲೋಕಸಭಾ ಚುನಾವಣೆ ಯಲ್ಲಿ ಹೀನಾಯ ಸೋಲು ಕಂಡ ನಂತರ ಜಿಪಂ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ಜಿಪಂ ಸಿಇಒ ಸಭೆಗೆ ಸದಸ್ಯರೆಲ್ಲಾ ತಪ್ಪದೇ ಬರಬೇಕೆಂದು ಸದಸ್ಯರಿಗೆ ಸಭಾ ಸೂಚನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಆದರೆ ಜಿಲ್ಲೆಯ ಕಾಂಗ್ರೆಸ್ ಸದಸ್ಯರ ಆಂತರಿಕ ಕಚ್ಚಾಟ ಮುಗಿದು ಸಭೆ ಸುಸೂತ್ರವಾಗಿ ನಡೆ ಯುತ್ತಾ? ಅಥವಾ ಜಿಪಂ ಅಧ್ಯಕ್ಷರ ಬದಲಾವಣೆಗೆ ಸ್ವಪಕ್ಷೀಯ ಸದಸ್ಯರ ಬಂಡಾಯ ಮುಂದು ವರಿಸುತ್ತಾರಾ ಎಂಬುದುಚರ್ಚೆಗೆ ಗ್ರಾಸವಾಗಿದೆ.
ಎರಡು ಬಣ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಒಳಗಿನ ಗುಂಪುಗಾರಿಕೆ ಇನ್ನಷ್ಟು ಒಳಗೊಳಗೆ ಕುದಿಯುತ್ತಿದ್ದು, ಒಂದು ಕಡೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಮತ್ತೂಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬಣವಾಗಿ ವಿಂಗಡನೆಯಾಗಿದೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರಿಗೆ ಯಾರ ಮೇಲೆ ಯಾರಿಗೂ ಹಿಡಿತವಿಲ್ಲದಂತೆ ಆಗಿದೆ. ಚುನಾವಣೆಯಲ್ಲಿ ಎಂ.ವೀರಪ್ಪ ಮೊಯ್ಲಿ ಸೋತಿದ್ದಾರೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೊಯ್ಲಿ ಮಾತು ಕೇಳದ ಸ್ಥಿತಿಯಲ್ಲಿದ್ದಾರೆ.
ಡಿ.26ಕ್ಕೆ ಜಿಪಂನಲ್ಲಿ ಆಗಿದ್ದೇನು?: ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಅಧ್ಯಕ್ಷತೆಯಲ್ಲಿ ಜಿಪಂ ಸಾಮಾನ್ಯ ಸಭೆಯನ್ನು ಕಳೆದ 2018ರ ಡಿ.26 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಕರೆಯಲಾಗಿತ್ತು. ನಿಗದಿತ ಸಮಯಕ್ಕೂ ಮೊದಲೇ ಅಧ್ಯಕ್ಷರು ತಮ್ಮ ಕಚೇರಿಗೆ ಆಗಮಿಸಿದ್ದರು.
ಆದರೆ ಬೆರಳೆಣಿಕೆಯಷ್ಟು ಮಂದಿ ಜಿಪಂ ಸದ ಸ್ಯರು ಮಾತ್ರ ಅಧ್ಯಕ್ಷರ ಕೊಠಡಿಗೆ ಆಗಮಿಸಿದ್ದರಿಂದ ಅನುಮಾನಗೊಂಡ ಅಧ್ಯಕ್ಷರು ಸಭಾಂಗಣಕ್ಕೆ ಬಾರದೇ ಸದಸ್ಯರ ಬರುವಿಕೆಗೆ ಎದುರು ನೋಡುತ್ತಿದ್ದರು. ಆದರೆ 28 ಸದಸ್ಯರ ಪೈಕಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತುಪಡಿಸಿ ಕೇವಲ 12 ಮಂದಿ ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರಿಂದ 11:45 ಆದರೂ ಸಭಾಂಗಣಕ್ಕೆ ಯಾರು ಬಂದಿರಲಿಲ್ಲ.
ಆಗ ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಜಿಪಂ ಸಭಾಂಗಣದಕ್ಕೆ ಆಗಮಿಸಿ ಸಭೆ ನಡೆಸಲು ಕೋರಂ ಕೊರತೆ ಇದೆಯೆಂದು ಹೇಳಿ ಜಿಪಂ ಸಾಮಾನ್ಯ ಸಭೆಯನ್ನು ಮುಂದೂಡಿದ್ದರು. ಇದಾದ ಬಳಿಕ ಮತ್ತೆ ಸಾಮಾನ್ಯ ಸಭೆ ಕೆರೆಯಲು ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ.
28ಕ್ಕೆ ಸದಸ್ಯರಿಗೆ 12 ಮಂದಿ ಮಂದಿ ಹಾಜರ್: ಡಿ.26 ರಂದು ಒಟ್ಟು 28 ಸದಸ್ಯ ಬಲ ಹೊಂದಿ ರುವ ಜಿಪಂ ಸಾಮಾನ್ಯ ಸಭೆಗೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತುಪಡಿಸಿ ಕೇವಲ 12 ಮಂದಿ ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಆ ಪೈಕಿ ಚಿಂತಾಮಣಿಯ ಜಿಪಂ ಸದಸ್ಯರಾದ ಊಲವಾಡಿ ಜಿಪಂ ಸದಸ್ಯ ಶಿವಣ್ಣ, ಬಟ್ಲಹಳ್ಳಿ ಕ್ಷೇತ್ರದ ಸ್ಕೂಲ್ ಸುಬ್ಟಾರೆಡ್ಡಿ, ಅಂಬಾಜಿದುರ್ಗ ಕ್ಷೇತ್ರದ ಕಾಪಲ್ಲಿ ಶ್ರೀನಿವಾಸ್, ಭೂಮಿಶೆಟ್ಟಿಹಳ್ಳಿ ಕ್ಷೇತ್ರದ ಸುನಂದಮ್ಮ, ಕೈವಾರ ಕ್ಷೇತ್ರದ ಪವಿತ್ರ, ಕಾಂಗ್ರೆಸ್‌ನ ಬಾಗೇಪಲ್ಲಿಯ ಮಿಟ್ಟೇಮರಿ ಕ್ಷೇತ್ರದ ಚಿಕ್ಕನರಸಿಂಹಯ್ಯ, ಗೌರಿಬಿದನೂರಿನ ಡಿ.ಪಾಳ್ಯ ಕ್ಷೇತ್ರದ ಎ.ಅರುಂಧತಿ, ತೊಂಡೇಬಾವಿ ಕ್ಷೇತ್ರದ ಸರಸ್ವತಮ್ಮ, ವಿಧುರಾಶ್ವತ್ಥ ಕ್ಷೇತ್ರದ ಪ್ರಮೀಳ, ಗೌರಿಬಿದನೂರಿನ ಡಿ.ನರಸಿಂಹಮೂರ್ತಿ, ಗುಡಿ ಬಂಡೆಯ ಸೋಮೇನಹಳ್ಳಿ ಕ್ಷೇತ್ರದ ಗಾಯತ್ರಿ ನಂಜುಂಡಪ್ಪ ಹಾಗೂ ಚಿಕ್ಕಬಳ್ಳಾಪುರದ ತಿಪ್ಪೇನ ಹಳ್ಳಿ ಕ್ಷೇತ್ರದ ಜೆಡಿಎಸ್‌ನ ಕೆ.ಸಿ.ರಾಜಾಕಾಂತ್ ಸೇರಿ ಒಟ್ಟು 12 ಮಂದಿ ಮಾತ್ರ ಪಾಲ್ಗೊಂಡಿದ್ದರು.
● ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.