ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟವರಿಗೆ ಉಳಿಗಾಲವಿಲ್ಲ
Team Udayavani, Jun 27, 2020, 6:22 AM IST
ಗೌರಿಬಿದನೂರು: ಸ್ವಾರ್ಥಕ್ಕಾಗಿ ತಾಲೂಕಿನ ಕೆಲ ಮುಖಂಡರು ಕಾಂಗ್ರೆಸ್ ಬಿಟ್ಟು ಹೊರ ನಡೆದಿದ್ದಾರೆ. ಇವರು ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದು ಅಧಿಕಾರ ಅನುಭವಿಸಿದವರು. ಸ್ವಾಭಿಮಾನವಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ, ಆಗ ಇವರ ನಿಜ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್.ಎಸ್.ಭಾರ್ಗವರೆಡ್ಡಿ ಹೇಳಿದರು.
ತಾಲೂಕಿನ ಹೊಸೂರಿನ ಬಲಿಜ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರ ಸಹಾಯದಿಂದ ಎಲ್ಲ ಅಧಿಕಾರ, ಸವಲತ್ತು ಪಡೆದು ಈಗ ಅವರನ್ನು ಸ್ವಜನ ಪಕ್ಷಪಾತಿ ಎಂದು ಆರೋಪ ಮಾಡುವುದರಲ್ಲಿ ಹುರುಳಿಲ್ಲ. ಶಾಸಕರು ಎಲ್ಲ ವರ್ಗದ ಮುಖಂಡರ ಅರ್ಹತೆಗೆ ಅನುಗುಣವಾಗಿ ಅಧಿಕಾರ ನೀಡಿದ್ದಾರೆ.
ಹಣಕ್ಕಾಗಿ ಉದ್ಯಮಿ ಹಿಂದೆ ಹೋಗಿ ಪಕ್ಷ ಮತ್ತು ಶಾಸಕರ ವಿರುದ್ಧ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ ಎಂದರು.ತಾಪಂ ಅಧ್ಯಕ್ಷ ಆರ್. ಲೋಕೇಶ್ ಮಾತನಾಡಿ, ಈ ಭಾಗದ ಜಿಪಂ ಸದಸ್ಯ ಎಚ್ .ವಿ.ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಜಿಪಂ ಅಧ್ಯಕ್ಷರಾಗಿ ಕ್ಷುಲ್ಲಕ ಕಾರಣಕ್ಕೆ ಪಕ್ಷ ತೊರೆದಿದ್ದಾರೆ ಎಂದು ದೂರಿದರು. ಹಿರಿಯ ಕಾಂಗ್ರೆಸ್ ಮುಖಂಡ ಬೊಮ್ಮಣ್ಣ ಮಾತನಾಡಿ, ಹೊಸೂರಿನ ಇತಿಹಾಸ ನೋಡಿದರೆ ದಶಕಗಳ ಹಿಂದೆ ಎಚ್.ವಿ.ಮಂಜುನಾಥ್ ಸೋತು ರಾಜಕೀಯ ನೇಪಥ್ಯಕ್ಕೆ ಸರಿದಿದ್ದರು.
ಶಾಸಕ ಶಿವಶಂಕರರೆಡ್ಡಿ ಅವರ ಸಹಕಾರದಿಂದ ಜಿಪಂ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ ಕೆಳಗಿಳಿದ ಬಳಿಕ ಅವರ ವಿರುದ್ಧ ಮಾತನಾಡುವುದು ಸರಿಯೇ ? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ್, ತಾಪಂ ಸದಸ್ಯ ನಾಗೇಶ್, ಮುಖಂಡ ಅಶ್ವತ್ಥಪ್ಪ, ಕೃಷ್ಣ, ಶ್ರೀಕಾಂತ್, ಖಾದರ್ ಸುಬಾನ್ ಖಾನ್, ವೆಂಕಟರಮಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.