ಕಾನೂನು ಜ್ಞಾನ ಎಲ್ಲರಿಗೂ ಅಗತ್ಯ: ನ್ಯಾ| ರವಿಕುಮಾರ
Team Udayavani, Jul 20, 2019, 5:30 PM IST
ಚಿಕ್ಕಜಾಜೂರು: ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತರಿಗೆ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ವಿ. ರವಿಕುಮಾರ ಉದ್ಘಾಟಿಸಿದರು.
ಚಿಕ್ಕಜಾಜೂರು: ಕಾನೂನು ಪ್ರತಿಯೊಬ್ಬರಿಗೂ ಅತ್ಯವಶ್ಯ. ಸಂತ್ರಸ್ತರಿಗೆ ಪರಿಹಾರ ಮತ್ತು ದೂರು ಪ್ರಾಧಿಕಾರದ ಮಹತ್ವ ತಿಳಿಸಲು ಇಂತಹ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೊಳಲ್ಕೆರೆ ಸಿವಿಲ್ ನ್ಯಾಯಾಧಿಧೀಶ ವಿ. ರವಿಕುಮಾರ ತಿಳಿಸಿದರು.
ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಇಲ್ಲಿನ ಎಸ್‌ಜೆಎಂ ಪಪೂ ಮತ್ತು ಸರ್ಕಾರಿ ಪಪೂ ಕಾಲೇಜುಗಳ ಸಹಯೋಗದಲ್ಲಿ ನಡೆದ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೂರು ಪ್ರಾಧಿಕಾರ ಯಾವುದೇ ಹಲ್ಲೆ, ಕಾನೂನು ಸಂಘರ್ಷ, ಕೌಟುಂಬಿಕ ಕಲಹ, ರಸ್ತೆ ಅಪಘಾತ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿಗಳಿಂದ ದೂರು ಪಡೆದು ಅವರಿಗೆ ನೆರವಾಗಬೇಕು. ಒಂದು ವೇಳೆ ಸಂತ್ರಸ್ತ ವ್ಯಕ್ತಿಗೆ ನ್ಯಾಯ ದೊರೆಯದೇ ಇದ್ದಾಗ, ಸಿಆರ್‌ಪಿಸಿ 1973ರಂತೆ ಸೆಕ್ಷನ್ 357ರ ಪ್ರಕಾರ ಮಾನಸಿಕ ಹಾಗೂ ದೈಹಿಕ ಸಂತ್ರಸ್ತರಿಗೆ ವೈದ್ಯಕೀಯ ವೆಚ್ಚ ಹಾಗೂ ಮುಂದಿನ ಜೀವನಕ್ಕೆ ಬೇಕಾದ ಅಗತ್ಯ ಸೌಕರ್ಯವನ್ನು ಒದಗಿಸುವ ವ್ಯವಸ್ಥೆ ಇದೆ ಎಂದರು.
ವಕೀಲ ಆರ್. ಹನುಮಂತಪ್ಪ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದರು. ಪುರುಷ ಹಾಗೂ ಮಹಿಳಾ ಕೈದಿಗಳಿಗೆ ಸೂಕ್ತ ರಕ್ಷಣೆೆ ಜತೆ, ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅಮಾನವೀಯ ಘಟನೆ, ಕಾರ್ಯಗತ ವಿಳಂಬ, ಕಾನೂನು ಸಮ್ಮತವಲ್ಲದ ಬಂಧನ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ವಿಳಂಬ ನೀತಿಯನ್ನು ಅನುಸರಿಸುವಂತಿಲ್ಲ. ಪೊಲೀಸ್ ಇಲಾಖೆಯಿಂದ ಸೂಕ್ತ ನ್ಯಾಯ ಸಿಗದಿದ್ದರೆ, ಪ್ರಾದೇಶಿಕ ಪ್ರಾಧಿಕಾರ, ಜಿಲ್ಲಾ ಪ್ರಾಧಿಕಾರ ಹಾಗೂ ರಾಜ್ಯ ಪ್ರಾಧಿಕಾರಕ್ಕೆ ದೂರು ನೀಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ತಾಲೂಕು ವಕೀಲರ ಸಂಗದ ಉಪಾಧ್ಯಕ್ಷ ಆರ್. ಜಗದೀಶ್ ವಾಹನ ಚಾಲನೆ ಮತ್ತು ಮೋಟಾರ್ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಈ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಎನ್.ಎ. ನಾಗೇಶ್, ಜಿ.ಪಿ. ಪ್ರದೀಪ್ ಕುಮಾರ್, ಜಿ.ಬಿ. ಬಸವರಾಜ್, ಸಾಕಮ್ಮ, ಪ್ರಾಚಾರ್ಯ ನಾಗರಾಜ್, ನಿಸ್ಸಾರ್ ಅಹಮ್ಮದ್, ಎಎಸ್‌ಐ ರವೀಂದ್ರ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಎಸ್‌ಜೆಎಂ ಹಾಗೂ ಸರ್ಕಾರಿ ಪಪೂ ಕಾಲೇಜುಗಳ ಉಪನ್ಯಾಸಕರು ಹಾಗೂ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.