ವ್ಯಾಲಿ ನೀರು ಚಿತ್ರಾವತಿ ನದಿಗೆ ಸೇರಿಲ್ಲ
ವದಂತಿಗಳಿಗೆ ಜನ ಆತಂಕಪಡುವುದು ಬೇಡ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಆರ್.ರವೀಂದ್ರನಾಥ್ ಸ್ಪಷ್ಟನೆ
Team Udayavani, Nov 5, 2021, 12:23 PM IST
ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಬ್ಟಾಳ- ನಾಗವಾರ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ಮಳೆ ನೀರಿನ ಜೊತೆಗೆ ಪೆರೇಸಂದ್ರ ಬಳಿಯ ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಸೇರಿದೆ ಎಂಬುದು ಸಂಪೂರ್ಣ ನಿರಾಧಾರವಾಗಿದೆ.
ಇದು ಕೇವಲ ವದಂತಿಯಷ್ಟೇ ಎಂದು ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಆರ್. ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರು ಸೇರಿದೆ ಎಂಬ ಕುರಿತು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಷಯ ಹರಿದಾಡುತ್ತಿದ್ದು, ಈ ವದಂತಿಗಳ ಕುರಿತು ಅವರು ಈ ಸ್ಪಷ್ಟನೆ ನೀಡಿದ್ದಾರೆ.
62 ಕೆರೆಗೆ ನೀರು ಹರಿದಿದೆ: ಬೆಂಗಳೂರು ನಗರದ ಹೆಬ್ಟಾಳ- ನಾಗವಾರ ವ್ಯಾಲಿಯ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕದಿಂದ ಎರಡು ಹಂತಗಳಲ್ಲಿ ಸಂಸ್ಕರಿಸಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿನ 65 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯು ಪ್ರಗತಿಯಲ್ಲಿದೆ. ಈ ಯೋಜನೆಯಡಿ ಈವರೆಗೂ ಮೂರೂ ಜಿಲ್ಲೆಯ 65 ಕೆರೆಗಳ ಪೈಕಿ 62 ಕೆರೆಗಳಿಗೆ ನೀರನ್ನು ಹರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:- ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು : ಕಂಬನಿ ಮಿಡಿದ ಸೂರ್ಯ
ಮಳೆ ನೀರಿನಿಂದ ಕೋಡಿ ಹರಿದಿದೆ: ಈ ಯೋಜನೆಯ ಕ್ಲಸ್ಟರ್ 9ರಲ್ಲಿ ರಾಮಸಮುದ್ರ ಕೆರೆಯೂ ಸೇರಿದೆ. ಆದರೆ, ಈ ಕೆರೆಗೆ ಈವರೆಗೂ ಹೆಬ್ಟಾಳ-ನಾಗವಾರ ವ್ಯಾಲಿ ಯೋಜನೆಯ ನೀರನ್ನು ಹರಿಸಿಲ್ಲ. ರಾಮಸಮುದ್ರ ಕೆರೆಗೆ ಹೆಚ್ಚಿನ ಜಲಾನಯನ ಪ್ರದೇಶವಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೆರೆಯು ಕೋಡಿ ಸಹಾ ಹರಿದಿರುತ್ತದೆ ಎಂದು ಹೇಳಿದರು.
ವ್ಯಾಲಿ ನೀರು ಹರಿದಿಲ್ಲ: ಪ್ರಸ್ತುತ ಈ ಕೆರೆಯ ಕೋಡಿ ಹರಿದು ಹೆಚ್ಚುವರಿ ನೀರು ಚಿತ್ರಾವತಿ ನದಿಗೆ ಹರಿಯುತ್ತಿದೆ. ರಾಮಸಮುದ್ರ ಕೆರೆಯು ಎಚ್.ಎನ್. ವ್ಯಾಲಿ ಯೋಜನೆಯಡಿ ಸೇರಿದೆಯಾದರೂ ಈವರೆಗೆ ಯೋಜನೆಯ ನೀರು ಸದರಿ ಕೆರೆಗೆ ಹರಿದಿಲ್ಲ, ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು.
ಅಕ್ಟೋಬರ್‌ನಲ್ಲೇ ಸ್ಥಗಿತ: ಎಚ್.ಎನ್ ವ್ಯಾಲಿ ಯೋಜನೆಯು ನಿಯಂತ್ರಿತ ಪಂಪಿಂಗ್ ವ್ಯವಸ್ಥೆಯಾಗಿರುತ್ತದೆ. 2021ರ ಅಕ್ಟೋಬರ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದ್ದರಿಂದ ಎಚ್.ಎನ್. ವ್ಯಾಲಿ ಯೋಜನೆಯಡಿ ಬೆಂಗಳೂರಿನಿಂದ ನೀರು ಪಂಪಿಂಗ್ ಮಾಡುವುದನ್ನು ಅಕ್ಟೋಬರ್ ತಿಂಗಳಿನಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಕಂದವಾರ ಕೆರೆಯಿಂದ ಕ್ಲಸ್ಟರ್ 9ರಲ್ಲಿ ಬರುವ ರಾಮಸಮುದ್ರ ಕೆರೆಯೂ ಒಳಗೊಂಡಂತೆ ಎಲ್ಲಾ ಕೆರೆಗಳಿಗೂ ನೀರು ಹರಿಸುವುದನ್ನು ಸಹ ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಆದ್ದರಿಂದ ಎಚ್-ಎನ್ ವ್ಯಾಲಿ ಯೋಜನೆಯಿಂದ ರಾಮಸಮುದ್ರ ಕೆರೆ ಮತ್ತು ಆ ಮೂಲಕ ಚಿತ್ರಾವತಿ ನದಿಗೆ ಈವರೆಗೆ ಯೋಜನೆಯ ನೀರು ಹರಿದಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ವದಂತಿಗಳಂತೆ ಹೆಬ್ಟಾಳ -ನಾಗವಾರ ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ರಾಮಸಮುದ್ರ ಕೆರೆ ಮತ್ತು ಚಿತ್ರಾವತಿ ನದಿಗೆ ಸೇರಿರುವುದಿಲ್ಲ. ಈ ವದಂತಿಗಳು ಸಂಪೂರ್ಣ ನಿರಾಧಾರವಾಗಿರುತ್ತವೆ ಎಂದು ಸ್ಪಷ್ಟಪಡಿಸಿದರು.
ನಿರಂತರ ಪರೀಕ್ಷೆಗೆ ಒಳಪಡಿಸುತ್ತೇವೆ-
ಬಿ.ಡಬ್ಲೂ.ಎಸ್.ಎಸ್.ಬಿ ಅವರು ಎಚ್.ಎನ್ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ನೀಡುತ್ತಿದ್ದು, ಈ ನೀರನ್ನು ನಿರಂತರ ಹಾಗೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕುರಿತ ಎಲ್ಲಾ ಫಲಿತಾಂಶದ ವರದಿಗಳು ಸರ್ಕಾರವು ನಿಗದಿ ಪಡಿಸಿರುವ ಮಾನದಂಡಗಳಪರಿಮಿತಿಯಲ್ಲಿರುತ್ತವೆ. ಹಾಗಾಗಿ ಸಾರ್ವಜನಿಕರುಈ ಕುರಿತು ಯಾವುದೇ ವದಂತಿಗಳಿಗೆಕಿವಿಗೊಡಬಾರದು ಹಾಗೂ ಆತಂಕ ಪಡಬಾರದುಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.