ದೇಶದ ಏಳಿಗೆಗೆ ಪ್ರತಿಭೆ ಬಳಕೆಯಾಗಲಿ

ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅಭಿಮತ

Team Udayavani, Jul 28, 2019, 12:30 PM IST

28-July-27

ಚಿಕ್ಕಮಗಳೂರು: ನಗರದಲ್ಲಿ ನಡೆದ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಚಿಕ್ಕಮಗಳೂರು: ಪ್ರತಿಭೆ ಅಧ್ಯಯನಮುಖೀ- ಸಮಾಜ ಮುಖೀಯಾಗಬೇಕೆ ಹೊರತು ಸ್ವಾರ್ಥ ಮುಖೀಯಾಗಬಾರದು. ಸಮಾಜ-ಸಂಸ್ಕೃತಿ-ದೇಶದ ಏಳಿಗೆಗಾಗಿ ಪ್ರತಿಭೆ ಬಳಕೆಯಾದರೆ ಮೆರಗು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅಭಿಪ್ರಾಯಿಸಿದರು. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪ್ರಾಚಾರ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಭೆ ಪ್ರದರ್ಶನಕ್ಕಲ್ಲದೆ ನಿದರ್ಶನವಾದರೆ ಸೊಗಸು. ಪ್ರತಿಯೊಬ್ಬರಲ್ಲೂ ಪ್ರತಿಭೆಯೊಂದಿರಬೇಕು. ಅಭ್ಯಾಸ-ಗುರು-ಸೇವೆ ಇರಬೇಕು ಎಂಬ ಕವಿವಾಣಿಗೆ ಸ್ವಲ್ಪ ಜಾಹೀರಾತೂ ಬೇಕು ಎಂಬುದನ್ನು ಸೇರಿಸಿಕೊಳ್ಳಬೇಕು. ಜಾಹೀರಾತಿಲ್ಲದ ಬದುಕು ಕತ್ತಲೆಯಲ್ಲಿ ಹುಡುಗಿಗೆ ಕಣ್ಣು ಹೊಡೆದಂತಾಗುವುದೆಂದು ತಿಳಿಸಿದರು.

ಬಾಗುವುದರಲ್ಲಿ ಇರುವಷ್ಟು ಸಾಮರ್ಥ್ಯ ಬೀಗುವುದರಲ್ಲಿಲ್ಲ. ತೆನೆಬಿಟ್ಟ ಭತ್ತ-ಗೊನೆ ಬಿಟ್ಟ ಬಾಳೆ-ಫಲಬಿಟ್ಟ ಮಾವು ಬಾಗುತ್ತದೆ. ಏನೂ ಇಲ್ಲದ ನಾವು ಬೀಗಬಾರದೆಂಬುದು ಪ್ರಕೃತಿಯ ಸಂದೇಶ. ಅಹಂಕಾರ ಕಡಿಮೆ ಮಾಡಿಕೊಳ್ಳಬೇಕು. ಪ್ರತಿಭೆ ವಿದ್ಯಾರ್ಥಿಗಳ ಸ್ಥಾನ-ಆಸ್ಥಾನಕ್ಕಾಗಿ ಸೀಮಿತವಾಗಬಾರದು. ಸಮಾಜದ ಅಭ್ಯುದಯಕ್ಕೆ ನಮ್ಮ ಪ್ರತಿಭೆ ಬಳಕೆಯಾಗುವಂತಾದರೆ ಅದರಲ್ಲಿ ಸಾರ್ಥಕತೆ ಇರುತ್ತದೆ. ಬೆಂಕಿ ಆರಿಸಬೇಕು, ದೀಪವನ್ನಲ್ಲ. ದೀಪ ಹಚ್ಚಬೇಕು ಬೆಂಕಿ ಹಚ್ಚಬಾರದು. ಜೀವನದ ಅಧ್ಯಯನ-ಅನುಭವಗಳು ಪ್ರತಿಭೆಗೆ ಪೂರಕ. ಸ್ವಯಂ ಅಭಿಜಾತ ಪ್ರತಿಭೆಗಳಿಗೆ ತರಬೇತಿ ಕಾಂತಿ ನೀಡುತ್ತದೆ ಎಂದರ‌ು.

ವಿದ್ಯೆಯಿಂದ ವಿನಯವಂತಿಕೆ ಕಲಿಯದಿದ್ದರೆ ಪ್ರಯೋಜವಿಲ್ಲ. ಸೌಜನ್ಯವನ್ನು ಸಂಸ್ಕಾರಯುತವಾಗಿ ಪಡೆಯಬೇಕು. ಸುಂದರವಾಗಿ ಬದುಕುವುದೇ ಮಕ್ಕಳು ತಂದೆ-ತಾಯಿ ಹಾಗೂ ಗುರುಗಳಿಗೆ ನೀಡಬಹುದಾದ ಬಹುದೊಡ್ಡ ಕಾಣಿಕೆ. ಹಾಸಿಗೆ ಇದ್ದಷ್ಟು ಕಾಲುಚಾಚು ಎಂದರೆ ಟೇಬಲ್ ಇದ್ದಷ್ಟು ಕೈ ಚಾಚುತ್ತೇನೆ ಎನ್ನಬಾರದು. ದೇಶ ಮತ್ತು ಸಂಸ್ಕೃತಿಯ ಚಿಂತನೆ ಜೀವನಪರ್ಯಂತ ನೆನಪಿನಲ್ಲಿರಬೇಕು ಎಂದು ತಿಳಿಹೇಳಿದರು.

ನಿವೃತ್ತಿ ಅಂಚಿನಲ್ಲಿರುವ ಡಿಡಿಪಿಯು ಡಿ.ಎಸ್‌.ದೇವರಾಜು, ವರ್ಗಾವಣೆಗೊಂಡ ಎಫ್‌ಡಿಎ ಕುಮಾರ್‌, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ, ಉಪನ್ಯಾಸಕ ದೇವೇಂದ್ರ, ಜಿಲ್ಲಾ ನಿವೃತ್ತ ಪ್ರಾಚಾರ್ಯರಾದ ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್‌.ವಿ.ದಯಾನಂದ, ಬೇಗಾರಿನ ಸರ್ವಮಂಗಳಾ, ಬೀರೂರಿನ ಯಶೋಧಮ್ಮ, ಕಡೂರಿನ ಲಲಿತಮ್ಮ, ದೇವನೂರಿನ ಪರಮೇಶ್ವರಪ್ಪ, ಬುಕ್ಕಾಂಬುದಿಯ ಎಚ್.ನಾಗರಾಜಪ್ಪ ಮತ್ತು ಬಣಕಲ್ ಪ.ಪೂ.ಕಾಲೇಜಿನ ಜಮ್‌ಶೀದ್‌ ಅಹಮ್ಮದ್‌ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಡಿಡಿಪಿಯು ಡಿ.ಎಸ್‌.ದೇವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 19ತಿಂಗಳಿನಿಂದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಎಲ್ಲ ಪ್ರಾಂಶುಪಾಲರು ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ಜಿಲ್ಲೆಯಲ್ಲಿ ಅತ್ಯುತ್ತಮ ಸಂಪನ್ಮೂಲ ಶಿಕ್ಷಕರಿದ್ದಾರೆ. ವಿಶೇಷವಾಗಿ ಫಲಿತಾಂಶದತ್ತ ಗಮನಕೊಡುವುದು ಡಿಡಿಪಿಯು ಸ್ಥಾನದ ದೊಡ್ಡಹೊಣೆ. ಎಲ್ಲರ ಸಹಕಾರದಿಂದ ಜಿಲ್ಲೆ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಬಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಹೊಂದುವಂತಾಗಲಿ ಎಂದು ಆಶಿಸಿದರು.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆ ಮತ್ತು ತಾಲೂಕಿಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ, ಪ್ರಶಸ್ತಿ ಪತ್ರದೊಂದಿಗೆ ಕಣ್ಣನ್‌ ಅಭಿನಂದಿಸಿದರು.

ಜಿಲ್ಲಾ ಪ.ಪೂ.ಕಾ.ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ.ವೈ.ಎ.ಸುರೇಶ್‌ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜಿ.ಸತೀಶ್‌ ಶಾಸ್ತ್ರಿ ಪ್ರತಿಭಾವಂತರನ್ನು, ಸಹಕಾರ್ಯದರ್ಶಿ ಸೋಮಶೇಖರ್‌ ಸನ್ಮಾನಿತರನ್ನು ಪರಿಚಯಿಸಿದರು. ಖಜಾಂಚಿ ಎಂ.ಬಿ.ಜಯಶ್ರೀ ವಂದಿಸಿ, ಕಳಸಾಪುರ ಸರ್ಕಾರಿ ಪ.ಪೂ.ಕಾಲೇಜು ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್‌ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಜಯಪ್ಪ, ಸಹಕಾರ್ಯದರ್ಶಿ ವಿಜಯಣ್ಣ, ರಾಜ್ಯಸಂಘದ ಜಿಲ್ಲಾ ಪ್ರತಿನಿಧಿ ಟಿ.ಎಂ.ರುದ್ರಮುನಿ ವೇದಿಕೆಯಲ್ಲಿದ್ದರು.

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.