ಮನೆಬಾಗಿಲಿಗೆ ಸೌಲಭ್ಯ ತಲುಪಿಸಲು ಗ್ರಾಮ ವಾಸ್ತವ್ಯ
Team Udayavani, Feb 22, 2022, 2:18 PM IST
ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಡೀಸಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಆಯೋಜಿಸಿ, ಸಚಿವ ಡಾ.ಕೆ.ಸುಧಾಕರ್, ಡೀಸಿ ಆರ್.ಲತಾ,ಜಿಪಂ ಸಿಇಒ ಪಿ.ಶಿವಶಂಕರ್ ಸಹಿತ ಜಿಲ್ಲಾಮಟ್ಟದ ಅಧಿಕಾರಿಗಳು, ಪ್ರತಿನಿಧಿಗಳು ಗ್ರಾಮ ವಾಸ್ತವ್ಯ ಮಾಡಿದರು.
ಸಚಿವ ಡಾ.ಕೆ.ಸುಧಾಕರ್ ಅವರು ಹಾಡುಹಾಡುವ ಮೂಲಕ ಗ್ರಾಮಸ್ಥರನ್ನು ರಂಜಿಸಿದರಲ್ಲದೆ, ಹಾಲು ಉತ್ಪಾದಕರ ಸಹಕಾರ ಸಂಘದಕಚೇರಿಗೆ ಮತ್ತು ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರಆಹವಾಲು ಆಲಿಸಿದರು. ಇದಕ್ಕೆ ಮುನ್ನ ಅಧಿಕಾರಿಗಳನ್ನು ಯೋಗಾಭ್ಯಾಸ ಮಾಡಿದ ಸಚಿವರು, ತಮ್ಮದಿನಚರಿಯನ್ನು ಆರಂಭಿಸಿದರು.
ಸರ್ಕಾರದಿಂದ ಜನಪರ ಯೋಜನೆ ಜಾರಿ:ಸರ್ಕಾರ ಜನಪರ ಕಲ್ಯಾಣಕ್ಕಾಗಿ ಅನೇಕ ಯೋಜನೆಜಾರಿಗೊಳಿಸುತ್ತಿದ್ದು, ಅದನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಪ್ರಾಮಾಣಿಕವಾಗಿಕಾರ್ಯನಿರ್ವಹಿಸಬೇಕು. ಜನರು ಸರ್ಕಾರಗಳ ಯೋಜನೆಗಳ ಕುರಿತು ಮಾಹಿತಿ ಅರಿತುಕೊಂಡು ಸೌಲಭ್ಯ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಜಾಗೃತಿ ನಾಟಕ ವೀಕ್ಷಣೆ: ತಾಲೂಕಿನ ಹೊಸಹುಡ್ಯ ಗ್ರಾಮದ ಡೀಸಿ ನಡೆ ಹಳ್ಳಿಕಡೆ ಪ್ರಯುಕ್ತ ಹೆಣ್ಣೂರ್ ಕದಿರೇನಹಳ್ಳಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದಅಟಲ್ ಭೂ ಜಲ ಯೋಜನೆಯ ಜಾಗೃತಿ ನಾಟಕವನ್ನು ಸಚಿವ ಡಾ.ಕೆ.ಸುಧಾಕರ್ ವೀಕ್ಷಿಸಿದರು.
ತುಮಕೂರಿನ ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ಕಲಾವಿದರು ನೀರಿನ ಸಂರಕ್ಷಣೆ,ವನಸಂರಕ್ಷಣೆ, ಇಂಗುಗುಂಡಿ ನಿರ್ಮಾಣ, ಮಳೆಕೊಯ್ಲು ಪದ್ಧತಿ, ಚೆಕ್ ಡ್ಯಾಂ ನಿರ್ಮಾಣ, ಮಿತನೀರಿನ ಬಳಕೆ, ಹನಿ ನೀರಾವರಿ, ಪರಿಸರ ಸಂರಕ್ಷಣೆಕುರಿತು ಮತ್ತು ಅಟಲ್ ಭೂ ಯೋಜನೆ ಕುರಿತು ನಾಟಕ ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು.
ಕಲಾವಿದರಾದ ಕಾಂತರಾಜು ಕೌತಮಾರನಹಳ್ಳಿ,ವಿಷ್ಣು ಯುವ ಸಾಮ್ರಾಟ್, ಶ್ರೀಕಾಂತ್ ರೆಡ್ಡಿ,ಸ್ನೇಹಿತ್, ಯಶವಂತ್ ಮೂರ್ತಿ ಪಾವಗಡ ಇವರನಟನೆ ಮನಮುಟ್ಟು ವಂತಿತ್ತು. ಈ ತಂಡ ಕರ್ನಾಟಕದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಪ್ರದರ್ಶನಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಸ್ಥಳೀಯ ಸಮಸ್ಯೆಗಳನ್ನು ಸಚಿವರು ಆಲಿಸಿ, ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆಸ್ಥಳದಲ್ಲೇ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನುನೀಡಿದರು.
ಡೀಸಿ ಆರ್.ಲತಾ, ಜಿಪಂ ಸಿಇಒಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಜಿ.ಕೆ.ಮಿಥುನ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆರೋಗ್ಯಅಧಿಕಾರಿ ಡಾ.ಇಂದಿರಾ ಆರ್ ಕಬಾಡೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.