ಅಭದ್ರತೆಯಲ್ಲಿ ತೊಟ್ಲಗಾನಹಳ್ಳಿ ಶಾಲಾ ಮಕ್ಕಳು
Team Udayavani, Dec 8, 2021, 2:50 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಮಕ್ಕಳಿಗೆ ಸರಿಯಾದ ಆಟ ಪಾಠ ಇಲ್ಲದೆ, ಕಾಲಹರಣ ಮಾಡುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿ ದ್ದರೂ ತೊಟ್ಲಗಾನಹಳ್ಳಿಯಲ್ಲಿ ಮಾತ್ರ ಧಿಕ್ಕರಿಸಲಾಗಿದೆ.
ಕೆಲ ಮಕ್ಕಳು ಮಾಸ್ಕ್ ಧರಿಸುತ್ತಾರೆ. ಅವರ ಆರೋಗ್ಯ ರಕ್ಷಣೆ ಜೊತೆಗೆ ಪಾಠ ಪ್ರವಚನ ಮಾಡಬೇಕಾದ ಶಿಕ್ಷಕರು ಶಾಲೆಗೆ ಗೈರು ಹಾಜರಾಗಿದ್ದು, ಮಕ್ಕಳು ಅಭದ್ರತೆಯಲ್ಲಿ ಪಾಠ ಕೇಳಬೇಕಾಗಿದೆ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಮೋಟರ್ ಪಂಪ್ ಸುರಕ್ಷಿತವಾಗಿಟ್ಟಿಲ್ಲ: ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಶಾಲಾ ಆವರಣದಲ್ಲಿ ಕೊಳವೆಬಾವಿ ಕೊರೆಯಿಸಿರುವ ಗ್ರಾಪಂ ಅಧಿಕಾರಿಗಳು, ಮೋಟರ್ ಪಂಪ್ ಸುರಕ್ಷಿತವಾಗಿ ಇಟ್ಟಿಲ್ಲ. ಬಿಸಿಯೂಟ ತಯಾರು ಮಾಡುವ ಕೊಠಡಿ ಬಾಗಿನಲ್ಲೇ ಬೇಕಾಬಿಟ್ಟಿಯಾಗಿ ಇಡಲಾಗಿದೆ.
ವಿದ್ಯಾರ್ಥಿಗಳು ವಿದ್ಯುತ್ ತಂತಿ ನೋಡಿಕೊಂಡು ಮಧ್ಯಾಹ್ನದ ಬಿಸಿಯೂಟ ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಅಧಿ ಕಾರಿಗಳದಿವ್ಯನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭದ್ರತಾ ದೃಷ್ಟಿಯಿಂದ ಕೂಡಲೇ ಮೋಟಾರ್ ಪಂಪ್ ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ವಯಂ ಘೋಷಿತ ರಜೆ: ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಅಭದ್ರತೆಯಲ್ಲಿ ಪಾಠ ಪ್ರವಚನಕೇಳುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದೆಡೆಯಾದರೆ, ಶಾಲೆಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಯಂ ಘೋಷಿತ ರಜೆ ನೀಡಲಾಗಿದೆ. ತೊಟ್ಲಗಾನಹಳ್ಳಿ ಗ್ರಾಮದವರೇ ಅಂಗನವಾಡಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೋವಿಡ್ ಸೋಂಕಿನ ಪ್ರಭಾವ ಹೆಚ್ಚಾಗುವ ಭೀತಿಯಿಂದ ಮಕ್ಕಳಿಗೆ ಕಳೆದ ಮೂರು ದಿನಗಳಿಂದ ಸ್ವಯಂ ಘೋಷಿತ ರಜೆ ನೀಡಲಾಗಿದೆ.
ಮಕ್ಕಳ ಬಿಟ್ಟು ಹೋದ ಶಿಕ್ಷಕ: ಸರ್ಕಾರಿ ಶಾಲೆಯ ಶಿಕ್ಷಕ ಶಾಲಾ ವೇಳೆಯಲ್ಲಿ ಮಕ್ಕಳನ್ನು ಶಾಲೆಯಲ್ಲೇ ಬಿಟ್ಟು ಹೊರ ಹೋಗಿದ್ದರೆ. ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪರಿಶೀಲಿಸುವ ನೆಪದಲ್ಲಿಯಾದರೂ ಅಧಿ ಕಾರಿಗಳು ಈ ಶಾಲೆ, ಅಂಗನವಾಡಿಗೆ ಭೇಟಿ ನೀಡಬೇಕಿದೆ. ಅನ ಧೀಕೃತವಾಗಿ ಗೈರು ಹಾಜರಾಗಿದ್ದ ಶಿಕ್ಷಕ, ಕಾರ್ಯಕರ್ತೆ ಮೇಲೆ ಕ್ರಮ ಜರುಗಿಸುವರು ಯಾರು ಎಂಬ ಪ್ರಶ್ನೆಗೆ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
ತಾಲೂಕಿನ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂ ಘೋಷಿತ ರಜೆ ನೀಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ, ಅಂಗನವಾಡಿ ಕಾರ್ಯಕರ್ತೆ ಗೈರಾಗಿರುವ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ. ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಎಲ್ಲಿಯೂ ರಜೆ ನೀಡಿಲ್ಲ, ಈ ನಿಟ್ಟಿನಲ್ಲಿ ಹಿರಿಯ ಅಧಿ ಕಾರಿಗಳಿಂದ ಸ್ಪಷ್ಟ ಆದೇಶವೂ ಬಂದಿಲ್ಲ. – ಮಹೇಶ್, ಪ್ರಭಾರ ಸಿಡಿಪಿಒ, ಶಿಡ್ಲಘಟ್ಟ
ಸರ್ಕಾರಿ ಶಾಲಾ ಆವರಣದಲ್ಲಿ ಕೊಳವೆಬಾವಿಗೆ ಅಳವಡಿಸಿರುವ ಮೋಟಾರ್ ಪಂಪ್ ವ್ಯವಸ್ಥಿತವಾಗಿಡಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಭದ್ರತೆ ಕಡೆಗಣಿಸಿರುವ ಪಿಡಿಒಗೆ ನೋಟಿಸ್ ನೀಡಿ ಮುಂದಿನ ಕ್ರಮ ಜರುಗಿಸಲಾಗುವುದು. –ಚಂದ್ರಕಾಂತ್, ತಾಪಂ ಇಒ, ಶಿಡ್ಲಘಟ್ಟ
ಶಿಡ್ಲಘಟ್ಟ ತಾಲೂಕಿನ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಕರ್ತವ್ಯದ ವೇಳೆಯಲ್ಲೇ ಶಿಕ್ಷಕರೊಬ್ಬರು ಗೈರು ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿದ್ಯಾರ್ಥಿಗಳಭದ್ರತಾ ದೃಷ್ಟಿಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು. –ಆಂಜನೇಯ, ಬಿಇಒ, ಶಿಡ್ಲಘಟ್ಟ
– ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.