ರಾಸುಗಳಿಗೆ ಲಸಿಕೆ ಹಾಕಿಸದಿದ್ದರೆ ನಷ್ಟ
Team Udayavani, Mar 29, 2021, 2:43 PM IST
ಗೌರಿಬಿದನೂರು: ರಾಸುಗಳಿಗೆ ಕಾಲಕ್ಕೆ ತಕ್ಕಂತೆ ಅಗತ್ಯ ಲಸಿಕೆ ಹಾಕಿಸದಿದ್ದಲ್ಲಿ ನಷ್ಟಅನುಭವಿಸಬೇಕಾಗುತ್ತದೆ ಎಂದು ಪಶು ಆರೋಗ್ಯ ಅಧಿಕಾರಿ ಡಾ.ಮಾರುತಿ ರೆಡ್ಡಿ ಹೇಳಿದರು.
ತಾಲೂಕಿನ ಮಾವಿನಕಾಯಿ ಹಳ್ಳಿಯಲ್ಲಿನಡೆದ ಪಶು ಆರೋಗ್ಯ ತಪಾಸಣೆ ಹಾಗೂ ಲಸಿಕೆ ಮತ್ತು ಪಶು ಆಹಾರದ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಹೈನೋದ್ಯಮ ರೈತನ ಪರ್ಯಾಯ ಕೃಷಿಯಾಗಿದೆ.ಬಯಲು ಸೀಮೆಯಲ್ಲಿ ಅಸಂಖ್ಯಕುಟುಂಬಗಳ ಜೀವನಕ್ಕೆ ಹೈನೋದ್ಯಮಪೂರಕವಾಗಿದೆ. ಆದರೆ, ನಾವು ಸಾಕಿರುವರಾಸುಗಳ ಆರೋಗ್ಯದ ಬಗ್ಗೆ ಜಾಗೃತಿವಹಿಸುವುದು ಅಗತ್ಯ. ಕಾಲಮಾನಕ್ಕೆ ತಕ್ಕಂತೆಲಸಿಕೆ, ಆಹಾರಗಳನ್ನು ನೀಡಿ ಉತ್ತಮರೀತಿಯಲ್ಲಿ ಪೋಷಣೆ ಮಾಡಿದಲ್ಲಿ ಮಾತ್ರರೈತರು ಲಾಭಗಳಿಸಲು ಸಾಧ್ಯ. ಆದ್ದರಿಂದರೈತರು ಪಶು ಇಲಾಖೆಯಿಂದ ಮಾಹಿತಿಪಡೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ರಾಸುಗಳ ಸಾಕಣೆ ಮಾಡಬೇಕು ಎಂದರು.
ಗೊಡ್ರೆಜ್ ಕಂಪನಿಯ ಡಾ.ಮಹೇಶ್,ಗೊಡ್ರೆಜ್ ಕಂಪನಿ ವಿಸ್ತರಣಾಧಿಕಾರಿಕೆ.ಸುಧಾಕರ್ ರೆಡ್ಡಿ ಮತ್ತು ಹಾಲುಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ರೈತರು ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಕೈವಾರ ತಾತಯ್ಯ ಜಯಂತಿ :
ಶಿಡ್ಲಘಟ್ಟ: ಶ್ರೀಯೋಗಿ ನಾರಾಯಣ ತಾತಯ್ಯ ಅವರ 295ನೇ ಜಯಂತಿ ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯದಲ್ಲಿ ನಡೆಯಿತು.
ತಾತಯ್ಯ ಜಯಂತಿ ಅಂಗವಾಗಿ ದೇವಾಲಯದಲ್ಲಿ ತಾತಯ್ಯನವರ ಕೀರ್ತನೆಗಳನ್ನು ಹಾಡುವ ಮೂಲಕ ಭಕ್ತಿಭಾವ ಪ್ರದರ್ಶಿಸಿದರು. ದೇವಾಲಯದಲ್ಲಿ ವಿಶೇಷ ಅಭಿಷೇಕ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಬಲಿಜ ಸಂಘದ ಮುಖಂಡ ಸೋಮಶೇಖರ್, ದೇವರಾಜ್, ನಗರಾಭಿವೃದ್ಧಿಪ್ರಾಧಿಕಾರದ ಮಾಜಿ ಅಧ್ಯಕ್ಷ ರಘು (ಬಳೆ), ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀನಾಥ್,ಕೊಂಡಪ್ಪ ವೇಣು, ಶಿವು, ಶಿಕ್ಷಕ ಸುದರ್ಶನ್,ಮಹೇಶ್, ತಾಲೂಕು ಸರ್ಕಾರಿ ನ್ಯಾಯಬೆಲೆಅಂಗಡಿ ಮಾಲೀಕರ ಸಂಘದ ಮುಖಂಡಬಿ.ಕೆ. ವೇಣು, ರಮೇಶ್, ಟಿ.ಎಸ್. ಬಾಲಿ, ಕುಚ್ಚಣ್ಣನವರ ಅನಂತು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.