ವೃದ್ಧೆಗೆ ಪ್ಲಾಸ್ಟಿಕ್ ನೋಟು ನೀಡಿ ಟಗರು ಖರೀದಿಸಿದ ಕಳ್ಳರು
Team Udayavani, Feb 7, 2019, 10:51 AM IST
ಚಿಕ್ಕಬಳ್ಳಾಪುರ: ಜೀವನಧಾರಕ್ಕೆ ಕುರಿ ಮೇಯಿ ಸುತ್ತಿದ್ದ ವೃದ್ಧೆಯ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ವೃದ್ಧೆಗೆ ಎರಡು ಸಾವಿರ ರೂ.ಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಕೊಟ್ಟು ಬೆಲೆ ಬಾಳುವ ಟಗರು ಪಡೆದು ವಂಚಿಸಿರುವ ಘಟನೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯನಹಳ್ಳಿಯಲ್ಲಿ ನಡೆದಿದೆ.
ಆಗಿದ್ದೇನು?: ಗ್ರಾಮದ ಕದಿರಮ್ಮ ಹೊರ ವಲಯದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿದ್ದ ಇಬ್ಬರು ಯುವಕರು ಬೈಕ್‌ನಲ್ಲಿ ಸ್ಥಳಕ್ಕೆ ಬಂದು ಟಗರನ್ನು ಖರೀದಿಗೆ ಕೇಳಿದ್ದಾರೆ. ಈ ವೇಳೆ ಕದಿರಮ್ಮ ಟಗರಿನ ಬೆಲೆ 3 ಸಾವಿರ ರೂ. ಎಂದು ಹೇಳಿದ್ದಾರೆ. ಆದರೆ ಖದೀಮರು ಟಗರಿಗೆ ಆರು ಸಾವಿರ ರೂ. ಬೆಲೆ ನೀಡುವುದಾಗಿ ಹೇಳಿ ಆಕೆಗೆ ಪ್ಲಾಸ್ಟಿಕ್ ಮಾದರಿ ಎರಡು ಸಾವಿರ ರೂ. ನೋಟುಗಳನ್ನು ಹೋಲುವ 5 ನೋಟುಗಳನ್ನು ನೀಡಿ ಟಗರು ಪಡೆದು ಕ್ಷರ್ಣಾದಲ್ಲಿ ಪರಾರಿ ಯಾಗಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?: ಕುರಿ ಮಾರಾಟದ ವಿಚಾರ ಮನೆಯಲ್ಲಿ ಮಕ್ಕಳಿಗೆ ಗೊತ್ತಾದರೆ ಬೈಯುತ್ತಾರೆಂದು ಹೇಳಿ ಕದಿರಮ್ಮ ಖದೀಮರು ಕೊಟ್ಟಿದ್ದ ನಕಲಿ ನೋಟಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ. ಬುಧವಾರ ರಾತ್ರಿ ತನ್ನ ಅಣ್ಣನಿಗೆ ಹುಷಾರಿಲ್ಲದ್ದನ್ನು ತಿಳಿದ ಕದಿರಮ್ಮ ಆಸ್ಪತ್ರೆಗೆ ಹೋಗಲು ಹಣ ಕೊಡೋಣ ಎಂದು ಪಕ್ಕದ ಮನೆಯವರ ಬಳಿ ಎರಡು ಸಾವಿರ ರೂ.ಗೆ ಚಿಲ್ಲರೆ ಕೇಳಿದ್ದಾರೆ. ಈ ವೇಳೆ ಅದು ನಕಲಿ ನೋಟು ಎಂಬುದು ಗೊತ್ತಾಗಿದೆ.
ಕಣ್ಣೀರಿಟ್ಟ ಕದಿರಮ್ಮ: ಬಡತನದಲ್ಲಿ ಬೇಯುತ್ತಿರುವ ಕದಿರಮ್ಮಗೆ ಅಪರಿಚಿತ ಕಳ್ಳರು ಮಾಡಿರುವ ಮೋಸಕ್ಕೆ ಕಣ್ಣೀರು ಹಾಕಿದ್ದಾಳೆ. ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಳ್ಳರು ಗ್ರಾಮೀಣ ಪ್ರದೇಶದಲ್ಲಿ ಒಂಟಿಯಾಗಿ ಕುರಿ, ಮೇಕೆಗಳನ್ನು ಮೇಯಿಸುವ ಅಮಾಯಕರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.