ಅಡ್ಡಗಟ್ಟಿ ಚಿನ್ನಾಭರಣ ಕಸಿದು ಕಳ್ಳರು ಪರಾರಿ
Team Udayavani, Feb 21, 2022, 2:44 PM IST
ಬಾಗೇಪಲ್ಲಿ: ತಾಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ವೀಕ್ಷಣೆಗೆ ಆಗಮಿಸಿರುವಪ್ರವಾಸಿಗರ ದ್ವಿಚಕ್ರ ವಾಹನ ಅಡ್ಡಗಟ್ಟಿ ಚಿನ್ನಾಭರಣ, ನಗದು, ಮೊಬೈಲ್ ಕಸಿದುಕೊಂಡ ಕಳ್ಳರು ಪ್ರವಾಸಿಗರ ದ್ವಿಚಕ್ರ ವಾಹನ ಸಮೇತ ಪರಾರಿಯಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹರ್ಷ ಮತ್ತುದಂಪತಿ ಗುಡಿಬಂಡೆ ತಾಲೂಕಿನಆದಿನಾರಾಯಣ ಸ್ವಾಮಿ ಜಾತ್ರೆಯ ರಥೋತ್ಸವವನ್ನು ವೀಕ್ಷಿಸಿ ನಂತರ ಬಾಗೇಪಲ್ಲಿತಾಲೂಕಿನ ಪರಗೋಡು ಗ್ರಾಮದ ಬಳಿ ಇರುವ ಚಿತ್ರಾವತಿ ಅಣೆಕಟ್ಟು ವೀಕ್ಷಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸ್ಸು ದೊಡ್ಡಬಳ್ಳಾಪುರ ಕಡೆ ಪ್ರಯಾಣ ಬೆಳಸಿದ್ದಾರೆ. ಚಿತ್ರಾವತಿ ಅಣೆಕಟ್ಟು ಬಳಿಯ ವಸತಿ ಗೃಹಗಳ ಮುಂಭಾಗದಲ್ಲಿ 18 ರಿಂದ 20 ವರ್ಷ ವಯಸ್ಸಿನ ಮೂವರು ಕಳ್ಳರು ಹರ್ಷ ಮತ್ತು ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಏಕಾಎಕಿ ಅಡ್ಡಗಟ್ಟಿ ಚಾಕು ಇತರೆ ಮಾರಕಾಸ್ತ್ರ ತೋರಿಸಿ ದಂಪತಿಗಳನ್ನು ಬೆದರಿಸಿ ನಗದು, ಚಿನ್ನದ ಮಾಂಗಲ್ಯ ಸರ, ಮೊಬೈಲ್‌ಗಳನ್ನು ನೀಡುವಂತೆ ಪ್ರಾಣ ಬೆದರಿಕೆ ಹಾಕಿ ಎಲ್ಲವನ್ನು ಕಸಿದು ಕೊಂಡಿದ್ದಾರೆ. ಅಲ್ಲದೇ ದಂಪತಿಗಳು ಬಂದಿದ್ದ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳೀಯರಿಗೆ ಮಾಹಿತಿ: ದೊಡ್ಡಬಳ್ಳಾಪುರದ ಹರ್ಷ ಮತ್ತು ದಂಪತಿಗಳಿಗೆ ದಿಕ್ಕು ತೋಚದಂತಾಗಿ ಹತ್ತಿರದಲ್ಲಿರುವ ಚೆಂಡೂರು ಕ್ರಾಸ್‌ಗೆ ಕಾಲ್ನಡಿಗೆ ಮೂಲಕ ಹೋಗಿ ನಡೆದಂತಹ ಘಟನೆ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಹೈವೇ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅಗಮಿಸಿದ್ದ ಬಾಗೇಪಲ್ಲಿ ಪೊಲೀಸರು ಪರಿಶೀಲಿಸಿ ದಂಪತಿಗಳಿಂದ ಮಾಹಿತಿ ಪಡೆದುಕೊಂಡು ದೂರು ಸ್ವೀಕರಿಸಿದ್ದಾರೆ.
ಆತಂಕ: ಭಾನುವಾರ ಮಧ್ಯಾಹ್ನ ಸಮಯದಲ್ಲಿ ನಡೆದಿರುವ ಕಳ್ಳತನದ ಘಟನೆಯಿಂದ ಪ್ರವಾಸಿಗರನ್ನು ಒಮ್ಮೆಲೆ ಬೆಚ್ಚಿ ಬೀಳುಸುವಂತೆ ಮಾಡಿದ್ದು, ಚಿತ್ರಾವತಿ ಅಣೆಕಟ್ಟು ಬಳಿ ಇಂತಹ ಘಟನೆ ನಡೆದಿರುವುದು ಇದೆ ಮೊದಲ ಬಾರಿಗೆ ಎಂದು ಅತಂಕ ವ್ಯಕ್ತಪಡಿಸಿದ್ದಾರೆ.
ಚಿತ್ರಾವತಿ ಅಣೆಕಟ್ಟು ಬಳಿ ನಿರ್ವಹಣೆ ಇಲ್ಲದೆ ಪಾಲು ಬಿದ್ದಿರುವ ಚಿತ್ರಾವತಿ ವಸತಿ ಗೃಹದ ಅವರಣದಲ್ಲೆ ಬಾನುವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಗಳ ತಂಡವೊಂದು ಅಡುಗೆಸಿದ್ದಪಡಿಸಿಕೊಂಡು ಮಧ್ಯಪಾನ ಮಾಡಿರುವಶಂಕೆ ವ್ಯಕ್ತವಾಗಿದ್ದು, ಚಿತ್ರಾವತಿ ಅಣೆಕಟ್ಟು ಕೋಡಿ ಹರಿದ ಹಿನ್ನಲೆಯಲ್ಲಿ ಪ್ರವಾಸಿಗರುಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುತ್ತಿದ್ದುಪೊಲೀಸ್ ಚೆಕ್ ಪೋಸ್ಟ್ ಸ್ಥಾಪನೆ ಮಾಡಬೇಕಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.