ಸೂರು ಕಳೆದುಕೊಂಡು 6 ವರ್ಷ ಕಳೆದರೂ, ಸೂರು ಇಲ್ಲಾ ಬಿಡಿಗಾಸು ಇಲ್ಲ
Team Udayavani, Aug 13, 2021, 1:28 PM IST
ಗುಡಿಬಂಡೆ : ಬಾಗೇಪಲ್ಲಿ-ಹಲಗೂರು ರಾಜ್ಯ ಹೆದ್ದಾರಿ 94ರ ಮುಖ್ಯ ರಸ್ತೆಯ ಅಗಲೀಕರಣ ಮಾಡಿ 6 ವರ್ಷಗಳು ಕಳೆದರೂ ಮನೆ ಮಠ ಕಳೆದುಕೊಂಡವರಿಗೆ ಯಾವುದೇ ಪರಿಹಾರ ನೀಡದೇ ಸರ್ಕಾರ ನಿರ್ಲಕ್ಷ ತೋರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗುಡಿಬಂಡೆ ತಾಲೂಕು ತೀರಾ ಹಿಂದುಳಿದಿದ್ದು, ಯಾವುದೇ ಅದಾಯ ಮೂಲ ವಿಲ್ಲದೆ ಕೇವಲ ಕೃಷಿಯನ್ನೇ ಅವಲಂಭಿಸಿದ್ದು, ಇಂದಿಗೂ ಇಲ್ಲಿನ ಜನರು ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟ ಹೀಗೆ ಹತ್ತುಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ರಸ್ತೆ ಅಗಲೀಕರಣದ ವೇಳೆ ಸೂರು ಮತ್ತು ನಿವೇಶನ ಕಳೆದುಕೊಂಡವರಿಗೆ ನಿವೇಶ ನೀಡುತ್ತೇವೆ ಎಂದು ಹೇಳುತ್ತಿದ್ದ ಅಧಿಕಾರಿಗಳು, ಅವರು ಬದಲಾಗುತ್ತಿದ್ದಾರೆಯೇ ವಿನಃ ಸಂತ್ರಸ್ತರಿಗೆ ಮಾತ್ರ ನಯಾ ಪೈಸಾ ಬಿಡಿಗಾಸು ಇಲ್ಲ.
ಇದನ್ನೂ ಓದಿ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ; ಸರ್ಕಾರದ ಮೌನ ಸರಿಯಲ್ಲ
ವಿಧಾನಸಭೆಯಲ್ಲೂ ಪ್ರಸ್ತಾಪ : ರಸ್ತೆ ಅಗಲೀಕರಣದ ವೇಳೆ ಸೂರು ಮತ್ತು ನಿವೇಶನ ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ನೀಡಲು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಿಧಾನ ಸಭೆಯಲ್ಲೂ ಪ್ರಸ್ತಾಪ ಮಾಡಿ, ಸರ್ಕಾರದ ಗಮನಕ್ಕೆ ತಂದು, ಜರೂರಾಗಿ ಸಂತ್ರಸ್ತರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು, ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ.
6 ವರ್ಷಗಳಾದರೂ ಪರಿಹಾರವಿಲ್ಲ : 2015 ರಲ್ಲಿ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 94ರ ಮುಖ್ಯರಸ್ತೆ ಅಗಲೀಕರಣ ಮಾಡಲಾಯಿತು, ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಜನ ಅಂಗಡಿ, ಮನೆ, ನಿವೇಶನಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ಅವರಿಗೆ ಸರ್ಕಾರದಿಂದ ಬರಬೇಕಾದ ಬಿಡಿಗಾಸು ಪರಿಹಾರವಾಗಲಿ ಅಥವಾ ಸರ್ಕಾರದಿಂದ ನಿವೇಶನವಾಗಲಿ ಇಲ್ಲ.
ಅಧಿಕಾರಿಗಳ ಬೇಜಾವ್ದಾರಿ : ದೇವರು ವರ ಕೊಟ್ಟರು ಪೂಜಾರಿ ವರ ಕೊಟ್ಟಿಲ್ಲ ಎಂಬಂತೆ, ಸಂತ್ರಸ್ತರಿಗೆ ನಿವೇಶನ ನೀಡಲು ಶಾಸಕರು ಅತಿರತ ಪ್ರಯತ್ನ ಮಾಡಿ, ಪಟ್ಟಣದ ಸಮೀಪ ಸುಮಾರು ಕಡೆಗಳಲ್ಲಿ ಸರ್ಕಾರಿ ಜಮೀನು ಗುರುತಿಸಿ, ತಹಶೀಲ್ದಾರ್ರಿಗೆ ಪಟ್ಟಣ ಪಂಚಾಯಿತಿಗೆ ವರ್ಗಾಯಿಸಿ ನಿವೇಶನ ವಿಂಗಡಿಸಿ, ವಿತರಿಸುವಂತೆ ಒತ್ತಾಯಿಸುತ್ತಿದ್ದರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಮ್ಮೆ ಮೇಲೆ ಮಳೆ ಸುರಿದಂತೆ, ತಹಶೀಲ್ದಾರ್ ರೊಂದಿಗೆ ಸೇರಿಸಿ ಸೂಕ್ತ ಕ್ರಮ ವಹಿಸುವಲ್ಲಿ ಬೇಜಾವ್ದಾರಿತನ ತೋರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜಶೇಖರ್, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಗುಡಿಬಂಡೆ ಹೇಳಿಕೆ: ರಸ್ತೆ ಅಗಲೀಕರಣದ ವೇಳೆ ಮನೆ, ಅಂಗಡಿ, ನಿವೇಶನಗಳನ್ನು ಕಳೆದುಕೊಂಡವರಿಗೆ ನಿವೇಶ ನೀಡಲು ಶಾಸಕರ ಸೂಚನೆಯ ಮೆರೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿ ಸ್ಥಳ ಗುರುತಿಸಲಾಗಿದೆ. ಹಕ್ಕು ಪತ್ರಗಳು ಸಿದ್ದವಾದ ತಕ್ಷಣ ವಿತರಿಸಲಾಗುವುದು.
ಇದನ್ನೂ ಓದಿ : ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.