ಮೈತ್ರಿ ಸರ್ಕಾರದಲ್ಲಿ ರಾಜ್ಯ ಕೆಟ್ಟ ಪರಿಸ್ಥಿತಿ ಎದುರಿಸಿತು
Team Udayavani, Nov 27, 2019, 3:00 AM IST
ಚಿಕ್ಕಬಳ್ಳಾಪುರ ಉಪ ಚುನಾವಣೆ ಅಖಾಡಕ್ಕೆ ಮಂಗಳವಾರ ಘಟಾನುಘಟಿ ನಾಯಕರ ರಂಗ ಪ್ರವೇಶದಿಂದ ಪ್ರಚಾರದ ಭರಾಟೆ ಕಾವೇರಿತ್ತು. ರಾಜ್ಯದ ಹಾಲಿ, ಮಾಜಿ ಮುಖ್ಯಮಂತ್ರಿಗಳು ಒಂದೇ ದಿನ ಕ್ಷೇತ್ರಕ್ಕೆ ಮತ ಬೇಟೆಗೆ ಆಗಮಿಸಿದ್ದರಿಂದ ಪರಸ್ಪರ ವಾಕ್ಸಮರ ತಾರಕಕ್ಕೇರಿತ್ತು. ಸಿಎಂ ಬಿಎಸ್‌ವೈ, ಮಾಜಿ ಸಿಎಂ ಎಸ್‌ಎಂಕೆ ಮಂಚೇನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಭರ್ಜರಿ ರೋಡ್ ಶೋ ನಡೆಸಿದರೆ, ಮಾಜಿ ಸಿಎಂ ಎಚ್ಡಿಕೆ ಜೆಡಿಎಸ್ ಅಭ್ಯರ್ಥಿ ಎ.ರಾಧಾಕೃಷ್ಣ ಪರ ಮತಯಾಚಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಉಮಾಶ್ರೀ, ಕೃಷ್ಣಬೈರೇಗೌಡ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಕದನ ರಂಗೇರುವಂತೆ ಮಾಡಿದೆ.
ಚಿಕ್ಕಬಳ್ಳಾಪುರ: ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಾಚಮಾಗೋಚರವಾಗಿ ಬೈದಾಡಿಕೊಂಡು ರಾತ್ರೋ ರಾತ್ರಿ ಅಧಿಕಾರಕ್ಕಾಗಿ ಒಂದಾಗಿ ಮೈತ್ರಿ ಸರ್ಕಾರ ರಚಿಸಿದವು. ಅದರಲ್ಲಿ ಒಬ್ಬ ಮುಖ್ಯಮಂತ್ರಿ, ಒಬ್ಬ ಉಪ ಮುಖ್ಯಮಂತ್ರಿ ಹಾಗೂ ಇನ್ನೊಬ್ಬ ಸೂಪರ್ ಮುಖ್ಯಮಂತ್ರಿ ಆಗಿದ್ದತಂಹ ಮಂತ್ರಿ ಮಂಡಲಕ್ಕೆ ಸಾಕ್ಷಿಯಾಗಿ ರಾಜ್ಯ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಿದ್ದರಿಂದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಯಿತು. ಸೂಪರ್ ಸಿಎಂ ಯಾರೆಂದು ನಿಮ್ಮಗೆಲ್ಲಾ ಗೊತ್ತಿರುವ ಸಂಗತಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್‌ಡಿಕೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೆಸರು ಹೇಳದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಾಗ್ಧಾಳಿ ನಡೆಸಿದರು.
17 ಮಂದಿ ಬುದ್ಧಿವಂತ ಶಾಸಕರು: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ರಾಜೀನಾಮೆ ನೀಡಿದ ಆ 17 ಮಂದಿ ಶಾಸಕರಿಗೆ ನಾವು ಎಲ್ಲರೂ ಅಖಂಡ ನಮಸ್ಕಾರ ಮಾಡಬೇಕಾಗಿದೆ. ಅನರ್ಹ ಶಾಸಕರು ತ್ಯಾಗ ಮಾಡದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು. ರಾಜ್ಯದಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣಕ್ಕೆ 15 ತಿಂಗಳ ಹಿಂದೆ ರಾಜ್ಯದಲ್ಲಿ ರಚನೆಗೊಂಡಿದ್ದ ಮಂತ್ರಿ ಮಂಡಲವೇ ಕಾರಣ. ಮಂತ್ರಿ ಮಂಡಲ ಉಳಿಸಿಕೊಳ್ಳಲು ಅವರಿಗೆ ಸಮಯ ಸಿಕು¤. ಆದರೆ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಕೊಡಲಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಮಾಜಿ ಸಿಎಂ ಕೃಷ್ಣ ಕಿಡಿಕಾರಿದರು.
ಮುಂದಿನ ಹಾದಿ ಸುಗಮನವಾಗಿಲ್ಲ: ರಾಜ್ಯದಲ್ಲಿ ಮುಂದಿನ ಹಾದಿ ಸುಗಮವಾಗಿದೆ ಎಂದು ನಾನು ಹೇಳುವುದಿಲ್ಲ. ಬಹಳ ಎಚ್ಚರಿಕೆ, ಶಿಸ್ತಿನಿಂದ ಜವಾಬ್ದಾರಿಯುತ ಆಡಳಿತ ನೀಡಬೇಕಾಗಿದೆ. ಇದನ್ನು ನೀಡಬೇಕಾಗಿದ್ದರೆ ಸಿಎಂ ಬಿಎಸ್‌ವೈ ಹಾಗೂ ಅವರ ಮಂತ್ರಿ ಮಂಡಲದ ಎಲ್ಲಾ ಸದಸ್ಯರ ಕೈಬಲಪಡಿಸುವ ಕಾರ್ಯ ಮಾಡಬೇಕು. ಸುಧಾಕರ್ ಗೆಲುವಿನ ವಿಚಾರದಲ್ಲಿ ನನಗೆ ಯಾವುದೇ ಸಂಶಯವಿಲ್ಲ.
ಅಖಂಡ ಬಹುಮತದಿಂದ ಗೆದ್ದು ಬರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು. ಪ್ರಚಾರ ಸಭೆಯಲ್ಲಿ ಸಚಿವರಾದ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಪ್ರಾಣೇಶ್, ಬೆಳ್ಳಿ ಪ್ರಕಾಶ್, ಗೂಳಿಹಟ್ಟಿ ಶೇಖರ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜರಾಜೇಶ್ವರಿನಗರ ಅನರ್ಹ ಶಾಸಕ ಮುನಿರತ್ನ, ಜಿಲ್ಲಾ ಬಿಜೆಪಿ ಜಿಲ್ಲಾದ್ಯಕ್ಷ ಡಾ.ಜಿ.ವಿ.ಮಂಜುನಾಥ್, ಮಾಜಿ ಶಾಸಕರಾದ ಸುರೇಶ್‌ಗೌಡ, ಶಿವಾನಂದ, ಜ್ಯೋತಿ ರೆಡ್ಡಿ, ರವಿನಾರಾಯಣರೆಡ್ಡಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ನಿಮಗೆ ಏನು ಬೇಕೋ ಕೇಳಿ ಸುಧಾಕರ್‌ರನ್ನು ಗೆಲ್ಲಿಸಿ – ಸಿಎಂ: ನಿಮಗೆ ಏನು ಬೇಕೋ ಕೇಳಿ ಎಲ್ಲವನ್ನು ಕೊಡಲು ಸಿದ್ಧನಿದ್ದೇನೆ. ಈಗಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇನೆ. ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೊಸ ತಾಲೂಕಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತೇನೆ. ಜಿಲ್ಲೆಗೆ ನೀರಾವರಿ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಮಂಚೇನಹಳ್ಳಿಯಲ್ಲಿ ಸುಧಾಕರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಜಿಲ್ಲೆಗೆ ಬಂದಿದೆ. ಜತೆಗೆ 3-4 ಸಾವಿರ ಮಂದಿಗೆ ನಿವೇಶನ ಲಭಿಸಿದೆ. ಇದೆಲ್ಲಾವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತ್ಯೇಕ ತಾಲೂಕು ಮಾಡಿಸಿದ್ದಕ್ಕೆ ಒಂದು ಮತ ಕೂಡ ಆಚೀಚೆ ಹೋಗದಂತೆ ಎಲ್ಲಾ ವರ್ಗದವರು ಒಟ್ಟಾಗಿ ಸುಧಾಕರ್‌ಗೆ ಮತ ಹಾಕಿ ಗೆಲ್ಲಿಸಬೇಕೆಂದು ಯಡಿಯೂರಪ್ಪ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿ, ನೀರಾವರಿ ಸೌಲಭ್ಯ ಹೆಚ್ಚಿಸಿ, ಕೆರೆ ಕಟ್ಟೆ ತುಂಬಿಸಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ಕೆಲಸ ಮಾಡಿಸುತ್ತೇನೆ. ಉಪ ಚುನಾವಣೆಯಲ್ಲಿ ಬಿಜೆಪಿ 15ಕ್ಕೆ 15 ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ಈ ಉಪ ಚುನಾವಣೆ ಬರಲಿಕ್ಕೆ ಡಾ.ಕೆ.ಸುಧಾಕರ್ ಮಾಡಿದ ತ್ಯಾಗದ ಫಲವಾಗಿ ಇಂದು ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ನೋಡುವ ಸೌಭಾಗ್ಯ ಕಾಣುತ್ತಿದ್ದೇವೆ. ರಾಜ್ಯದ ರಕ್ಷಣೆಗಾಗಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ನಾವು ಡಾ.ಕೆ.ಸುಧಾಕರ್‌ರ ರಾಜೀನಾಮೆಗೆ ಪ್ರೋತ್ಸಾಹ ಮಾಡಿದವರಲ್ಲಿ ನಾನು ಒಬ್ಬ. ಇದನ್ನು ಸಂತೋಷದಿಂದ ನಿಮ್ಮ ಮುಂದೆ ಒಪ್ಪಿಕೊಳ್ಳುತ್ತೇನೆ.
-ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.