ಮಾಸಾಶನಕ್ಕೆ ಪರದಾಟ
Team Udayavani, Apr 19, 2020, 2:37 PM IST
ಶಿಡ್ಲಘಟ್ಟ: ಕೋವಿಡ್ 19 ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್ ಆದೇಶ ಹೊರಡಿಸಿದ್ದರಿಂದ ಕೇವಲ ಕೂಲಿಕಾರ್ಮಿಕರಲ್ಲದೇ, ಮಾಸಿಕ ಮಾಸಾಶನ ಪಡೆದುಕೊಂಡು ಜೀವನ ನಡೆಸುತ್ತಿರುವ ವಯೋವೃದ್ಧರು ಪರದಾಡುವಂತಾಗಿದೆ.
ವಯೋವೃದ್ಧರ ಪರಿಸ್ಥಿತಿ ಅರಿತ ಸರ್ಕಾರ ಮುಂಗಡವಾಗಿ ಮೂರು ತಿಂಗಳ ಮಾಸಾಶನ ಜಾರಿಗೊಳಿಸಿದೆಯೆಂದು ಮಾಹಿತಿ ಅರಿತ ವಯೋವೃದ್ಧರು ಅಂಚೆ ಕಚೇರಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್ ಆದ ಬಳಿಕ ನಗರ ಪೊಲೀಸರು ಅಂಚೆ ಕಚೇರಿಗೆ ತೆರಳಿ ಗೊಂದಲಕ್ಕೆ ಅವಕಾಶ ನೀಡದಂತೆ ಬಂದೋಬಸ್ತ್ ಮಾಡಿ ಸಾಲಾಗಿ ನಿಲ್ಲಿಸಿ ಮಾಸಾಶನ ವಿತರಣೆಗೆ ಅನುಕೂಲ ಮಾಡಿಕೊಟ್ಟರು.
ಮುಂದುವರೆದ ಸಮಸ್ಯೆ: ಸರ್ಕಾರ ಮೂರು ತಿಂಗಳ ಮಾಸಾಶನ ಜಾರಿಗೊಳಿಸಿ ಅನುಕೂಲ ಕಲ್ಪಿಸಿದೆ. ಆದರೆ ತಾಲೂಕು ಕಚೇರಿ ಮತ್ತು ಖಜಾನೆ ಇಲಾಖೆಯಲ್ಲಿ ಖಜಾನೆ-2 ಎಂಬ ಸಮಸ್ಯೆ ಇತ್ಯರ್ಥಆಗದಿರುವುದರಿಂದ ಪಿಂಚಣಿ ಪಡೆಯಲು ಪ್ರತಿ ತಿಂಗಳು ಪರದಾಡುವಂತಾಗಿದೆ ಎಂದು ಹಲವರು ಅಳಲು ತೋಡಿಕೊಂಡರು. ಈಗಾಗಲೇ ಬ್ಯಾಂಕ್‌ನ ಉಳಿತಾಯ ಖಾತೆ ನೀಡಿ ಆಧಾರ್ ಲಿಂಕ್ ಮಾಡಿದರೂ ಸಹ ಬಹುತೇಕ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಅಂಚೆ ಕಚೇರಿಗೆ ಬಂದು ಮಾಸಾಶನ ಪಡೆಯುವ ಪರಿಸ್ಥಿತಿಗೆ ಮುಕ್ತಿ ಸಿಕ್ಕಿಲ್ಲ. ಜಿಲ್ಲಾಡಳಿತ ಅಥವಾ ಸರ್ಕಾರ ಪಿಂಚಣಿದಾರರಿಗೆ ಸಕಾಲದಲ್ಲಿ ಮಾಸಾಶನ ನೀಡಲು ಕ್ರಮ ಕೈಗೊಳ್ಳಬೇಕೆಂದುನಾಗರಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.