ಪ್ರವಾಸಿ ತಾಣ ಅಭಿವೃದ್ಧಿಗೆ ಆದ್ಯತೆ ನೀಡ್ತಾರಾ ಸಿಪಿವೈ
Team Udayavani, Jul 23, 2021, 6:00 PM IST
ಚಿಕ್ಕಬಳ್ಳಾಪುರ: ಜಿಲ್ಲೆಯು ರೇಷ್ಮೆ, ಹೈನುಗಾರಿಕೆ,ದ್ರಾಕ್ಷಿ, ತರಕಾರಿ ಉತ್ಪಾದನೆಯಲ್ಲಿ ದೇಶದಲ್ಲೇ ಖ್ಯಾತಿ ಪಡೆದಿರುವಂತೆ, ಕೋಟೆ ಕೊತ ¤ಲುಗಳು, ಐತಿಹಾಸಿಕ ದೇಗುಲಗಳು, ¸ಬೆಟ್ಟ ಗುಡ್ಡಗಳನ್ನೂ ಹೊಂದಿದೆ.ಆದರೆ, ಅವುಗಳ ಅಭಿವೃದ್ದಿ ಸರ್ಕಾರ ಆದ್ಯತೆ ನೀಡಬೇಕಿದೆ.
ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಪ್ರಾಕೃತಿಕ ಸೌಂದರ್ಯ ತನ್ನ ಮಡಿಲಲ್ಲಿಟ್ಟು ಕೊಂಡಿರುವ ನಂದಿಗಿರಿ ಧಾಮದ ಅಭಿವೃದ್ಧಿಗೆ ಈಗಾಗಲೇ ಉಸ್ತುವಾರಿ ಸಚಿವಡಾ.ಕೆ.ಸುಧಾಕರ್ ಮುಂದಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ,ಸರ್ಕಾರದಿಂದ ಅನುದಾನವನ್ನೂ ಬಿಡುಗಡೆ ಮಾಡಿಸಿರುವುದಾಗಿ ತಿಳಿಸಿದ್ದಾರೆ.
ರೋಪ್‌ವೇ ಕಾಮಗಾರಿ: ಈ ನಂದಿಗಿರಿಧಾಮಕ್ಕೆಕೇವಲ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯ,ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಗಳಲ್ಲಿ ಪ್ರವಾಸಿಗರುಬರುತ್ತಾರೆ. ಈಗಾಗಲೇ ನಂದಿಗಿರಿಧಾಮದಲ್ಲಿಬರುವ ಪ್ರವಾಸಿಗರನ್ನು ಆಕರ್ಷಿಸಲು ಕೆಲವುಯೋಜನೆ ಅನುಷ್ಠಾನಗೊಳಿಸುವ ಮೂಲಕ ಚಾಲನೆನೀಡಲಾಗಿದೆ. ರೋಪ್‌ವೇ ಕಾಮಗಾರಿಪೂರ್ಣಗೊಂಡರೆ ನಂದಿಗಿರಿಧಾಮಕ್ಕೆ ಮತ್ತಷ್ಟುಮೆರಗು ಬರಲಿದೆ.
ವೆಂಕಟರಮಣಸ್ವಾಮಿ ಬೆಟ್ಟ: ದಕ್ಷಿಣ ಕಾಶಿ ಎಂದೇಖ್ಯಾತಿ ಹೊಂದಿರುವ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇಗುಲಗುಡ್ಡ ಬೆಟ್ಟ,ಕೆರೆ, ಅರಣ್ಯ ಪ್ರದೇಶ ಹೊಂದಿದೆ. ಇದನ್ನುಅಭಿವೃದ್ಧಿಗೊಳಿಸಿದರೆ, ಅದು ಪವಿತ್ರ ಯಾತ್ರಾ ಸ್ಥಳದಜೊತೆಗೆ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ.
ಇಲ್ಲಿಯೂ ರಾಜ್ಯ,ಹೊರ ರಾಜ್ಯಗಳಿಂದ ಸಹಸ್ರಾರುಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಈ ಕ್ಷೇತ್ರವನ್ನುಅಭಿವೃದ್ಧಿಗೊಳಿಸಲು ಪ್ರವಾಸೋದ್ಯಮ ಸಚಿವರುಆಸಕ್ತಿ ವಹಿಸಬೇಕಾಗಿದೆ.ಥೀಮ್‌ಪಾರ್ಕ್:ಜಿಲ್ಲೆಯಲ್ಲಿ ಈಗಾಗಲೇಕಂದವಾರಕೆರೆ ಸಮೀಪಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿಎಕೊಥೀಮ್ ಪಾರ್ಕ್ ಆಗಿ ಅಭಿವೃದ್ಧಿಗೊಳಿಸಲುಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಅದೇ ಮಾದರಿಯಲ್ಲಿಮಂಚೇನಹಳ್ಳಿ ಬಳಿ ಇರುವ ದಂಡಿಗಾನಹಳ್ಳಿಜಲಾಶಯ, ಚಿಂತಾಮಣಿ ತಾಲೂಕಿನ ಐತಿಹಾಸಿಕಕೈವಾರ, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕಿನಕೋಟೆ ಕೊತ್ತಲಗಳು, ಬೆಟ್ಟ-ಗುಡ್ಡ, ಧಾರ್ಮಿಕಸ್ಥಳಗಳನ್ನು ಅಭಿವೃದ್ಧಿಗೊಳಿಸಿದರೆ ಭಕ್ತರ ದರ್ಶನಕ್ಕೆಅನುಕೂಲ ಆಗುತ್ತದೆ. ಜೊತೆಗೆ ಪ್ರವಾಸಿ ತಾಣಗಳಾಗಿಅಭಿವೃದ್ಧಿಗೊಳಿಸಲು ಸಹ ಸಹಕಾರಿಯಾಗಲಿದೆ.ಎರಡು ದಿನ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸಕೈಗೊಂಡಿರುವ ರಾಜ್ಯ ಪ್ರವಾಸೋದ್ಯಮ ಸಚಿವಸಿ.ಪಿ.ಯೋಗೇಶ್ವರ್, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆಪೂರಕ ಯೋಜನೆ ಜಾರಿಗೊಳಿಸುವ ಬಗ್ಗೆ ಜಿಲ್ಲೆಯಜನರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಕರ್ನಾಟಕದ ಊಟಿ ಎಂದು ಖ್ಯಾತಿ ಹೊಂದಿರುವಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿರೋಪ್‌ವೇ ನಿರ್ಮಿಸುವ ಸಲುವಾಗಿ ಸಚಿವರು ಸ್ಥಳಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಹಲವುವರ್ಷಗಳ ಕನಸು ನನಸಾಗುವ ಜೊತೆಗೆ ಹೊಸಯೋಜನೆಗಳ ನಿರೀಕ್ಷೆಗೆ ಚಾಲನೆ ದೊರೆಯುವುದೇಎಂಬ ಆಶಾಭಾವನೆ ಜಿಲ್ಲೆಯ ಜನರಲ್ಲಿ ಇದೆ.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.