ಅತಿವೃಷ್ಟಿ; ಕಾಫಿನಾಡಲ್ಲಿ 240 ಕೋಟಿ ರೂ. ನಷ್ಟ

ಮೂಡಿಗೆರೆ 140, ಚಿಕ್ಕಮಗಳೂರು 28, ಎನ್‌.ಆರ್‌. ಪುರ 16, ಶೃಂಗೇರಿ 20, ಕೊಪ್ಪದಲ್ಲಿ 35 ಕೋಟಿ ರೂ. ಹಾನಿ

Team Udayavani, Aug 16, 2019, 1:23 PM IST

16-Agust-28

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 240 ಕೋಟಿ ರೂ. ನಷ್ಟವುಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ತಾತ್ಕಾಲಿಕವಾಗಿ ವರದಿ ಸಿದ್ಧಪಡಿಸಲಾಗಿದೆ. 240 ಕೋಟಿ ರೂ. ನಷ್ಟದ ಪೈಕಿ ಮೂಡಿಗೆರೆ ತಾಲೂಕಿನಲ್ಲಿಯೇ 140 ಕೋಟಿ ರೂ. ನಷ್ಟವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 28.32 ಕೋಟಿ ರೂ., ನರಸಿಂಹರಾಜಪುರ ತಾಲೂಕಿನಲ್ಲಿ 16, ಶೃಂಗೇರಿಯಲ್ಲಿ 20.47 ಹಾಗೂ ಕೊಪ್ಪ ತಾಲೂಕಿನಲ್ಲಿ 35 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಹೇಳಿದರು.

ಮಳೆಯಿಂದ ಆಗಿರುವ ಹಾನಿಯ ಕುರಿತು ಇನ್ನೂ ಸಮೀಕ್ಷೆ ಮಾಡಬೇಕಿದೆ. ಈಗ ಮಳೆಯಿಂದ ತೊಂದರೆ ಅನುಭವಿಸಿರುವ ಜನರಿಗೆ ಸೂಕ್ತ ನೆರವು ನೀಡುವ ಕೆಲಸ ಆಗುತ್ತಿದೆ. ಶೀಘ್ರದಲ್ಲಿಯೇ ಎಲ್ಲ ಇಲಾಖೆಗಳು ಸಮೀಕ್ಷೆ ನಡೆಸಿ ಅತಿವೃಷ್ಟಿಯಿಂದ ಆಗಿರುವ ಸರಿಯಾದ ನಷ್ಟದ ವರದಿ ಸಿದ್ಧಪಡಿಸಲಿದ್ದಾರೆ ಎಂದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 1,454 ಮನೆಗಳಿಗೆ ಹಾನಿಯಾಗಿವೆ. ಈ ಪೈಕಿ 319 ಕಚ್ಚಾ ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 1,820 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 72 ಪಕ್ಕಾ ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 243 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಪೈಕಿ ಮೂಡಿಗೆರೆ ತಾಲೂಕು ಒಂದರಲ್ಲೇ 917 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾದ್ಯಂತ 950 ಕಿ.ಮೀ. ರಸ್ತೆಗಳಿಗೆ ಹಾನಿಯಾಗಿದ್ದು, 188.38 ಕೋಟಿ ರೂ. ನಷ್ಟವಾಗಿದೆ. 300 ಕಡೆ ಭೂ ಕುಸಿತವಾಗಿದೆ. 159 ಸೇತುವೆಗಳಿಗೆ ಹಾನಿಯಾಗಿ 44.81 ಕೋಟಿ ರೂ., 34 ಕೆರೆ, ಕಾಲುವೆಗಳಿಗೆ ಹಾನಿಯಾಗಿ 3.8 ಕೋಟಿ ರೂ., ವಿದ್ಯುತ್‌ ಕಂಬಗಳು, ಪರಿವರ್ತಕಗಳಿಗೆ ಹಾನಿಯಾಗಿ 1.91 ಕೋಟಿ ರೂ., ನಷ್ಟವಾಗಿದೆ. ಈಗಲೂ ಚಿಕ್ಕಮಗಳೂರು ತಾಲೂಕಿನ 2, ಮೂಡಿಗೆರೆ ತಾಲೂಕಿನಲ್ಲಿ 31, ನರಸಿಂಹರಾಜಪುರ 7, ಕೊಪ್ಪ 1 ಹಾಗೂ ಶೃಂಗೇರಿ ತಾಲೂಕಿನ 4 ಗ್ರಾಮಗಳು ಸೇರಿ 45 ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಈಗಲೂ ಇಲ್ಲ ಎಂದು ಹೇಳಿದರು.

ಜಿಲ್ಲಾದ್ಯಂತ 1,565 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1.29 ಕೋಟಿ ರೂ. ನಷ್ಟವಾಗಿದೆ. ಬಿಎಸ್‌ಎನ್‌ಎಲ್ ಇಲಾಖೆಗೆ 50.50 ಲಕ್ಷ ರೂ. ನಷ್ಟವಾಗಿದೆ ಎಂದರು.

ಶೇ.310 ಹೆಚ್ಚು: ಜಿಲ್ಲಾದ್ಯಂತ ವಾರ್ಷಿಕ ವಾಡಿಕೆ ಮಳೆ 1,757 ಮಿ.ಮೀ. ಆಗಬೇಕಿತ್ತು. ಆ.14ರ ವರೆಗೆ 1,217 ಮಿ.ಮೀ. ಮಳೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ 199 ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಆ.14ರ ವರೆಗೆ 631 ಮಿ.ಮೀ. ಮಳೆಯಾಗಿದ್ದು, ಶೇ.310ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.

ಮಳೆಯಿಂದಾಗಿ ಈವರೆಗೂ ಜಿಲ್ಲೆಯಲ್ಲಿ 9 ಜನ ಸಾವಪ್ಪಿದ್ದಾರೆ. ಈ ಪೈಕಿ 7 ಕುಟುಂಬಗಳಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರ ನೀಡಲಾಗಿದೆ. 10 ಜಾನುವಾರುಗಳು ಸಾವನ್ನಪ್ಪಿದ್ದು, ಅದಕ್ಕೂ ಪರಿಹಾರ ನೀಡಲಾಗಿದೆ. ಮೂಡಿಗೆರೆ ತಾಲೂಕಿನ ಮದುಗುಂಡಿ ಗ್ರಾಮದ ನಾಗಪ್ಪಗೌಡ ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಈವರೆಗೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಗ್ರಾಮದಲ್ಲಿ 500 ಅಡಿಗೂ ಹೆಚ್ಚು ಕೆಸರು ತುಂಬಿಕೊಂಡಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಆದರೂ, ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ ಎಂದರು.

ಮನೆಯಲ್ಲಿದ್ದ ಪದಾರ್ಥಗಳನ್ನು ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್‌ ಕಾನೂನು ರೀತಿ 3,800 ರೂ. ಕೊಡಬೇಕಿತ್ತು. ಅದರಂತೆ, 873 ಕುಟುಂಬಗಳಿಗೆ ಈಗಾಗಲೇ ಚೆಕ್‌ ವಿತರಿಸಲಾಗಿದೆ. ರಾಜ್ಯ ಸರ್ಕಾರದಿಂದ ಇಂತಹ ಕುಟುಂಬಗಳಿಗೆ 6,200 ರೂ. ನೀಡುವುದಾಗಿ ಆದೇಶ ಬಂದಿದೆ. ಉಳಿದ ಹಣವನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಲೂ 26 ನಿರಾಶ್ರಿತರ ಕೇಂದ್ರಗಳು ನಡೆಯುತ್ತಿದೆ. ಈ ಕೇಂದ್ರಗಳಲ್ಲಿ 1,631 ಜನರಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯುತ್‌ ಸಂಪರ್ಕವಿಲ್ಲದ ಕೇಂದ್ರಗಳಲ್ಲಿ ಜನರೇಟರ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಅತಿವೃಷ್ಟಿಯಿಂದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಯೋಧರು, ಪೊಲೀಸ್‌, ಸಾರ್ವಜನಿಕರು, ಎಲ್ಲ ಇಲಾಖೆಗಳ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಅದರಿಂದಾಗಿಯೇ ಜಿಲ್ಲೆಯಲ್ಲಿ ಹೆಚ್ಚಿನ ಸಾವು- ನೋವುಗಳು ತಪ್ಪಿವೆ. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್‌ ಸಿಇಒ ಎಸ್‌.ಅಶ್ವಥಿ, ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.